Friday, April 20, 2018
ಸ್ನೇಹಿತನ ಪತ್ನಿಯ ಪ್ರಿಯತಮನೆಂದು ಭಾವಿಸಿ ಬಾರ್​ ಸಪ್ಲೈಯರ್​​ಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಯ ರಿಯಾಲಿಟಿ ಶೋ ವಿಜೇತ ಸುನಾಮಿ ಕಿಟ್ಟಿ ಪ್ರಕರಣ ದಾಖಲಾಗಿದೆ. ಸುನಾಮಿ ಕಿಟ್ಟಿ ವಿರುದ್ಧ ಜ್ಞಾನಭಾರತಿ ಪೊಲೀಸರು ಶಸ್ತ್ರಾಸ್ತ್ರ ಕಾಯಿದೆ ಸೇರಿದಂತೆ ಕಿಡ್ನಾಪ್​ ಜೀವಬೆದರಿಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುನಾಮಿ ಕಿಟ್ಟಿ ಸ್ನೇಹಿತ ಸುನೀಲ್​ನ ಪತ್ನಿ ತೌಶೀಕ್​ ಎಂಬಾತನ ಜೊತೆ ಸ್ನೇಹಸಂಬಂಧ ಹೊಂದಿದ್ದು,...
ಬಿಗ್ ಬಾಸ್ ಮನೆ ಎನ್ನುವುದು ಕ್ಯಾಮರಾಗಳಿಂದ ಆವೃತವಾದ ತೆರೆದ ಪುಸ್ತಕ.  ಅಲ್ಲಿ ಏನೇ ನಡೆದರೂ ಲಕ್ಷಾಂತರ ಕಣ್ಣುಗಳು ಗಮನಿಸುತ್ತಿರುತ್ತದೆ. ಇಂತಹ ಬಿಗ್ ಬಾಸ್ ಕ್ಯಾಮಾರ ಕಣ್ಣು ತಪ್ಪಿಸಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಲವ್ ಮಾಡಿದ್ದರೇ ? ಹೌದು ಎನ್ನುತ್ತದೆ ಸಿನಿ ಗಾಸಿಪ್ ದುನಿಯಾ ! ಬಿಗ್‌ಬಾಸ್‌ ಮನೆಯಲ್ಲಿ ದಿವಾಕರ್‌, ಚಂದನ್‌, ಸಮೀರ್ ಆಚಾರ್ಯ...
ನಟ-ನಟಿಯರ ಹುಟ್ಟುಹಬ್ಬಕ್ಕೆ ಹುಟ್ಟುಹಬ್ಬದ ದಿನ ಆಳೆತ್ತರದ ಕಟೌಟ್​​ ಬೀಳೋದು ಸಾಮಾನ್ಯವಾದ ಸಂಗತಿ.   ಆದರೇ ಸ್ಯಾಂಡಲ್​ವುಡ್​​ನ ಸಾರಥಿ, ಬಾಕ್ಸಾಪೀಸ್​ ಸುಲ್ತಾನ್​ ದರ್ಶನ ಹುಟ್ಟುಹಬ್ಬಕ್ಕೆ ಇನ್ನು 10 ದಿನ ಬಾಕಿ ಇರುವಾಗಲೇ ಅವರ ನಿವಾಸದ ಎದುರು ಆಳೆತ್ತರದ ಕಟೌಟ್​ ಬಿದ್ದಿರೋದು ದರ್ಶನ ಅಭಿಮಾನಿಗಳ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಹೌದು ತೂಗುದೀಪ ದರ್ಶನ್​​ಗೆ ಸ್ಯಾಂಡಲ್​ವುಡ್​​ನಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಪ್ರತಿವರ್ಷವೂ ದರ್ಶನ ಹುಟ್ಟುಹಬ್ಬವನ್ನು...
ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲ್​ನ ಅವ್ಯೆವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೇಮಿಸಿದ್ದ ತನಿಖಾ ಸಮಿತಿ ಸಲ್ಲಿಸಿದ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ. ಸರ್ಕಾರ ಆಯ್ಕೆ ಮಾಡಿದ ನಿವೃತ್ತ ಐಎಎಸ್ ಅಧಿಕಾರಿ ವಿನಯ್​ಕುಮಾರ್ ನೀಡಿದ ವರದಿಯನ್ನು ಸರ್ಕಾರ ಅಂಗೀಕರಿಸಿದೆ. ಪರಪ್ಪನ ಅಗ್ರಹಾರ ಜೈಲ್​ನಲ್ಲಿ ಅಪಾರ ಪ್ರಮಾಣದ ಅವ್ಯೆವಹಾರ ನಡೆದಿದೆ. ಶಶಿಕಲಾ ಹಾಗೂ ಇತರರಿಗೆ...
ನಟಿಯೊಬ್ಬಳಿಗೆ ವಂಚಿಸಿದ ಆರೋಪದ ಮೇಲೆ ಕನ್ನಡದ ಖಾಸಗಿ ವಾಹಿನಿಯ ಧಾರಾವಾಹಿ ಕಿನ್ನರಿಯ ನಟನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಟ ಕಿರಣರಾಜ್ ವಿರುದ್ಧ ಆತನ ಸ್ನೇಹಿತೆ ಹಾಗೂ ಮಾಡೆಲ್ ಯಾಸ್ಮಿನ್ ಪಠಾಣ ಎಂಬಾಕೆ ದೂರು ನೀಡಿದ್ದು, ಕಿನ್ನರಿ ಧಾರಾವಾಹಿ ನಟನ ವಿರುದ್ಧ ಎಫ್​ಐಆರ್​​​ ದಾಖಲಿಸಿಕೊಳ್ಳಲಾಗಿದೆ. ಮುಂಬೈ ಮೂಲದ ಯಾಸ್ಮಿನ್ ಪಠಾಣ್ ಹಾಗೂ ನಟ ಕಿರಣರಾಜ್​ ಮುಂಬೈನಲ್ಲಿ ಪರಿಚಿತರಾಗಿದ್ದು, ಕೆಲಕಾಲ...
ಸಿಎಂ ಸಿದ್ದರಾಮಯ್ಯ ಸಿಟ್ಟಾಗಿರೋದನ್ನು ನೀವು ಎಲ್ಲಾದ್ರೂ ನೋಡಿದ್ದೀರಾ ? ಅವ್ರಿಗೆ ಸಿಟ್ಟು ಬಂದ್ರೆ ಹೇಗೆಲ್ಲಾ ಗರಂ ಆಗ್ತಾರೆ ಅನ್ನೋದನ್ನ ನೀವೇ ನೋಡಿದ್ದೀರಾ ? ನಿನ್ನೆ ಬೆಂಗಳೂರಿನ ಹೆಚ್​ಎಸ್ ಆರ್ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಪಾರ್ಕ್​​ ಉದ್ಘಾಟನೆ ಸಮಾರಂಭದಲ್ಲಿ ಸಿಎ ಕೋಪ-ತಾಪ ಪ್ರದರ್ಶನ ಮಾಡಿದ್ದಾರೆ. ಎಚ್ ಎಸ್ ಆರ್ ಬಡಾವಣೆಯ ನಿವಾಸಿಗಳು "ಸ್ವಾಭಿಮಾನಿ ವೃಕ್ಷವನ" ಎಂಬ ಪಾರ್ಕ್ ಅನ್ನು...
ಬೆಂಗಳೂರಿನಲ್ಲಿ ರಸ್ತೆ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗೆ ನಿಯಮ ಉಲ್ಲಂಘಿಸಿದ ಅಟೋ ಚಾಲಕನ ಬಳಿ ಫೈನ್ ಕೇಳಿದಕ್ಕೆ ಹೈಡ್ರಾಮಾ ಮಾಡಿ ಪೊಲೀಸರನ್ನೇ ಕಂಗಾಲಾಗಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಿನ್ನೆ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆ ಬಳಿ ನಿಯಮ ಉಲ್ಲಂಘಿಸಿದ್ದಕ್ಕೆ ಅಟೋ ಚಾಲಕನನ್ನು ಸಂಚಾರಿ ಪೊಲೀಸರು ಹಿಡಿದಿದ್ದರು. ಈ ವೇಳೆ ಪೊಲೀಸರು ದಂಡ ಕಟ್ಟುವಂತೆ...
ಸಿಲಿಕಾನ ಸಿಟಿಯ ಜನರ ಪಾಲಿಗೆ ಆಪ್ತವಾಗಿರುವ ಮೆಟ್ರೋ ರೈಲಿನಲ್ಲಿ ಇಂದು ಆಕಸ್ಮಿಕ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೆಲಕಾಲ ಮೆಟ್ರೋದಲ್ಲಿ ಎಸಿ ವ್ಯವಸ್ಥೆ ಹಾಗೂ ಮೆಟ್ರೋ ಸಂಚಾರವೇ ಸ್ಥಗಿತಗೊಂಡಿತ್ತು. ಮೆಜೆಸ್ಟಿಕ್​​ನಿಂದ ಸೆಂಟ್ರಲ್​ ಕಾಲೇಜು ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಮೆಟ್ರೋ ಸಂಚಾರ ಸ್ಥಗಿತಗೊಂಡಿದ್ದರ ಜೊತೆಗೆ ವಿದ್ಯುತ್​ ಪೊರೈಕೆ ಕೂಡ ಸ್ಥಗಿತವಾಗಿದ್ದರಿಂದ ಕೆಲ ನಿಮಿಷಗಳ ಕಾಲ ಎಸಿ...
ಕೆಪಿಜೆಪಿ ತೊರೆದು ಬಿಜೆಪಿ ಸೇರುತ್ತಾರೆ ಎಂದುಕೊಂಡಿದ್ದ ರಿಯಲ್ ಸ್ಟಾರ್ ಉಪೇಂದ್ರ ಇದೀಗ ನಿರ್ಧಾರ ಬದಲಿಸಿಕೊಂಡಿದ್ದಾರೆ. ಇಂದು ಕೆಪಿಜೆಪಿಗೆ ರಾಜೀನಾಮೆ ನೀಡಿದ್ದು, ಹೊಸದಾಗಿ ಪ್ರಜಾಕೀಯ ಪಕ್ಷವನ್ನು ಸ್ಥಾಪಿಸಲಿದ್ದಾರೆ. ಇಂದು ಬೆಂಗಳೂರು ಹೊರವಲಯದ ಕುಂಬಳಗೋಡಿನ ರುಪ್ಪೀಸ್ ರೆಸಾರ್ಟ್ ನಲ್ಲಿ ಅಭಿಮಾನಿಗಳು, ಕಾರ್ಯಕರ್ತರ ಜೊತೆ ಸರಣಿ ಸಭೆ ನಡೆಸಿದರು. ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿ, ಕೆಪಿಜೆಪಿಗೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದರು....
ಸ್ನೇಹಿತ ವಿದ್ವತ್​ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‌ಗೆ ಸದ್ಯ ಬಿಡುಗಡೆ ಭಾಗ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹಲ್ಲೆ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​ ತೀರ್ಪು ಕಾಯ್ದಿರಿಸಿತ್ತು. ಇಂದು ಆದೇಶ ಪ್ರಕಟಿಸಿದ ನ್ಯಾಯಾಲಯ ನಳಪಾಡ್ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.  ನಳಪಾಡ್​...

ಜನಪ್ರಿಯ ಸುದ್ದಿ