ಬಿಟಿವಿ ಎಂ ಸ್ಕ್ವೇರ್​​​​​​ ಬಿಗ್ ಪ್ರಾಪರ್ಟಿ ಎಕ್ಸ್​ಪೊ-2019…!

ಬೆಂಗಳೂರಿಗರ ಸ್ವಂತ ಮನೆ, ಸೈಟ್​ನ ಕನಸು ನನಸು ಮಾಡಲು ನಿಮ್ಮ ಬಿಟಿವಿ ಎಂ ಸ್ಕ್ವೇರ್​​​​​​ ಬಿಗ್ ಪ್ರಾಪರ್ಟಿ ಎಕ್ಸ್​ಪೊ-2019 ಅನ್ನು ಏರ್ಪಡಿಸಿದೆ. ಮಲ್ಲೇಶ್ವರಂನ ಮಂತ್ರಿಮಾಲ್ ಎದುರು ಇರುವ ಪ್ಲೇ ಬಾಯ್ ಗ್ರೌಂಡ್​ನಲ್ಲಿ ಮೂರು ದಿನಗಳ ಕಾಲ ಎಕ್ಸ್​ಪೋ ನಡೆಯುತ್ತಿದೆ. ಸ್ವರ ಜ್ಯೋತಿಷಿ ಆನಂದ್ ಗುರೂಜಿ ಎಕ್ಸ್​ಪೋಗೆ ಚಾಲನೆ ನೀಡಿದ್ರು. ನಟಿ ಶುಂಭ ಪೂಂಜಾ, ಶಾಸಕ ದಿನೇಶ್​ ಗುಂಡೂರಾವ್​​ ಪತ್ನಿ ಟಬು ಸೇರಿದಂತೆ ಹಲವು ಗಣ್ಯರು, ಎಕ್ಸ್​​ಪೋಗೆ ಸಾಥ್ ನೀಡಿರುವ ಸಂಸ್ಥೆಗಳ ಪ್ರಮುಖರು ಭಾಗಿಯಾಗಿದ್ರು.

 

ಒಂದೇ ಸೂರಿನಡಿ ನಿಮಗೆ ಸೈಟ್​, ವಿಲ್ಲಾ ದೊರೆಯಲಿವೆ. ಸ್ಥಳದಲ್ಲೇ ಕಾನೂನು ಸಲಹೆ ಹಾಗೂ ಬ್ಯಾಂಕ್​ ಸಾಲಸೌಲಭ್ಯದ ನೆರವುಗಳೂ ದೊರೆಯಲಿವೆ. ಎಕ್ಸ್​ ​ಪೋಗೆ ಉಚಿತ ಪ್ರವೇಶದ ಜೊತೆ ಫ್ಯಾಮಿಲಿ ಜತೆ ಬರೋರಿಗೆ ಉಚಿತ ಬೆಳ್ಳಿ ನಾಣ್ಯ ಸಿಗಲಿದೆ. ಶ್ರೀಧಾತ್ರಿ ಡೆವಲಪರ್ಸ್​, ಸಿಎಂಎಂ ಪ್ರಾಪರ್ಟಿಸ್, ಡಿಎಸ್​ ಮ್ಯಾಕ್ಸ್​ ಹೀಗೆ ಪ್ರತಿಷ್ಠಿತ ರಿಯಲ್​​ ಎಸ್ಟೇಸ್ಟ್​ ಸಂಸ್ಥೆಗಳ ಮಳಿಗೆಗಳು ಈ ಎಕ್ಸ್​ಪೋದಲ್ಲಿವೆ. ಇಂದಿನಿಂದ ಮೂರು ದಿನಗಳ ಕಾಲ ಬಿಗ್ ಪ್ರಾಪರ್ಟಿ ಎಕ್ಸ್​ಪೋ ನಡೆಯಲಿದೆ.