‘ಬ್ರಹ್ಮಚಾರಿ’ಯಾಗಲು ಸಜ್ಜಾದ ಸತೀಶ್… ‘ಅದ್ದೂರಿ’ ಮುಹೂರ್ತದಲ್ಲಿ ‘ಭರ್ಜರಿ’ ಹುಡುಗ…

ಅಯೋಗ್ಯ ಚಿತ್ರದ ಸಕ್ಸಸ್ ನಂತರ ನೀನಾಸಂ ಸತೀಶ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ನಡುವೆ ರಿಲೀಸ್ ಆಗಿದ್ದ ಚಂಬಲ್ ಸಹ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಅದರ ಬೆನಲ್ಲೇ ಇಂದು ಸತೀಶ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ‘ಬ್ರಹ್ಮಚಾರಿ’ ಚಿತ್ರದ ಮುಹೂರ್ತ ಸಹ ನೆರವೇರಿದೆ.

ಈ ವೇಳೆ ನಿರ್ದೇಶಕ ಚಂದ್ರಮೋಹನ್‌ , ನಿರ್ಮಾಪಕ ಉದಯ್‌ ಕೆ ಮಹ್ತಾ , ಅತಿಥಿಯಾಗಿ ಧ್ರುವ ಸರ್ಜಾ ಆಗಮಿಸಿದ್ದರು. ಸತೀಶ್‌ ನಟನೆಯ ಬ್ರಹ್ಮಚಾರಿ ಸಿನಿಮಾದಲ್ಲಿ ನಟಿ ಅದಿತಿ ಪ್ರಭುದೇವ ನಟಿಸಲಿದ್ದಾರೆ. ಅದಿತಿ ಈ ಸಿನಿಮಾದಲ್ಲಿ ಸಖತ್‌ ಗ್ಲಾಮ್‌ ಪಾತ್ರ ಮಾಡಲಿದ್ದಾರೆ. ಚಿತ್ರದಲ್ಲಿ ಮೊದಲ ಬಾರಿಗೆ ಸತೀಶ್​ಗೆ ಜೋಡಿಯಾಗಿ ಅದಿತಿ ಅಭಿನಯಿಸಲಿದ್ದಾರೆ.

ಪಕ್ಕಾ ಕಮರ್ಷಿಯಲ್ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದ್ದು, ಹಾಸ್ಯವೇ ‘ಬ್ರಹ್ಮಚಾರಿ’ಯಲ್ಲಿ ಪ್ರಧಾನವಾಗಿರಲಿದೆಯಂತೆ. ‘ಹಾಸ್ಯದ ಜತೆಗೆ ಭಾವನಾತ್ಮಕ ಅಂಶಗಳು, ಕಲರ್​ಫುಲ್ ಹಾಡುಗಳು, ಆಕ್ಷನ್ ದೃಶ್ಯಗಳೂ ಸಿನಿಮಾದಲ್ಲಿ ಇರಲಿವೆ’ ಎಂದು ಮಾಹಿತಿ ನೀಡುತ್ತಾರೆ ನಿರ್ವಪಕ ಉದಯ್ ಮೆಹ್ತಾ. ಚಿತ್ರದಲ್ಲಿ ಅದಿತಿಗೂ ವಿಶೇಷ ಪಾತ್ರವಿದೆಯಂತೆ. ಗ್ರಂಥಾಲಯವೊಂದರ ಗ್ರಂಥಪಾಲಕಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಬಾಂಬೆ ಮಿಠಾಯಿ’, ‘ಡಬಲ್ ಎಂಜಿನ್’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಚಂದ್ರಮೋಹನ್, ‘ಬ್ರಹ್ಮಚಾರಿ’ಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ‘100% ವರ್ಜಿನ್’ ಎಂಬ ಅಡಿಬರಹವಿದೆ. ಬ್ರಹ್ಮಚಾರಿ’ಯಲ್ಲಿ ಸತೀಶ್ ಹೊಸ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.