ಮಂಗಳೂರಿನಲ್ಲಿ ಬಿಜೆಪಿ ಯುವ ಮೊರ್ಚಾದಿಂದ ಬೈಕ್​ ಱಲಿ ಶುರು ಜ್ಯೋತಿ ಸರ್ಕಲ್​ನಲ್ಲಿ ಜಮಾವಣೆಗೊಂಡಿರುವ ಕಾರ್ಯಕರ್ತರು ಬೈಕ್​ ಱಲಿಯಲ್ಲಿ ಮಾಝಿ ಡಿಸಿಎಂ ಆರ್. ಅಶೋಕ್, ಸಂಸದ ಕಟೀಲ್, ಸಿಟಿ ರವಿ, ಸೇರಿದಂತೆ ಹಲವು ಬಿಜೆಪಿ ನಾಯಕರು ಱಲಿಯಲ್ಲಿ ಭಾಗಿ

==============

ಪೊಲೀಸ್ ಇಲಾಖೆಯ ನಿರ್ಬಂಧದ ಮಧ್ಯೆಯೂ ಬಿಜೆಪಿ ಯುವ ಮೋರ್ಚಾದ ಮಂಗಳೂರು ಚಲೋ ಱಲಿ ಆರಂಭವಾಗಿದೆ. ಬಿಜೆಪಿ ಬೈಕ್​ ಱಲಿ ನಡೆಸದಂತೆ ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಂಗಳೂರು ನಗರದಲ್ಲಿ ಪೊಲೀಸ್​ ಭದ್ರತೆ ಏರ್ಪಡಿಸಲಾಗಿದೆ. ನೆಹರು ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ಮಾತ್ರ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಜಿಲ್ಲಾಡಳಿತದಿಂದ ಮಂಗಳೂರು ನಗರದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಭದ್ರತೆಗೆ 8 ಎಸ್ಪಿ, 12 ಎಎಸ್ಪಿ, 30 ಸಿಪಿಐ, 60 ಪಿಎಸ್ಸೈ, 600 ಕಾನ್ಸ್​ಟೆಬಲ್, 15 ಕೆಎಸ್ಆರ್​ಪಿ ತುಕಡಿ ನಿಯೋಜಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆಯಿಂದಲೂ ನಗರದಲ್ಲಿ ಭದ್ರತೆ ಕೈಗೊಳ್ಳಲಾಗಿದೆ.
ಫ್ಲೊ…
ಇನ್ನು, ನಿರ್ಬಂಧದ ಮಧ್ಯೆಯೂ ಱಲಿಗೆ ಮುಂದಾದ್ರೆ ಬಿಜೆಪಿ ಮುಖಂಡರನ್ನು ಬಂಧಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ನಮಗೆ ಯಾರ ಅನುಮತಿಯ ಅಗತ್ಯವಿಲ್ಲ ಅಂದಿರೋ ಬಿಜೆಪಿ ಪಡೆ ನಗರದ ಜ್ಯೋತಿ ವೃತ್ತದಿಂದ ಬೈಕ್ ಱಲಿ ಜತೆ ಪಾದಯಾತ್ರೆ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕೋ ಎಚ್ಚರಿಕೆ ನೀಡಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಈಶ್ವರಪ್ಪ, ರಾಜ್ಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪ್ರತಾಪ್ ಸಿಂಹ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಈಗಾಗಲೇ ಮಂಗಳೂರಿಗೆ ಎಂಟ್ರಿ ಕೊಟ್ಟಿದ್ದು, ಹೋರಾಟ ತೀವ್ರಗೊಳ್ಳೋ ಸಾಧ್ಯತೆಯಿದೆ.
ಫ್ಲೋ…
ಈ ಮಧ್ಯೆ ಸಂಸದ ನಳಿನ್​ ಕುಮಾರ್​ ಕಟೀಲ್ ಖುದ್ದಾಗಿ ರೋಡಿಗಿಳಿದಿದ್ರು. ​ಜ್ಯೋತಿ ಸರ್ಕಲ್​ನಲ್ಲಿ ಬ್ಯಾರಿಕೇಡ್​ ಹಾಕಿದ್ದ ಪೊಲೀಸರ ವಿರುದ್ಧ ಆಕ್ರೋಶಗೊಂಡ ಅವ್ರು, ಸಾರ್ವಜನಿಕರ ಓಡಾಟಕ್ಕೆ ಪೊಲೀಸರೇ ಅಡ್ಡಿಪಡಿಸ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರು. ಬಳಿಕ ಜ್ಯೋತಿ ಸರ್ಕಲ್​ನಲ್ಲಿ ಸಂಸದರಿಂದರೇ ಟ್ರಾಫಿಕ್​ ಕಂಟ್ರೋಲ್​ ಮಾಡಿದ್ರು. ವಾಹನಗಳು ಯಾವ ಕಡೆ ಹೋಗ್ಬೇಕು ಅಂತಾ ಸಂಸದರೇ​ ನಿರ್ದೇಶನ ನೀಡಿದ್ರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here