ರಾಹುಲ್ ಗಾಂಧಿ ಜೊತೆ ಕೋಳಿ ಜಗಳ !! ನಾಟಿ ಕೋಳಿ ತಿಂದು ನರಸಿಂಹ ದರ್ಶನ !!

ರಾಹುಲ್ ಗಾಂಧಿ ಜವಾರಿ ಕೋಳಿ ಮಾಂಸ ತಿಂದು ನರಸಿಂಹನ ದರ್ಶನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆರೋಪ ಈಗ ಚರ್ಚೆಗೆ ಕಾರಣವಾಗಿದೆ.

ಕೋಳಿ ತಿಂದು ದೇವಸ್ಥಾನಕ್ಕೆ ಹೋಗಿದ್ರು ಅನ್ನೋ ಬಿಎಸ್​ವೈ ಆರೋಪಕ್ಕೆ ರಾಹುಲ್​​ ಗಾಂಧಿ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಆಧಾರ ರಹಿತ ಆರೋಪ ಮಾಡ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಅವರಿಂದ ಸುಳ್ಳು ಆರೋಪ ಮಾಡಲಾಗ್ತಿದೆ ಅಂತ ಎಐಸಿಸಿ ಅಧ್ಯಕ್ಷ ರಾಹುಲ್​​​ ಗಾಂಧಿ ಕಿಡಿಕಾರಿದ್ದಾರೆ. ಮೀನು ತಿಂದು ಮಂಜುನಾಥನ ದರ್ಶನ ಪಡೀತಾರೆ 10 ಪರ್ಸೆಂಟ್​ ಸಿಎಂ.. ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿಯ ದರ್ಶನ ಪಡೆಯುತ್ತಾರೆ ಅಂತ ಬಿಎಸ್​ವೈ ವಾಗ್ದಾಳಿ ನಡೆಸಿದ್ದರು. ರಾಹುಲ್​​ ಗಾಂಧಿ ತಿಂದಿದ್ದು ಸಸ್ಯಾಹಾರ. ಮಾಂಸಾಹಾರ ಅಲ್ಲ ಅಂತ ಮಾಜಿ ಸಚಿವ ಶಿವರಾಜ್​ ತಂಗಡಗಿ ಫೋಟೋ ರಿಲೀಸ್​ ಮಾಡಿದ್ದಾರೆ. ರಾಹುಲ್​ ಗಾಂಧಿ ಹೊಸಪೇಟೆಯ ಮಲ್ಲಿಗೆ ಹೋಟೆಲ್​​ನಿಂದ ತಂದಿದ್ದ ಊಟವನ್ನ ಕನಕಗಿರಿಯ ಪ್ರವಾಸಿ ಮಂದಿರದಲ್ಲಿ ಸೇವಿಸಿದ್ರು. ಚಪಾತಿ, ಪಾಯಸ, ಫಿಜ್ಜಾ, ಪಾವ್​​ ಬಜ್ಜಿ ಸೇವಿಸಿದ್ದರು ಅಂತ ತಂಗಡಗಿ ಸ್ಪಷ್ಟಪಡಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿ ಜವಾರಿ ಕೋಳಿ ತಿಂದು ನರಸಿಂಹಸ್ವಾಮಿ ದರ್ಶನಕ್ಕೆ ಹೋಗಿದ್ರು. ಪದೇ ಪದೇ ಕಾಂಗ್ರೆಸ್ಸಿಗರು ಹಿಂದೂಗಳ ಭಾವನೆ ಜೊತೆ ಆಟ ಆಡ್ತಿದ್ದಾರೆ ಅಂತ ಬಿ.ಎಸ್​ ಯಡಿಯೂರಪ್ಪ ಟ್ವೀಟ್ ಮಾಡಿದ್ರು. ರಾಹುಲ್​​ ಗಾಂಧಿ ಎಲ್ಲೂ ನಾನ್​ವೆಜ್​​​ ತಿಂದಿಲ್ಲ. ನಾನ್​​ ವೆಜ್​ ತಿಂದು ದೇಗುಲಕ್ಕೆ ಹೋಗಿದ್ದಾರೆ ಅನ್ನೋದು ಸುಳ್ಳು ಎಂದು ಬೀದರ್​​ನಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್​​​ ಹೇಳಿಕೆ ನೀಡಿದ್ದಾರೆ. ನಾನೂ ರಾಹುಲ್ ಗಾಂಧಿಯೊಂದಿಗೆ ಊಟ ಮಾಡಿದ್ದೇನೆ, ಅವ್ರು ನಾನ್​​ವೆಜ್​​ ತಿಂದ್ರು ಎಂದು ಬಿಜೆಪಿಯವರು ಅಪಪ್ರಚಾರ ಮಾಡಿ, ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ರಾಹುಲ್​​ ಈ ದೇಶದ, ನಾಡಿನ ಸಂಸ್ಕೃತಿಯನ್ನು ಚೆನ್ನಾಗಿ ಅರಿತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.