ಮತಗಟ್ಟೆಗೆ ಬಂದ್ರು ಬಾಲಿವುಡ್​​ ಸ್ಟಾರ್ಸ್​​! ಅಮೀರ್ ಖಾನ್​ ಸೇರಿ ಸಿನಿತಾರೆಯರ ಪರೇಡ್​​!!

ದೇಶದೆಲ್ಲೆಡೆ ಇಂದು ಲೋಕಸಭಾ ಚುನಾವಣೆಯ 4 ನೇ ಹಂತದ ಮತದಾನ ನಡೆದಿದೆ. ಈ ಹಿನ್ನೆಲೆಯಲ್ಲಿ  ಸದಾ ಬ್ಯುಸಿ ಇರುವ ಬಾಲಿವುಡ್​​  ತಾರೆಯರು ಕೂಡ ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಯತ್ತ  ಮುಖಮಾಡಿದ್ದಾರೆ. ಸಾಮಾನ್ಯ ವ್ಯಕ್ತಿಗಳಂತೆ ಇಂದು ಮುಂಬೈನಲ್ಲಿ ತಮ್ಮ ತಮ್ಮ ಮನೆಯ ಸಮೀಪದಲ್ಲಿರುವ ಮತಗಟ್ಟೆಗಳಿಗೆ ತೆರಳಿ ತಮ್ಮ ಮತಚಲಾಯಿಸಿದರು.

ad

ಹಿಂದಿ ಭಾಷಿಕರೆ ಅಧಿಕರಾಗಿರುವ 9 ರಾಜ್ಯಗಳ 71 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಚುನಾವಣೆ ನಡೆಯುತ್ತಿದ್ದು, ಮುಂಬೈ ಕ್ಷೇತ್ರದಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳೇ ಹೆಚ್ಚಿದ್ದು, ಕಲಾವಿದರೂ ತಾವು ಬಹಳ ಬ್ಯುಸಿ ಇದ್ದರು ಸಹ ಇಂದು ಮತದಾನ ನಮ್ಮ ಎಲ್ಲಾರ ಹಕ್ಕು ಎಂದು ಇಂದು ಮುಂಜಾನೆಯಿಂದಲೇ ಮತಗಟ್ಟೆಗೆ ತೆರಳಿದ್ದಾರೆ.

ನಟ ಅಮೀರ್ ಖಾನ್, ನಟಿ ಪ್ರಿಯಾಂಕ ಚೋಪ್ರಾ, ಕಾಂಗ್ರೆಸ್‌ ಅಭ್ಯರ್ಥಿ, ನಟಿ ಊರ್ಮಿಳಾ ಮತೋಂಡ್ಕರ್‌, ಬಿಜೆಪಿ ಸಂಸದ, ನಟ ಪರೇಶ್‌ ರಾವಲ್‌, ನಟಿ ರೇಖಾ, ಮಾಧುರಿ ದೀಕ್ಷಿತ್‌,ನಟಿ ಭಾಗ್ಯಶ್ರೀ ಮತ್ತು ಸೋನಾಲಿ ಬೇಂದ್ರೆ  ಸೇರಿ ಹಲವಾರು ಕಲಾವಿದರು ಮತಚಲಾಯಿಸಿದರು.

ಬಾಲಿವುಡ್​ ನಟ ಆಮೀರ್​ ಖಾನ್​ ಮತ್ತು ಪತ್ನಿ ಕಿರಣ್​ ರಾವ್ ಜೊತೆ ​ಮುಂಬೈನ ಬಾಂದ್ರಾದ ಸೇಂಟ್​ ಆನ್ಸ್ ಹೈಸ್ಕೂಲ್​ಗೆ ತೆರಳಿ ಮತ ಚಲಾವಣೆ ಮಾಡಿದರು.

ನಟಿ ಪ್ರಿಯಾಂಕ ಚೋಪ್ರಾ ತಮ್ಮ ತಾಯಿಯೊಂದಿಗೆ ಕಫೆ ಪರೇಡ್‌ ಮತಗಟ್ಟೆಗೆ ತರಳಿ ಮಾತದಾನ ಮಾಡಿದರು. ನಂತರ ಮತವೇ ಎಲ್ಲರ ಧ್ವನಿಯಾಗಿದ್ದು,ಅದು ಎಣಿಕೆಯಾಗುತ್ತದೆ ಎಂದು ಮತದಾನ ಮಾಡಿದ ಬಳಿಕ ಶಾಹಿಯ ಗುರುತಿರುವ ಬೆರಳನ್ನು ತೋರಿಸಿ ಎಲ್ಲರೂ ಮತದಾನ ಮಾಡಬೇಕೆಂದು ಮನವಿಮಾಡುತ್ತಾ ಟ್ವೀಟ್ ಮಾಡಿದ್ದಾರೆ.

ಬಾಲಿವುಡ್​ ನಟಿ ಮಾಧುರಿ ದೀಕ್ಷಿತ್​ ಅವರಿಂದ ಮುಂಬೈನ ಜುಹು ಪ್ರದೇಶದ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾವಣೆ ಮಾಡಿದರು ನಂತರ ಮತದಾನ ನಮ್ಮ ಹಕ್ಕು, ಅದನ್ನು ಬುದ್ಧಿವಂತಿಕೆಯಿಂದ ಬಳಸೋಣ. ದೇಶದ ಮುಂದಿನ ಭವಿಷ್ಯ ನಮ್ಮ ಕೈಯಲ್ಲಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರು ಮುಂಬೈನ ಖರ್​ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಬಾಲಿವುಡ್​ ನಟಿ ಭಾಗ್ಯಶ್ರೀ ಮತ್ತು ಸೋನಾಲಿ ಬೇಂದ್ರೆ ಅವರು ತಮ್ಮ ಹಕ್ಕನ್ನು ಚಲಾಯಿಸಿದರು. ವೈಲ್​ ಪರ್ಲೆ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದರು.

ಮುಂಬೈ ಉತ್ತರದ ಕಾಂಗ್ರೆಸ್​ ಅಭ್ಯರ್ಥಿ ಊರ್ಮಿಳ ಮಾತೋಂಡ್ಕರ್​ ಅವರು ಬಾಂದ್ರಾದ ಮತಗಟ್ಟೆ ಸಂಖ್ಯೆ 190ರಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.

ಬಾಲಿವುಡ್​ ಹಿರಿಯ ನಟ ಅನುಪಮ್​ ಖೇರ್​ ಮುಂಬೈನ ಜುಹು ಪ್ರದೇಶ ಮತಗಟ್ಟೆ ಸಂಖ್ಯೆ 235-240ರಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.

ಬಾಲಿವುಡ್​ ನಿರ್ದೇಶಕ ಹಾಗೂ ನಿರ್ಮಾಪಕ ಮಧುರ್​ ಬಂಡಾರ್ಕರ್​ ಮತ್ತು ಪತ್ನಿ ನಂಬೂದಿರಿ ಅವರೊಂದಿಗೆ ಮುಂಬೈನ ಬಾಂದ್ರಾದ ಎಂ.ಎಂ.ಕೆ ಕಾಲೇಜಿನ ಮತಗಟ್ಟೆ 167ರಲ್ಲಿ ಮತದಾನ ಮಾಡಿದರು.

ಬಾಲಿವುಡ್​ ಹಿರಿಯ ನಟಿ ಶಬಾನಾ ಅಜ್ಮಿ ಮತ್ತು ಸಾಹಿತಿ ಜಾವೇದ್​ ಅಖ್ತರ್​ ಅವರು ಮುಂಬೈನಲ್ಲಿ ಮತ ಚಲಾವಣೆ ಮಾಡಿದರು.

ಬಾಲಿವುಡ್‌ ನಿರ್ಮಾಪಕ ವಿಶಾಲ್‌ ಭಾರಧ್ವಾಜ್‌ ಮತ್ತು ಗಾಯಕ ಶಂಕರ್‌ ಮಹದೇವನ್‌ ತಮ್ಮ ಪತ್ನಿ ಸಂಗೀತ ಮಹದೇವನ್‌ ಅವರೊಂದಿಗೆ ತೆರಳಿ ಮತ ಚಲಾಯಿಸಿದರು. ಹಾಗೂ ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಮತಗಟ್ಟೆ ಸಂಖ್ಯೆ 283ಕ್ಕೆ ತೆರಳಿ ಬಾಲಿವುಡ್​ ಹಿರಿಯ ನಟಿ ರೇಖಾ ತಮ್ಮ ಮತದಾನ ಹಕ್ಕನ್ನು ಚಲಾಯಿಸಿದರು. ಇನ್ನೂ ಹಲವರು ಸೇರಿ ಮತದಾನ ಮಾಡಿದರು.

ಚಿತ್ರದ ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ತೆರಳಿದ್ದ ನಟ ಮತ್ತು ರಗ್ಬಿ ಆಟಗಾರ ರಾಹುಲ್‌ ಬೋಸ್‌ ಇಂದು ಮತ ಚಲಾಯಿಸಬೇಕೆಂದು ಶೂಟಿಂಗ್‌ನಿಂದ ಮುಂಬೈಗೆ ಹಿಂತಿರುಗಿ ಆಗಮಿಸಿದ್ದೇನೆ. ಇನ್ನೆರಡು ಗಂಟೆಗಳಲ್ಲಿ ಮತ್ತೆ ವಿಮಾನ ಹಿಡಿಯುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.