ಶೂ, ಚಪ್ಪಲಿಯಿಂದ ಹೊಡೆದಾಡಿಕೊಂಡ ಬಿಜೆಪಿ ಸಂಸದ ಮತ್ತು ಶಾಸಕರು..!

ಬಿಜೆಪಿ ಸಂಸದ ಮತ್ತು ಶಾಸಕರ ನಡುವೆ ಚಪ್ಪಲಿ ಹಿಡಿದು ಹೊಡೆದಾಟ..!


ಲಕ್ನೋ : ಬಿಜೆಪಿಯವರ ಮಾನ ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಹರಾಜಾಗಿದೆ ಈ ಮೂಲಕ ಶಿಸ್ತಿನ ಪಕ್ಷಕ್ಕೆ ಮತ್ತೊಮ್ಮೆ ಕಳಂಕ ಹುಟ್ಟಿಕೊಂಡಿದೆ.ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ಬುಧವಾರ ನಡೆದ ರಸ್ತೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಸಂಸದರಾದ ಶರದ್ ತ್ರಿಪಾಟಿ ನಾಮಫಲಕದಲ್ಲಿ ತಮ್ಮ ಹೆಸರಿಲ್ಲದ ಕಾರಣ ಶಾಸಕ ರಾಕೇಶ್ ಭಗೇಲ್ ಮೇಲೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಇದಕ್ಕೆ ಶಾಸಕರು  ಇದು ನನ್ನ ಕಾರ್ಯಕ್ರಮ ಎಂದು ಉದ್ಧಟತನದಿಂದ  ವರ್ತಿಸಿದರು. ಕುಪಿತಗೊಂಡ ಸಂಸದರು ಶಾಸಕರಿಗೆ ತಮ್ಮ ಚಪ್ಪಲಿಯಲ್ಲಿ ಹೊಡೆದಿದ್ದಾರೆ, ಪ್ರತಿಯಾಗಿ ಶಾಸಕರು ಕೂಡ ಸಂಸದರಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ.ಅಶ್ಲೀಲ ಪದಗಳನ್ನು ಉಪಯೋಗಿಸಿ ಅಸಭ್ಯವಾಗಿ ವರ್ತಿಸಿದ ಇವರಿಬ್ಬರನ್ನು ಪೊಲೀಸರು ಶಾಂತಗೊಳಿಸಿದರು ಮತ್ತು  ಸಾರ್ವಜನಿಕವಾಗಿ  ಇವರ ವರ್ತನೆಗೆ  ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.