ಟಿಕೆಟ್ ಕೈತಪ್ಪಿದ್ದಕ್ಕಾಗಿ ಕ್ಯಾಮೆರಾ ಮುಂದೇ ಗಳಗಳನೆ ಅತ್ತ ಟಿಕೆಟ್ ಆಕಾಂಕ್ಷಿ!! ಸಮಾಧಾನ ಪಡಿಸಿದ ಬೆಂಬಲಿಗರು

ಬಿಜೆಪಿ ಎರಡನೇ ಲಿಸ್ಟ್​ನಲ್ಲಿ ಟಿಕೆಟ್ ಕೈ ತಪ್ಪಿದ್ದಕ್ಕೆ ಕಲಬುರಗಿ ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶೀ ಪತ್ರಿಕಾಗೋಷ್ಟಿಯಲ್ಲೆ ಗಳ ಗಳನೇ ಅತ್ತಿರುವಂತಹ ಘಟನೆ ನಡೆದಿದೆ.

ಕಲಬುರಗಿಯ ಆನಂದ ನಗರ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುವಾಗಲೇ ಕಣ್ಣಿರುಧಾರೆ ಹರಿಸಿದ್ದು, ಅವರು ಅಳತ್ತಿರುವುದನ್ನ ಕಂಡು ಬೆಂಬಲಿಗರು ಹಾಗೂ ಕಾರ್ಯಕರ್ತರು ಕೂಡ ಆಕ್ರೋಶ ಭರಿತರಾಗಿ ಗಳಗಳನೇ ಅಳತೊಡಗಿದರು.. ಯಾಕಂದ್ರೆ ಈ ಹಿಂದೆ ಹಲವು ಬಾರಿ ವರಿಷ್ಟರು ಕಲಬುರಗಿಗೆ ಆಗಮಿಸಿದ್ದ ವೇಳೆಯಲ್ಲಿ, ವರಿಷ್ಟರು ಟಿಕೆಟ್ ನೀಡುವುದಾಗಿ ಹೇಳೀ ಹೋಗಿದ್ದರು. ಅದಕ್ಕಾಗಿಯೇ ಎರಡು ತಿಂಗಳಿಂದ ಉತ್ತರ ಕ್ಷೇತ್ರದಲ್ಲಿ ಭರ್ಜರಿಯಾಗಿ ಪ್ರಚಾರ ಕೈಗೊಂಡಿದ್ದರು.

ಆದರೆ ಲಿಸ್ಟ್ ನಲ್ಲಿ ನಮೋಶಿ ಬದಲು ವಿಧಾನ ಪರಿಷತ್ ಸದಸ್ಯ ಬಿ ಜಿ ಪಾಟೀಲ್ ಪುತ್ರ ಚಂದ್ರಕಾಂತ್ ಬಿ ಪಾಟೀಲ್ ಗೆ ಟಿಕೆಟ್ ನೀಡಿರುವುದಕ್ಕೆ ಇದೀಗ ಭಿನ್ನಮತ ಭುಗಿಲೆದ್ದಿದೆ.. ಹೀಗಾಗಿ ಬೆಂಬಲಿಗರ ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಿ ಅಂತಿಮ ತಿರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ..

ಪ್ರತ್ಯುತ್ತರ ನೀಡಿ

Please enter your comment!
Please enter your name here