ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ರಾ ಕಿಚ್ಚಸುದೀಪ?

ಜಾತಿ ಪ್ರಮಾಣ ಪತ್ರ ಸಲ್ಲಿಸೋಕೆ ಜನಸಾಮಾನ್ಯರು ಅರ್ಜಿ ಸಲ್ಲಿಸೋದು ಸಾಮಾನ್ಯವಾದ ಸಂಗತಿ.

 ಆದರೇ ಸ್ಯಾಂಡಲವುಡ್​​ ನಟ ಕಿಚ್ಚ ಸುದೀಪ್ ಕೂಡ ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರಾ? ಹೌದು ಅಂತಿದೆ ವಿಜಯಪುರದ ಮುದ್ದೆಬಿಹಾಳ ತಾಲೂಕಿನ ನಾಲತವಾಡ ಉಪ ತಹಶೀಲ್ದಾರ ಕಚೇರಿ. ಇಲ್ಲಿನ ಉಪತಹಶೀಲ್ದಾರ ಕಚೇರಿಗೆ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿಯೊಂದು ಬಂದಿದೆ. ಹೀಗೆ ಜಾತಿ ಪ್ರಮಾಣ ಪತ್ರಕ್ಕಾಗಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಸುದೀಪ ಭಾವಚಿತ್ರ ಅಂಟಿಸಲಾಗಿದ್ದು, ಅರ್ಜಿದಾರನ ಭಾವಚಿತ್ರವಿರಬೇಕಾದ ಜಾಗದಲ್ಲಿ ಸುದೀಪ ಪೋಟೋ ಕಂಡು ತಹಶೀಲ್ದಾರ ಭದ್ರಣ್ಣನವರು ಕಂಗಾಲಾಗಿದ್ದಾರೆ.

 

ನಾಲತವಾಡ ಹೋಬಳಿಯ ವಿರೇಶ್ ನಗರದ ನಿವಾಸಿ ಸಿದ್ದಲಿಂಗಪ್ಪ ಕೊಳೂರ್ ಹೆಸರಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಆದರೆ ಆನಲೈನ್​ ಸೆಂಟರನಿಂದ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಕಿಡಗೇಡಿಗಳು ಹೀಗೆ ಭಾವಚಿತ್ರ ಅಂಟಿಸಿ ಕುಚೋದ್ಯ ಮೆರೆದಿದ್ದಾರೆ. ಇನ್ನು ಉಪ ತಹಶೀಲ್ದಾರ ಪರಿಶೀಲನೆ ವೇಳೆ ಈ ಸಂಗತಿ ಬೆಳಕಿಗೆ ಬಂದಿದೆ. ಒಟ್ಟಿನಲ್ಲಿ ಜಾತಿ ಪ್ರಮಾಣ ಪತ್ರಕ್ಕೆ ಸಲ್ಲಿಕೆಯಾದ ಅರ್ಜಿ ಕೆಲಕಾಲ ಆತಂಕ ಹಾಗೂ ಆಶ್ಚರ್ಯ ಮೂಡಿಸಿದ್ದಂತು ಸತ್ಯ.