ಅಧಿಕಾರಿಗಳೇ ಹುಶಾರ್..!! ನಿವೃತ್ತಿಯಾದರೂ ಬಿಡದು ಭೂ ಕಂಟಕ..!!

 

ಸರ್ಕಾರಿ ಭೂಮಿ ಪರಭಾರೆ ಮಾಡೋ ಅಧಿಕಾರಿಗಳಿಗೆ ಕಂದಾಯ ಇಲಾಖೆ ಖಡಕ್ ಸಂದೇಶ ರವಾನಿಸಿದೆ. ಹಾಲಿ ಅಧಿಕಾರಿಗಳಿಗಷ್ಟೇ ಅಲ್ಲ ಬದಲಾಗಿ ನಿವೃತ್ತ ಅಧಿಕಾರಿಗಳಿಗೂ ಇದರ ಬಿಸಿ ಮುಟ್ಟಿದೆ. ಕೆರೆ ಭೂಮಿ ಪರಭಾರೆ ಮಾಡಿದ್ದ ನಿವೃತ್ತ ಕಂದಾಯ ಅಧಿಕಾರಿಗಳಿಗೆ ಲೀಗಲ್ ನೋಟೀಸ್ ನೀಡುವ ಮೂಲಕೆ ಇಲಾಖೆ ಶಾಕ್ ನೀಡಿದೆ.

 

 

ಬೆಂಗಳೂರು ದಕ್ಷಿಣದ ವಳಗೇರಳ್ಳಿ ಕೆರೆ ಸರ್ವೆ ನಂ.43ರ 5 ಎಕರೆ ಖಾಸಗಿ ಪಾಲಾಗಿತ್ತು. ಈ ಸಂಬಂಧ ಕೋರ್ಟ್​ಗೆ ಸೂಕ್ತ ದಾಖಲೆ ನೀಡದೆ, ಮೇಲ್ಮನವಿ ಸಲ್ಲಿಸದೇ ಭೂ ಮಾಫಿಯಾದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ಮೇಲೆ ಇಲಾಖೆ ಶಿಸ್ತು ಕ್ರಮ ಕೈಗೊಂಡಿದೆ.

5 ನಿವೃತ್ತ ತಹಶೀಲ್ದಾರ್​ರಿಂದ 10 ಕೋಟಿ ವಸೂಲಿಗೆ ಕ್ರಮಕ್ಕೆ ಮುಂದಾಗಿದ್ದು ನಿವೃತ್ತ ತಹಶೀಲ್ದಾರ್​ ವೆಂಕಟೇಶಯ್ಯರಿಂದ 1 ಕೋಟಿ 51 ಲಕ್ಷ ರೂ. ವಸೂಲಿ, ನಿವೃತ್ತ ತಹಶೀಲ್ದಾರ್​ ಕೆ.ಬಿ.ಚಿಕ್ಕಬೆಟ್ಟಯ್ಯರಿಂದ 67 ಲಕ್ಷ ರೂ. ವಸೂಲಿ, ನಿವೃತ್ತ ತಹಶೀಲ್ದಾರ್​ ರಾಮಚಂದ್ರರಿಂದ 2 ಕೋಟಿ 43 ಲಕ್ಷ ರೂ. ವಸೂಲಿ, ನಿವೃತ್ತ ತಹಶೀಲ್ದಾರ್​ ವಿ.ನಾರಾಯಣಸ್ವಾಮಿರಿಂದ 1 ಕೋಟಿ 46 ಲಕ್ಷ ರೂ. ವಸೂಲಿ, ನಿವೃತ್ತ ತಹಶೀಲ್ದಾರ್​ ಎಸ್​.ಎನ್​.ರಾಮೇಗೌಡರಿಂದ 41 ಲಕ್ಷ ರೂಪಾಯಿ ವಸೂಲಿ,ನಿವೃತ್ತ ಸ್ಪೆಷಲ್​ ಡಿಸಿ ಸಿ.ಸೋಮಶೇಖರ್​ರಿಂದ 1 ಕೋಟಿ 98 ಲಕ್ಷ ವಸೂಲಿಗೆ ಆದೇಶ ಹೊರಡಿಸಿದೆ.