ಇಂದು ದಾವಣಗೆರೆ ಕೇಸರಿಮಯ..

ಬೆಣ್ಣೆ ದೋಸೆ ನಗರಿ ದಾವಣಗೆರೆಯಲ್ಲಿ ಕೇಸರಿ ಪಡೆ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ರಾಜ್ಯಾದ್ಯಕ್ಷ ಯಡಯೂರಪ್ಪ ಹುಟ್ಟು ಹಬ್ಬದ ಅಂಗವಾಗಿ ರಾಜ್ಯ ರೈತ ಸಮಾವೇಶಕ್ಕೆ ನಗರದ ಹೈಸ್ಕೂಲ್ ಮೈದಾನವನ್ನ ಸಜ್ಜುಗೊಳಿಸಿಸಲಾಗಿದೆ. ಸಂಜೆ 4 ಗಂಟೆಗೆ ಸಮಾವೇಶ ನಡೆಯಲಿದ್ದು ಈಗಾಗಲೇ ಸಕಲ ಸಿದ್ಧತೆ ನಡೆಸಲಾಗಿದೆ. 1ಲಕ್ಷಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ನಾಲ್ಕೂ ದಿಕ್ಕುಗಳಿಂದ ಆಗಮಿಸುವ ಲಕ್ಷಾಂತರ ಕಾರ್ಯಕರ್ತರಿಗೆ ವಾಹನದ ಪಾರ್ಕಿಂಗ್ ವ್ಯವಸ್ಥೆ ಹಾಗೆಯ ಅವರಿಗೆ ಊಟದ ವ್ಯವಸ್ಥೇ ಕಲ್ಪಿಸಲಾಗಿದೆ. ಇನ್ನು ಯಡಯೂರಪ್ಪನವರ ಹುಟ್ಟು ಹಬ್ಬಕ್ಕೆ ಅವರ ಮಾನಸ ಪುತ್ರ ರೇಣುಕಾಚಾರ್ಯ ಸಾಗುವಾನಿ ಮರದಿಂದ ತಯಾರಿಸಿದ ನೇಗಿಲನ್ನ ಪ್ರಧಾನ ಮಂತ್ರಿಗಳಿಂದ ಯಡಯೂರಪನ್ನವರಿಗೆ ಕೊಡಿಸಲಿದ್ದಾರೆ. ಇನ್ನು ಲಕ್ಷಾಂತರ ಕಾರ್ಯಕರ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರಾದ್ಯಂತ ಸಖತ್ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಒಟ್ಟಾರೆ ಬಿಜೆಪಿ ರೈತ ಸಮಾವೇಶಕ್ಕೆ ಇಡೀ ನಗರವನ್ನ ಕೇಸರಿಮಯ ಗೊಳಿಸಲಾಗಿದೆ.

ad


 

ದಾವಣಗೆರೆಯಲ್ಲಿ ಇಂದು ನಡೆಯಲಿರುವ ಬಿಜೆಪಿ ರೈತ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮಧ್ಯಾಹ್ನ 2.55ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮಿಸಲಿದ್ದಾರೆ. ನಂತ್ರ ಬಿಬಿಜೆ ಏರ್ ಕ್ರಾಫ್ಟ್ ಮೂಲಕ 3.46ಕ್ಕೆ ದಾವಣಗೆರೆ ನಗರದ ಜಿಎಂಐಟಿ ಕಾಲೇಜು ಮೈದಾನದ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಬಳಿಕ ಸಂಜೆ 4 ಗಂಟೆಗೆ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆಯುವ ಬಿಜೆಪಿ ರೈತ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಸಂಜೆ 5.05ಕ್ಕೆ ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿಗೆ ಹೊರಟು ಅಲ್ಲಿಂದ 6.10ಕ್ಕೆ ವಿಮಾನದ ಮೂಲಕ ದೆಹಲಿಗೆ ಮರು ಪ್ರಯಾಣ ಬೆಳೆಸಲಿದ್ದಾರೆ.