ಭೂತಪಾತ್ರಧಾರಿ ಏನು ಮಾಡಿದ್ರು ಗೊತ್ತಾ?!

ಭೂತ ನರ್ತನ ಮಾಡುತ್ತಿರುವ ಭೂತ ಪಾತ್ರಧಾರಿಯೊಬ್ಬರು ಕ್ಯಾಮರಕ್ಕೆ ಹಾನಿಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಮೇರ್ಲಪದವಿನಲ್ಲಿ ಈ ಘಟನೆ ನಡೆದಿದ್ದು, ರಾಹುಗುಳಿಗ ನೇಮದಲ್ಲಿ ಭೂತ ಪಾತ್ರಧಾರಿ ಕ್ಯಾಮರಾವನ್ನು ಕಂಡು ಆಕ್ರೋಶದಿಂದ ಕ್ಯಾಮರಾಕ್ಕೆ ಹಾನಿ ಮಾಡಿದ್ದಾರೆ. ಇನ್ನು ಭೂತ ಪಾತ್ರಧಾರಿ ಕ್ಯಾಮರಾಗೆ ಹಲ್ಲೆ ಮಾಡಿದ್ದು ದಾಖಲಾಗಿದ್ದು ಈ ವಿಡಿಯೋ ಸಖತ್​ ವೈರಲ್ ಆಗಿದೆ.


ಇನ್ನು ಈ ಭೂತ ನರ್ತನವನ್ನು ಶೂಟಿಂಗ್ ಮಾಡಲು ಅನುಮತಿಯನ್ನು ಪಡೆಯಲಾಗಿದ್ದರೂ ಭೂತ ಪಾತ್ರಧಾರಿ ಈ ರೀತಿ ಮಾಡಿರುವುದು ಸಾರ್ವಜನಿಕರ ಆಕ್ರೋಶ ಕ್ಕೆ ಕಾರಣವಾಗಿದೆ. ಕ್ಯಾಮರಕ್ಕೆ ಸುಮಾರು ಹತ್ತು ಸಾವಿರದವರೆಗೆ ನಷ್ಟವು ಉಂಟಾಗಿದೆ. ದೈವಸ್ಥಾನದ ಅನುಮತಿ ಮೇರೆಗೆ ಭೂತಕೋಲದ ಚಿತ್ರೀಕರಣ ಮಾಡಲಾಗಿತ್ತು. ಆದ್ರೆ ಏಕಾಏಕಿ ಭೂತ ಪಾತ್ರಧಾರಿ ಕ್ಯಾಮಾರದ ಮೇಲೆ ದಾಳಿ ಮಾಡಿರುವುದು ಸರಿಯಲ್ಲ ಅನ್ನೋ ಮಾತುಗಳು ಕೇಳಿ ಬಂದಿದೆ.

 

ಇನ್ನು ದೈವಕ್ಕೆ ದರ್ಶನ ಬಂದ ವೇಳೆ ಅದರ ಪಾತ್ರಧಾರಿ ಮಾಡಿದ ಕೃತ್ಯ ದೈವ ಪ್ರೇರಣೆಯಿಂದ ನಡೆದಿರೋದು ಅಂತ ಹಲವರು ವಾದಿಸಿದ್ರೆ, ಇನ್ನೂ ಅನೇಕರು ಇದು ಸರಿಯಲ್ಲ ಅಂತಿದ್ದಾರೆ. ಒಟ್ಟಿನಲ್ಲಿ ಕ್ಯಾಮರ ಮೇಲೆ ನಡೆದ ಹಲ್ಲೆ ಸಾಕಷ್ಟು ಟೀಕೆಗೆ ಗುರಿಯಾಗಿದೆ.