ಬಿಜೆಪಿ ಒಂದು ಕಾನ್ಸರ್ ಇದ್ದಂತೆ, – ಪ್ರಕಾಶ್ ರೈ.

ಬೆಳಗಾವಿಯಲ್ಲಿ ಬಹುಭಾಷ ನಟ ಪ್ರಕಾಶ ರೈ ಮತ್ತೆ  ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ  ಮಾತನಾಡಿದ ಅವರು  ಬಿಜೆಪಿ ಪಕ್ಷ ಒಂದು ಕ್ಯಾನ್ಸರ್ ಇದ್ದಂತೆ. ಅದನ್ನ ಮೊದಲು ಗುಣಪಡಿಸಬೇಕು.. ಉಳಿದ ಪಕ್ಷಗಳು  ಕೆಮ್ಮು ನೆಗಡಿ ಜ್ವರ ಇದ್ದಂತೆ. ಅದಕ್ಕಾಗಿ ನಾನು ಬಿಜೆಪಿಯನ್ನ ವಿರೋಧಿಸುತ್ತೇನೆ ಮತ್ತು  ನಾನು ಯಾವ ಪಕ್ಷವನ್ನು ಬೆಂಬಲಿಸಿ ಎಂದು ಹೇಳುವುದಿಲ್ಲ ಎಂದು ಹೇಳಿದ್ದಾರೆ.

ad


 

ಇನ್ನು ಕಾವೇರಿ ನದಿ ನೀರು ಹಂಚಿಕೆ ವಿಚಾರ. ತಮಿಳುನಾಡಿನಲ್ಲಿ ನಟರ ಪ್ರತಿಭಟನೆ ವಿಚಾರ ಮಾತನಾಡಿ ಅವರು ಯಾವ ಪಕ್ಷ, ರಾಜಕಾರಣಿ ಕಾವೇರಿ ಸಮಸ್ಯೆ ಬಗೆಹರಿಸಲ್ಲ. ಇದು ರಾಜಕೀಯ ಉಪಯೋಗಕ್ಕೆ ಬಳಕೆಯಾಗುತ್ತಿದೆ. ಕಾವೇರಿ ಬಗ್ಗೆ ಕಾಳಜಿ ಇದ್ರೆ ತಜ್ಞರ ಜತೆಗೆ ‌ಕುಳಿತು ರಾಜ್ಯ ಕೇಂದ್ರ ಸರ್ಕಾರ ಚಿಂತಿಸಬೇಕು ಎಂದರು ‌. ಇನ್ನು ಅಕ್ರಮ ಮರಳುಗಾರಿಕೆ  ಬಗ್ಗೆ ಯಾಕೆ ಯಾರು ಮಾತಡಲ್ಲ. ನಿಜವಾದ ಅಕ್ಕರೆ ಇದ್ರೆ ತಜ್ಞರ ಜತೆಗೆ ಚರ್ಚಿಸಲಿ ಎಂದಿದ್ದಾರೆ.