ಪೇದೆಯ ಅಮಾನವೀಯ ಕೃತ್ಯಕ್ಕೆ ನಲುಗಿದ ಕಾರ್ ಚಾಲಕ- ಕಲ್ಬುರ್ಗಿಯಲ್ಲಿ ನಡೆಯಿತು ಕ್ರೂರ ಕೃತ್ಯ!

 

ad

ಪೊಲೀಸರ್ ಲಂಚಗುಳಿತನ ಪ್ರಶ್ನಿಸಿದ ಕಾರ್ ಚಾಲಕನನ್ನು ಪೇದೆಗಳು ಠಾಣೆಗೆ ಕರೆದೊಯ್ದು ಮನಬಂದಂತೆ ಥಳಿಸಿ ದೌರ್ಜನ್ಯ ಎಸಗಿದ ಪ್ರಕರಣ ಕಲ್ಬುರ್ಗಿಯಲ್ಲಿ ನಡೆದಿದೆ. ಕಲಬುರಗಿ ತಾಲೂಕಿನ ಮರತೂರು ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದ್ದು, ಕಳೆದ ಎರಡು ದಿನಗಳ ಹಿಂದೆ ಮರತೂರು ಗ್ರಾಮದ ಕಾರು ಚಾಲಕ ಚಂದ್ರು ಎಂದಿನಂತೆ ಊರಿಗೆ ಹೋಗುತ್ತಿದ್ದ, ಈ ವೇಳೆ ವಿಶ್ವವಿದ್ಯಾಲಯ ಠಾಣೆಯ ಪೇದೆಯಾದ ರವೀಂದ್ರ, ಚಂದ್ರುವಿನ ಕಾರನ್ನ ತಡೆದು ರೋಲ್‌ಕಾಲ್ ಮಾಡಿದಾನೆ.

ಅದನ್ನು ಚಂದ್ರ ಮರುಪ್ರಶ್ನಿಸಿದ್ದಾರೆ, ಇಷ್ಟಕ್ಕೆ ಕೋಪಗೊಂಡ ಪೇದೆ ರವೀಂದ್ರ, ಹೇ ಮಗನೇ ನನ್ನನ್ನೆ ಪ್ರಶ್ನೆ ಮಾಡುತ್ತಿಯಾ ಅಂತಾ ಜಗಳವಾಡಿದಾನೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ, ಕಾರು ಚಾಲಕ ಚಂದ್ರುವನ್ನ ಠಾಣೆಗೆ ಕರೆತಂದು ಹಿಗ್ಗಾಮುಗ್ಗಾ ಥಳಿಳಿಸಿದ್ದಾನೆ. ನಿನ್ನೆ ಚಾಲಕ ಚಂದ್ರುವಿನ ಚಿಕ್ಕಪ್ಪ ಅಕಾಲಿಕವಾಗಿ ಮೃತಪಟ್ಟ ಹಿನ್ನಲೆಯಲ್ಲಿ ನಮ್ಮ ಹುಡುಗನನ್ನ ಬಿಡುಗಡೆ ಮಾಡಿ ಸಾಹೇಬ್ರೆ ಅಂತಾ ಸಂಬಂಧಿಯೋರ್ವರು ಪಿಎಸ್‌ಐ ಜಗದೇವಪ್ಪ ಪಾಳರನ್ನ ಫೋನ್ ಮಾಡಿದಾಗ, ಪಿಎಸ್‌ಐ ಕೂಡ ಮನಸ್ಸೊಇಚ್ಛೆ ಅವ್ಯಾಚ್ವ ಶಬ್ದಗಳಿಂದ ಬೈಯ್ದಿದಾರೆ.

ಇದರಿಂದ ರೊಚ್ಚಿಗೆದ್ದ ಮರತೂರು ಗ್ರಾಮಸ್ಥರು, ಪೊಲೀಸರ ದುಂಡಾವರ್ತನೆಯನ್ನ ಖಂಡಿಸಿ, ರಾತೋರಾತ್ರಿ ಕಲಬುರಗಿ ವಾಡಿ ರಸ್ತೆಯನ್ನ ಬಂದ್ ಮಾಡಿ ಪ್ರತಿಭಟನೆಯನ್ನ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಬಂಧಿಸಿದ ಕಾರು ಚಾಲಕ ಚಂದ್ರುವನ್ನ ಬಿಡುಗಡೆ ಮಾಡಿದ್ದಾರೆ.
ನಂತರ ಪೊಲೀಸರು ಸುಮಾರು ಮೂರು ಗಂಟೆಗಳ ನಂತರ ಮನವೊಲಿಸಿದ ನಂತರ ಗ್ರಾಮಸ್ಥರು ಪ್ರತಿಭಟನೆಯನ್ನ ವಾಪಾಸ್ ಪಡೆದಿದಾರೆ‌. ಸಧ್ಯ ಗಾಯಾಳು ಕಾರು ಚಾಲಕನನ್ನ ಕಲಬುರಗಿಯ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯನ್ನ ನೀಡಲಾಗುತ್ತಿದೆ. ಈ ಕುರಿತು ಗುಲ್ವರ್ಗಾ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.