ಲೋಕಸಭಾ ಎಲೆಕ್ಷನ್​ ಹಿನ್ನೆಲೆ ಚುನಾವಣಾ ಆಯೋಗದಿಂದ ಸಿ-ವಿಜಿಲ್ ಆ್ಯಪ್ ಬಿಡುಗಡೆ

ಲೋಕಸಭಾ ಎಲೆಕ್ಷನ್​ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದಿಂದ ಸಿ-ವಿಜಿಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಈ ಆ್ಯಪ್​ನಲ್ಲಿ ನಾಗರೀಕರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಪೋಟೋ, ವೀಡಿಯೋ ಆ್ಯಪ್ ಲೋಡ್ ಮಾಡಬಹುದಾಗಿದೆ.

ಇದರ ಮೇಲ್ವಿಚಾರಣೆಗೆ 330 ಅಧಿಕಾರಿಗಳನ್ನು ನೇಮಿಸಿದ್ದು, 7475 ಫೀಲ್ಡ್ ಯೂನಿಟ್ ಸ್ಥಾಪಿಸಲಾಗಿದೆ. ಇದಕ್ಕೆ 10489 ಫೀಲ್ಡ್ ಸ್ಟಾಪ್​ ನೇಮಿಸಲಾಗಿದೆ. ಇನ್ನು ಇದುವರೆಗೂ 186 ದೂರುಗಳು ಬಂದಿದ್ದು, 45 ಕೇಸ್‌ಗಳು ಹೊರತುಪಡಿಸಿ ಉಳಿದವು ಸುಳ್ಳು ಕೇಸ್‌ಗಳಾಗಿವೆ ಅಂತ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.

ಈ ಆ್ಯಪ್‌ ಅನ್ನು ಜನರು ಜವಾಬ್ದಾರಿಯುತವಾಗಿ ಬಳಸಬೇಕು. ಇದನ್ನು ಸುಳ್ಳು ಅಥವಾ ಬೇಕಾಬಿಟ್ಟಿಯಾಗಿ ಬಳಸಿಕೊಳ್ಳಬಾರದು ಅಂತ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಕರೆ ಕೊಟ್ಟಿದ್ದಾರೆ