ಸಲ್ಮಾನ್ ಖಾನ್ ಗೆ ಜೈಲು !! ಕೃಷ್ಣಮೃಗ ಕೊಂದು ಕೃಷ್ಣ ಜನ್ಮಸ್ಥಾನ ಸೇರಿದ ಬಾಲಿವುಡ್ ಕೃಷ್ಣ !

Blackbuck poaching case: Salman Khan convicted,other accused let off
Blackbuck poaching case: Salman Khan convicted,other accused let off

1998 ರಲ್ಲಿ ಕೃಷ್ಣಮೃಗವನ್ನು ಕೊಂದ ಆರೋಪದಲ್ಲಿ ಬಾಲಿವುಡ್ ನಟ ಸಲ್ಮಾನ್ ದೋಷಿ ಎಂಬ ತೀರ್ಪು ನೀಡಲಾಗಿದೆ.

ಜೋದ್ ಪುರದ ಸಿಜೆಎಂ ನ್ಯಾಯಾಲಯ ತೀರ್ಪು ನೀಡಿದ್ದು ಜೈಲು ಶಿಕ್ಷೆ ವಿಧಿಸಲಾಗಿದೆ. ಜೈಲು ಶಿಕ್ಷೆಗೆ ತಕ್ಷಣ ಜಾಮೀನು ದೊರೆಯುವ ಸಾದ್ಯತೆ ಇದೆ.ಸಲ್ಮಾನ್ ಖಾನ್ ಜೊತೆ ಆರೋಪಿಗಳಾಗಿದ್ದ ಸೈಫ್ ಅಲಿಖಾನ್, ಟಬು ಸೇರಿದಂತೆ ಎಲ್ಲರನ್ನೂ ದೋಷಮುಕ್ತಗೊಳಿಸಲಾಗಿದೆ.ಬರೊಬ್ಬರಿ 20 ವರ್ಷಗಳ ಬಳಿಕ ಸಲ್ಮಾನ್ ಪ್ರಕರಣಕ್ಕೆ ಶಿಕ್ಷೆ ಪ್ರಕಟಿಸಲಾಯಿತು. ನಿನ್ನೆಯಿಂದಲೂ ಕೋರ್ಟ್ ತೀರ್ಪಿನ ಬಗ್ಗೆ ಭಾರೀ ಕುತೂಹಲ ಹೊಂದಲಾಗಿತ್ತು ಅಳಿವಿನಂಚಿನ ಕೃಷ್ಣಮೃಗ ಹತ್ಯೆ ಭಾರತ ದಂಡಸಂಹಿತೆ ಪ್ರಕಾರ ಅಪರಾಧವಾಗುತ್ತದೆ. ಈ ಕೃತ್ಯಕ್ಕೆ ಕನಿಷ್ಠ ಆರು ವರ್ಷ ಶಿಕ್ಷೆ ವಿಧಿಸಲಾಗುತ್ತದೆ ಎನ್ನಲಾಗುತ್ತಿತ್ತು.