ಪೆಟ್ರೋಲ್​ ಬಂಕ್​​ಗೆ ನುಗ್ಗಿದ ಬಸ್​- ಅದೃಷ್ಟವಶಾತ್ ತಪ್ಪಿದ ಭಾರಿ ಅವಘಡ!

 

ಆ ಬಸ್​​ ವರ್ಷಗಳಿಂದ ಹಾಸನದಿಂದ ಬೆಂಗಳೂರಿಗೆ ರಸ್ತೆಯಲ್ಲೇ ಓಡುತ್ತಿತ್ತು. ಅದಕ್ಕೂ ಸಾಕಾಗಿತ್ತು ಅನ್ಸುತ್ತೆ. ಇವತ್ತು ರಸ್ತೆ ಬದಿಯ ಪೆಟ್ರೋಲ್​ ಬಂಕ್​ ನೋಡಿದ್ದೇ ತಡ ಧೀಡಿರ ಅಂತ ರಸ್ತೆ ಬದಲಾಯಿಸಿ ಪೆಟ್ರೋಲ್​ ಬಂಕ್​ಗೇ ನುಗ್ಗಿದೆ. ಧೀಡಿರ ಎರ್ರಾಬಿರ್ರಿಯಾಗಿ ಚಲಿಸಿ ಪೆಟ್ರೋಲ್ ​ಬಂಕ್​ಗೆ ಬಂದ ಬಸ್​ ಕಂಡು ಸಾರ್ವಜನಿಕರು ಬಂಕ್​ ಸಿಬ್ಬಂದಿ ಕಂಗಾಲಾಗಿದ್ದಾರೆ.
ಹೌದು ಬೆಂಗಳೂರಿನ ಗೊರಗುಂಟೆ ಪಾಳ್ಯದ ಎಚ್​ಪಿ ಪೆಟ್ರೋಲ್​ ಬಂಕ್​ ಬಳಿ ಈ ಅಪಘಾತ ನಡೆದಿದೆ. ಹಾಸನದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್​​ ಗೋರಗುಂಟೆ ಪಾಳ್ಯದ ಬಳಿ ಬ್ರೇಕ್​ ಫೇಲ್ಯೂರ್​ ಆಗಿದೆ. ಇದರಿಂದ ಸ್ಟೇರಿಂಗ್​ ಕೂಡ ಲಾಕ್​ ಆಗಿದ್ದು, ನಿಯಂತ್ರಣ ತಪ್ಪಿದ ಬಸ್​ ಪಕ್ಕದಲ್ಲೇ ಇದ್ದ ಪೆಟ್ರೊಲ್ ಬಂಕ್​ಗೆ ನುಗ್ಗಿದೆ.

 

Bus runs into Petrol Bunk

ಅದೃಷ್ಟವಶಾತ ಯಾರಿಗೂ ಪ್ರಾಣಾಪಾಯವಾಗಿಲ್ಲ. ಬಸ್​ನಲ್ಲಿ ಅಂದಾಜು 11 ಪ್ರಯಾಣಿಕರಿದ್ದರು. ಬಸ್​ ನುಗ್ಗಿದ್ದರಿಂದ ಬಂಕ್​ನ ಕ್ಯಾಬಿನ್​ ಪೈಪ್​ಲೈನ್​ , ಕಂಪೌಂಡ್​ ಹಾಗೂ ದ್ವಿಚಕ್ರ ವಾಹನ ಜಖಂಗೊಂಡಿದೆ. ಸ್ಥಳಕ್ಕೆ ಯಶ್ವಂತಪುರ ಸಂಚಾರಿ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.