ಐಟಿ ಅಧಿಕಾರಿ ಮಗ ಶರತ್ ಕಿಡ್ನಾಪ್ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಜಾನ್ಞಭಾರತಿ ಪೊಲೀಸ್ರು ಇಂದು ಕೋರ್ಟ್​ಗೆ ಹಾಜರುಪಡಿಸಿದ್ರು. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ 7ACMM ಕೋರ್ಟ್​ಗೆ ಆರೋಪಿಗಳಾದ ವಿಶಾಲ್, ಕರಣ್, ವಿನಯ್ ಪ್ರಸಾದ್ ಅಲಿಯಾಸ್ ವಿಕಿ, ವಿನೋದ್​ನನ್ನ ಜಡ್ಜ್ ಮುಂದೆ ಹಾಜರುಪಡಿಸಲಾಯ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗಳನ್ನು 3 ದಿನ ಪೊಲೀಸ್ ಕಸ್ಟಡಿಗೆ...
ಶಿವಮೊಗ್ಗದಲ್ಲಿ ಇಬ್ಬರು ಬಾಲಕರು ನಾಲೆ ನೀರಿನಲ್ಲಿ ಕೊಚ್ಚಿ ಹೋಗಿದ್ರು. ಈ ವೇಳೆ ಧೈರ್ಯ ಮೆರೆದ 12 ವರ್ಷದ ಕೃಷ್ಣಾ ನಾಯಕ್ ಎಂಬಾತ ಒಬ್ಬನನ್ನು ರಕ್ಷಣೆ ಮಾಡಿದ್ದಾನೆ. ಶಿವಮೊಗ್ಗದ ಸೇವಾಲಾಲನಗರದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ದರ್ಶನ್​​​​ ಮತ್ತು ಅನೀಶ್​ ಅನ್ನೋರು ನಾಲೆಯಲ್ಲಿ ಕೊಚ್ಚಿ ಹೋಗಿದ್ರು. ನಾಲೆ ಪಕ್ಕದಲ್ಲೇ ಇದ್ದ ಕೃಷ್ಣಾನಾಯಕ್​​​​​ ಕೂಡ್ಲೇ ನೆರವಿಗೆ ಧಾವಿಸಿದ್ದಾನೆ....
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೆಇಎ ಮೇಲೆ ವಿದ್ಯಾರ್ಥಿಗಳು ದಿಢೀರ್​​​​ ಆಕ್ರೋಶ ವ್ಯಕ್ತಪಡಿಸಿ ಪ್ರೊಟೆಸ್ಟ್ ಮಾಡ್ತಿದ್ದಾರೆ. ಆಪ್ಷನ್ ಎಂಟ್ರಿ ಗೊಂದಲದಿಂದ ದಿಕ್ಕು ತೋಚದ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು. ಕಾಲೇಜು ಆರಂಭವಾಗಿ ಪರೀಕ್ಷೆಗಳು ನಡೆಯುತ್ತಿವೆ. ಇಂಜಿನಿಯರಿಂಗ್ ಆಯ್ಕೆ ಮಾಡಿಕೊಂಡಿದ್ದೇವೆ. ಬೇರೆ ಕೋರ್ಸ್ ಆಯ್ಕೆ ಮಾಡಿಕೊಂಡಿರೋದ್ರಿಂದ ಸೀಟು ನೀಡಲು ಸಾಧ್ಯವಿಲ್ಲ ಅಂತ ಹೇಳ್ತಿದ್ದಾರೆ. ಇದರಿಂದ ಇರೋ ಸೀಟುಗಳನ್ನೂ...
ನಮ್ಮ ಮೆಟ್ರೋದಲ್ಲಿ ಮಹಾ ಯಡವಟ್ಟು ಮೆಟ್ರೋ ನಿಲ್ದಾಣದಲ್ಲಿ ಕೈಕೊಟ್ಟ ಸ್ಕ್ಯಾನರ್​​ ಯಂತ್ರ ಸ್ಕ್ಯಾನರ್​​​ಗಳಿಲ್ಲದೇ ಭದ್ರತಾ ಸಿಬ್ಬಂದಿ ಪರದಾಟ ಬ್ಯಾಗ್​​ಗಳನ್ನು ಬರಿಗಣ್ಣಿನಿಂದ ಪರಿಶೀಲಿಸುತ್ತಿರುವ ಸಿಬ್ಬಂದಿ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಲ್ಲಿ ಕೈಕೊಟ್ಟ ಯಂತ್ರ ಮೆಟ್ರೋ ನಿಗಮದಿಂದ ಭಾರೀ ಭದ್ರತಾ ನಿರ್ಲಕ್ಷ್ಯ
ಬೆಂಗಳೂರಿನಲ್ಲಿ ನೈಜೀರಿಯಾ ಪ್ರಜೆಗಳ ಅಟ್ಟಹಾಸ ಮಿತಿಮೀರಿದೆ. ಆಫ್ರಿಕನ್​​ ಯುವಕರ ಗುಂಪು ನೈಜೀರಿಯಾ ಪ್ರಜೆಯ ಕಾರಿಗೆ ಬೆಂಕಿ ಇಟ್ಟು ಭಸ್ಮಗೊಳಿಸಿರುವ ಘಟನೆ ಹೆಣ್ಣೂರಿನ ವಡ್ಡರಪಾಳ್ಯದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ವೈಯಕ್ತಿಕ ದ್ವೇಷದಿಂದ 2 ಗುಂಪುಗಳ ಜಗಳ ವಾಡಿ ನಂತರ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಕೊತ್ತನೂರು ಠಾಣೆಯಲ್ಲಿ ದೂರು...
ಬೆಂಗಳೂರಿನ ಸಿಲ್ಕ್ ಬೋರ್ಡ್​ ಮೇಲು ಸೇತುವೆಯ ಮೇಲೆ ಲಾರಿಯೊಂದು ಹೊತ್ತಿ ಉರಿದಿದೆ. ಸಿಮೆಂಟ್ ಲಾರಿ ಯನ್ನು ಸಂಪೂರ್ಣ ವಾಗಿ ಬೆಂಕಿ ಆವರಿಸಿದ್ದರಿಂದ ಬೆಂಗಳೂರು ಹೊಸೂರು ರಸ್ತೆ ಸಂಪೂರ್ಣ ಜಾಮ್ ಆಗಿದೆ. ವಾಹನ ಸವಾರರು ಪರದಾಡುತ್ತಿದ್ದಾರೆ. ಸ್ಥಳಕ್ಕೆ ಮಡಿವಾಳ ಸಂಚಾರಿ ಠಾಣೆಯ ಪೊಲೀಸರು ದೌಡಾಯಿಸಿದ್ದಾರೆ. ಸ್ಥಳಕ್ಕೆ ಆಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ವ್ಯಕ್ತಪಡಿಸುತ್ತಿದ್ದಾರೆ.
ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ ಶವಸಂಸ್ಕಾರ ಮಾಡಿ ಮೂರು ವರ್ಷವಾದರೂ ಹೂತ ಸ್ಥಿತಿಯಲ್ಲೇ ಇದ್ದ ಮೃತದೇಹ ಪತ್ತೆಯಾಗಿದೆ. ಮೂರು ವರ್ಷಗಳ ಹಿಂದೆ ಅನಾರೋಗ್ಯದಿಂದ ಶಿವಲಿಂಗಪ್ಪ ಕೊಪ್ಪದ್ ಸಾವಿಗೀಡಾಗಿದ್ದರು. ಕಳೆದ 20ರಂದು 70 ವರ್ಷದ ದಾಸ್ತಿಕೊಪ್ಪ ನಿಂಗಮ್ಮ ಹುಗ್ಗಿ ಎಂಬುವರ ಶವ ಹೂಳಲು ಹೋದಾಗ ಶಿವಲಿಂಗಪ್ಪ ಕೊಪ್ಪದ್ ಶವ ಹೂತ ಸ್ಥಿತಿಯಲ್ಲೇ ಕೊಳೆಯದೇ...
ಟೊಮ್ಯಾಟೋ ಸಾಗಿಸುತ್ತಿದ್ದ ಕ್ಯಾಂಟರ್ ಹೆದ್ದಾರಿಯಲ್ಲಿ ಉರುಳಿಬಿದ್ದ ಪರಿಣಾಮ ಸುಮಾರು 5 ಸಾವಿರ ಕೆಜಿ ಟೊಮೆಟೋ ಹೆದ್ದಾರಿಯಲ್ಲೆ ಚೆಲ್ಲಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಜಿಲ್ಲೆಯ ನಾಗಮಂಗಲ ತಾಲ್ಲೂಕಿನ, ಬೆಳ್ಳೂರು ಕ್ರಾಸ್ ಬಳಿ, ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ ಅವಘಡ ಸಂಭವಿಸಿದೆ. ಚನ್ನರಾಯಪಟ್ಟಣದಿಂದ ಬೆಂಗಳೂರಿಗೆ ಕ್ಯಾಂಟರ್​​ನಲ್ಲಿ ಟೊಮೆಟೋ ಸಾಗಿಸಲಾಗ್ತಿತ್ತು. ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಉರುಳಿ ಬಿದ್ದಿದ್ದು...
ಹಾಸನದಲ್ಲಿ ನಿಲ್ಲದ ಕಾಂಗ್ರೆಸ್‌ ಭಿನ್ನಮತ ಮತ್ತೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಜಗಜ್ಜಾಹೀರಾಗಿದೆ. ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮದಲ್ಲಿ ಅಸಮಾಧಾನ ಸ್ಫೋಟಗೊಂಡ ಘಟನೆ ಬೇಲೂರಿನಲ್ಲಿ ನಡೆದಿದೆ.  ಚುನಾವಣೆ ದೃಷ್ಟಿಯಿಂದ ಆರಂಭಿಸಿರೋ ಮನೆ ಮನೆಗೆ ಕಾಂಗ್ರೆಸ್​ ಕಾರ್ಯಕ್ರಮ ಉದ್ಘಾಟನೆ ವೇಳೆ ಗದ್ದಲ ಗೊಂದಲ ಸೃಷ್ಟಿಯಾಯ್ತು. ಪಕ್ಷದಲ್ಲಿ ರೌಡಿ ಶೀಟರ್​, ಗೂಂಡಾಗಳಿಗೆ ಮನ್ನಣೆ ಹಾಕಿ,  ನಿಷ್ಠಾವಂತರ ಕಡೆಗಣನೆ ಮಾಡಲಾಗ್ತಿದೆ...
ಈಶ್ವರಪ್ಪ ಪಿಎ ವಿನಯ್ ಕಿಡ್ನಾಪ್​ ಕೇಸ್​ ಸಂಬಂಧಿಸಿದಂತೆ ಮಾಜಿ ಸಿಎಂ ಯಡಿಯೂರಪ್ಪಗೆ ಮಲ್ಲೇಶ್ವರ ಎಸಿಪಿ ನೋಟಿಸ್​ ಕೊಟ್ಟಿರೋದಕ್ಕೆ ಬಿಜೆಪಿ ಕೆಂಡಾಮಂಡಲವಾಗಿದೆ. ಬಿಎಸ್​ವೈಗೆ ನೋಟಿಸ್​ ನೀಡಿರೋದನ್ನ ಖಂಡಿಸಿ ಬಿಜೆಪಿ ಮುಖಂಡರು ಮಹಾಲಕ್ಷ್ಮಿಪುರ ಪೊಲೀಸ್​ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ರು. ಶಾಸಕ ಅಶ್ವತ್ಥ ನಾರಾಯಣ್, ಮಾಝಿ ಉಪಮೇಯರ್ ಹರೀಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರ ಹಾಗೂ...

Recent Post