ಬೀದರ್​ನಲ್ಲಿ ಪ್ರತಿಭಟನೆ ನಿಯಂತ್ರಿಸಲು ಲಾಠಿ ಪ್ರಯೋಗಿಸಿದ ಖಾಕಿ ಪಡೆ

ವಿಜಯಪುರ ದಾನಮ್ಮಳ ಪ್ರಕರಣ ಹಾಗೂ ಭೀಮಾ ಕೋರೆಗಾಂವ್ ಘಟನೆ ಹಿನ್ನಲೆಯಲ್ಲಿ ಇಂದು ದಲಿತ ಪರ ಸಂಘಟನೆಗಳು ಕರೆ ಕೊಟ್ಟಿದ್ದ ಬೀದರ್ ಬಂದ್ ನಲ್ಲಿ ಕಿಡಿಗೇಡಿಗಳು 8 ಕ್ಕೂ ಹೆಚ್ಚು ಕಾರುಗಳನ್ನು ಪುಡಿ-ಪುಡಿ ಮಾಡಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿ ನಿಯಂತ್ರಿಸುವಂತಾಯಿತು.

 ಎರಡು ಪ್ರಕರಣ ಖಂಡಿಸಿ ಕರೆನೀಡಲಾಗಿದ್ದ ಬಂದ್​ ಗೆ ವ್ಯಾಪಾರಿಗಳು ಅಂಗಡಿಮುಗ್ಗಟ್ಟುಗಳು ಸ್ವಯಂ ಪ್ರೇರಿತರಾಗಿ ಬೆಂಬಲ ನೀಡಿದ್ದರಿಂದ ಬಂದ್​ ಯಶಸ್ವಿಯಾಯಿತು. ಇನ್ನು ಬೀದರ್​ನ ಚಿದ್ರಿ ಬಳಿ ಹೋಟಲ್ ನಲ್ಲಿ ಖುರ್ಚಿಗಳು ಪುಡಿಪುಡಿಯಾದ್ರೆ, ತಾಲೂಕಿನ ಆಣದೂರ ಗ್ರಾಮದಲ್ಲಿ ಬಲವಂತವಾಗಿ ಅಂಗಡಿ ಮುಚ್ಚಲು ಯತ್ನಿಸಿದವರಿಗೆ ಪೊಲೀಸ್ರು ಲಾಠಿ ರೂಚಿ ತೋರಿಸಿದ್ದ್ರು.ಇನ್ನು ನಗರದ ಚಿದ್ರಿ ಬಳಿ ಕಿಡಿಗೆಡಿಗಳ ಕಲ್ಲು ತೂರಾಟಕ್ಕೆ ಹತ್ತು ಕಾರುಗಳು ಜಖಂ ಗೊಂಡಿದೆ.

 

ಹುಮನಾಬಾದ್ ನ ಮಾಜಿ ಶಾಸಕ ಸುಭಾಷ ಕಲ್ಲೂರು ಅವರ ಕಾರು ಕೂಡಾ ಜಖಂ ಗೊಂಡಿದ್ದು, ಇಂತಹ ಸಣ್ಣಪುಟ್ಟ ಘಟನೆಗಳ ಹೊರಟುಪಡಿಸಿದರೇ, ಬೀದರ್ ಬಂದ್ ಹಿನ್ನಲೆಯಲ್ಲಿ ಸಂಪೂರ್ಣ ಯಶ್ವಸಿಯಾಯಿತು.ಬೆಳಿಗ್ಗೆಯಿಂದ ಸಂಜೆ ಆರು ಗಂಟೆವರೆಗೆ ಯಾವುದೆ ಅಂಗಡಿ ಮುಗ್ಗಟ್ಟು ಬಾಗಿಲು ತೆಗೆಯಲಿಲ್ಲ.ಬಂದ್ ಹಿನ್ನಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಇನ್ನು ಬಂದ್ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದ್ದರೆ,ಬೆಳಿಗ್ಗೆಯಿಂದಲೆ ಸರ್ಕಾರಿ ಬಸ್ ಗಳ ಸಂಚಾರ ಸ್ಥಕಿತಗೊಳಸಲಾಗಿತ್ತು.