ಸಿಲಿಕಾನ್ ಸಿಟಿಗೆ ಕಾಲಿಟ್ಟ ವರುಣ! ಮೊದಲ ಮಳೆಗೆ ಬೈಕ್​ ಸವಾರ ಬಲಿ!!

ಈಗಾಗಲೇ ಉತ್ತರ ಭಾರತಕ್ಕೆ ಶಾಕ್​ ನೀಡಿದ್ದ  ಮಳೆರಾಯ ಸಿಲಿಕಾನ ಸಿಟಿಗೂ ಕಾಲಿಟ್ಟಿದ್ದು, ಆರಂಭದಲ್ಲೇ ಆರಂಭದಲ್ಲೇ ಅಬ್ಬರಿಸಿದ ಮಳೆರಾಯ ಒಂದು ಬಲಿ ಪಡೆದಿದ್ದಾನೆ. ಬೇಸಿಗೆಯ ಉರಿ ಬಿಸಿಲಿಂದ ಬೇಸತ್ತಿದ್ದ ಸಿಲಿಕಾನ್ ಸಿಟಿ ಜನರಿಗೆ  ಅಚಾನಕ ತಂಪೆರೆದ ಮಳೆ ಧಾರಾಕಾರವಾಗಿ ಸುರಿದ ಪರಿಣಾಮ ಮರ ಬಿದ್ದು ಬೈಕ್​ ಸವಾರನೊಬ್ಬ ಸಾವನ್ನಪ್ಪಿದ್ದಾನೆ.

ad

ಬೆಂಗಳೂರಿನ ಲುಂಬಿನಿ ಗಾರ್ಡನ್ ರಸ್ತೆಯಲ್ಲಿ ಬೈಕ್ ಸವಾರನ ಮೇಲೆ ಮರ ಬಿದ್ದು ನಡುರಸ್ತೆಯಲ್ಲಿಯೇ ಬೈಕ್ ಸವಾರ ಕಿರಣ್ ಮೃತಪಟ್ಟಿದ್ದಾನೆ. ಬೈಕ್​ ಮೇಲೆ ತೆರಳುತ್ತಿರುವಾಗ ಮರದ ಕೊಂಬೆಯೊಂದು ಕಿರಣ್ ಮೇಲೆ ಬಿದ್ದು ಕಿರಣ್ ಸಾವನ್ನಪ್ಪಿದ್ದಾರೆ. ಮೃತ ದುದೈವಿ ಕಿರಣ್ 27 ವರ್ಷದ ಯುವಕನಾಗಿದ್ದು, ಕುಣಿಗಲ್  ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಕೋರಿಯರ್ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಕಿರಣ್ ಮೃತದೇಹವನ್ನು ಎಂ.ಎಸ್​ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರಿನ ಜೆ.ಪಿ.ನಗರ, ಮೆಜೆಸ್ಟಿಕ್, ಬಿಟಿಎಂ ಲೇಔಟ್, ಚಾಲುಕ್ಯ ಸರ್ಕಲ್, ಎಚ್​ಎಸ್​ಆರ್​ ಲೇಔಟ್​, ಮಾರುಕಟ್ಟೆ, ಜಯನಗರ, ಬನಶಂಕರಿ, ಶಿವಾಜಿನಗರ ಸುತ್ತಮುತ್ತದೇವನಹಳ್ಳಿ, ಆನೇಕಲ್​, ಯಶವಂತಪುರ, ಬಾಣಸವಾಡಿ, ಪೀಣ್ಯ, ಕೆಂಪೇಗೌಡ ಏರ್​ಪೋರ್ಟ್ ಸೇರಿದಂತೆ ವಿವಿಧೆಡೆ ಭಾರಿ ಮಳೆಯಾಗಿದೆ. ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನಗರದ ಕೆಲವೆಡೆ ಮರಗಳು ಸಹ ಉರುಳಿ ಬಿದ್ದಿವೆ. ದಿಢೀರ್​ ಮಳೆಯಿಂದ ಬೆಂಗಳೂರಿನಲ್ಲಿ ವಾಹನ ಸವಾರರು ಪರದಾಡುತ್ತಿದ್ದಾರೆ. ಇದನ್ನು ಹೊರತುಪಡಿಸಿ, ಹಲವು ಕಡೆ ತುಂತುರು ಮಳೆಯಾಗಿದೆ. ದಟ್ಟ ಕಾರ್ಮೋಡ ಕವಿದಿದ್ದು, ಮತ್ತೆ ಮಳೆ ಆರ್ಭಟಿಸುವ ಸಾಧ್ಯತೆ ಇದೆ. ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಾಳೆ ರಾಜ್ಯದಲ್ಲಿ ಚುನಾವಣೆಯು ಸಹ ಇರುವುದರಿಂದ ಆದಷ್ಟು ಬೆಳಗ್ಗೆಯೇ ಮತದಾರರು ಮತದಾನ‌ ಮಾಡುವುದು ಒಳಿತು. ಇಲ್ಲವಾದಲ್ಲಿ ಮತದಾನ ಮಾಡಲು ಸಮಸ್ಯೆಯಾಗಬಹುದು. ಏಕೆಂದರೆ ನಾಳೆ ಮಧ್ಯಾಹ್ನದ ನಂತರ ರಾಜ್ಯದ ಹಲವು ಕಡೆ ಪುನಃ ಮಳೆಯಾಗುವ ಸಾಧ್ಯತೆ ಇದೆ. ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.