ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಟಿಕೇಟ್​ ಕಲಹ!

ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡೋ​​ ಹೊತ್ತಲ್ಲಿ ಆಕ್ರೋಶ ಭುಗಿಲೆದ್ದಿದೆ. ನಿಷ್ಠಾವಂತರಿಗೆ ಕಾಂಗ್ರೆಸ್​ ಪಕ್ಷದಿಂದಲೇ ಮಹಾಮೋಸ ಆಗ್ತಿದೆ ಅನ್ನೋ ಆಕ್ರೋಶ ಭುಗಿಲೇಳ್ತಿದೆ. ಪದ್ಮನಾಭ ನಗರದ ಟಿಕೇಟ್​ನ್ನು ಮಾಜಿ ಶಾಸಕ ಎಂ.ಶ್ರೀನಿವಾಸ್​ಗೆ ನೀಡಲು ಮುಂದಾಗಿರೋದಕ್ಕೆ ತೀವ್ರ ವಿರೋಧ ವ್ಯಕ್ತವಾಗ್ತಿದೆ.

ad80 ವರ್ಷದ ಎಂ.ಶ್ರೀನಿವಾಸ್​ ಮೇಲೆ ಭೂಗಳ್ಳತನ ಆರೋಪವಿದೆ. ಅಕ್ರಮ ಆಸ್ತಿ ಹರಿಕಾರ ಅನ್ನೋ ಹಣೆಪಟ್ಟಿಯೂ ಇದೆ. ಸದಾ ಕಾಂಗ್ರೆಸ್​ ಬೈಯ್ತಿದ್ದ ಶ್ರೀನಿವಾಸ್ ಗೆ ಕುರುಡು ಕಾಂಚಾಣದ ದೆಸೆಯಿಂದ ಕಾಂಗ್ರೆಸ್​ ಅಭ್ಯರ್ಥಿ ಆಗ್ತಿದ್ದಾರೆ ಅಂತಾ ಬೆಂಬಲಿಗರು ಆರೋಪಿಸುತ್ತಿದ್ದಾರೆ.
ಬಿಜೆಪಿ ನಿಷ್ಠಾವಂತ ಕಾರ್ಯಕರ್ತ, ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕರಾಗಿದ್ದ ಶ್ರೀನಿವಾಸ್​ ಈ ಹಿಂದೆ ಒಮ್ಮೆ ಕನಕಪುರ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಎಂಪಿಯೂ ಆಗಿದ್ರು. ಬೆಂಗಳೂರು ಹೊರವಲಯದಲ್ಲಿ 30 ಎಕರೆ ಸರ್ಕಾರಿ ಭೂಮಿ ಕಬಳಿಸಿದ್ದ ಶ್ರೀನಿವಾಸ್​ ಕಾಂಗ್ರೆಸ್​ನವರ ವಿರೋಧದಿಂದಲೇ ಸರ್ಕಾರಕ್ಕೆ ಭೂಮಿ ವಾಪಸ್​ ನೀಡಿದ್ದರು.

ಅಕ್ರಮ ಆಸ್ತಿ ಗಳಿಸಿ ಲೋಕಾಯುಕ್ತ ದಾಳಿಗೂ ಒಳಗಾಗಿದ್ದ ಶ್ರೀನಿವಾಸ್​ಗೆ ಟಿಕೆಟ್ ನೀಡೋದು ಬೇಡಾ ಅಂತಾ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಸತತ 30 ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಗುರಪ್ಪನಾಯ್ಡು ಅವರನ್ನು ಕಡೆಗಣಿಸಿ ಶ್ರೀನಿವಾಸ್​ಗೆ ಟಿಕೆಟ್​ ನೀಡೋದು ಸರಿಯಲ್ಲ ಅಂತಾ ಆಕ್ರೋಶ ವ್ಯಕ್ತವಾಗ್ತಿದೆ. ನಿಷ್ಠಾವಂತರಿಗೆ ಕಾಂಗ್ರೆಸ್​ನಲ್ಲಿ ಬೆಲೆ ಇಲ್ಲ ಅಂತಾ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ.