Monday, December 18, 2017
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಘೊಷಿಸಿದ್ದಾರೆ. "ನನಗೂ ವಯಸ್ಸಾಗಿದೆ, ಇದು ನನ್ನ ಕೊನೆಯ ವಿಧಾನ ಸಭಾ ಚುನಾವಣೆ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. " ನನ್ನ ಕ್ಷೇತ್ರ ಚಾಮುಂಡೇಶ್ವರಿ ಆಗಿರುವುದರಿಂದ ಅಲ್ಲಿಂದಲೆ ಸ್ಪರ್ಧಿಸುತ್ತೇನೆ. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಚುನಾವಣಾ ರಾಜಕೀಯದಿಂದ ದೂರವಾಗುತ್ತಿದ್ದೇನೆ. ಆದ್ರೆ ಸಕ್ರೀಯ ರಾಜಕಾರಣದಲ್ಲಿರುತ್ತೇನೆ" ಎಂದಿದ್ದಾರೆ. ತನ್ನ ನಿರ್ಧಾರವನ್ನು ಸೋನಿಯಾ ಗಾಂಧಿ ನಿರ್ಧಾರಕ್ಕೆ ಹೋಲಿಸಿದ ಸಿಎಂ...
ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚೋದನಾಕಾರಿ ಮತ್ತು ಅವಹೇಳನಕಾರಿಯಾಗಿ ಪೋಸ್ಟ್ ಹಾಕಿರೋ​ ಹಿನ್ನೆಲೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಒನಕೆ ಓಬ್ಬವ್ವ ಸೇರಿದಂತೆ ಹಲವು ವೀರವನಿತೆಯರಿಗೆ ಅವಮಾನ ಮಾಡಿ ಪ್ರತಾಪ್ ಸಿಂಹ ಸ್ಟೇಟಸ್ ಹಾಕಿದ್ದರು. ಅದು ವಿವಾದಕ್ಕೆ ಎಡೆಯಾಗಿತ್ತು. ಮಹಿಳಾ ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳು ಪ್ರತಾಪ್ ಸಿಂಹ ವಿರುದ್ದ ಪ್ರತಿಭಟನೆ ನಡೆಸಿದ್ದರು. ಪ್ರತಾಪ...
ಎಐಸಿಸಿ ಅಧ್ಯಕ್ಷರಾಗಿ ಇಂದು ರಾಹುಲ್ ಗಾಂಧಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಂದು ಸೋನಿಯಾ ಗಾಂಧಿ ಮಾಧರಿಯಲ್ಲೇ ಇಂದು ರಾಹುಲ್ ಹೆಜ್ಜೆ ಇಟ್ಟಿದ್ದಾರೆ. 132 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಇವತ್ತು ಅಧಿಕಾರ ವಹಿಸಿಕೊಂಡಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿ ಕಳೆದ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದರು. ಬರೋಬ್ಬರಿ 2 ದಶಕಗಳ...
ಮೈಸೂರು ಭಯೋತ್ಪಾದಕರ ತಾಣವಾಗುತ್ತಿದೆಯೇ ? ಮೈಸೂರು ನಗರ ಟೆರರ್ ಗಳ ರಿಕ್ರೂಟ್ ‌ಮಾಡುವ ಸೆಂಟರ್ ಆಗುತ್ತಿದೆಯೇ ? ಇಂತಹುದೊಂದು ಪ್ರಶ್ನೆ ಇದೀಗ ಉದ್ಬವವಾಗಿದೆ. ಹೌದು. ಟೇರರಿಸಂ ಮಾಡುವಂತೆ ಒತ್ತಾಯ ಮಾಡಲಾಗಿದೆ ಎಂದು ಆರೋಪಿಸಿ ಯುವಕನೊಬ್ಬ ಪತ್ರ ಬರೆದಿಟ್ಟು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಉಗ್ರಗಾಮಿಗಳು ಬಾಂಬ್ ಸ್ಪೋಟಿಸಲು ನನಗೆ ಪೀಡಿಸುತ್ತಿದ್ದರು ಅಂತ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ....
ಜೆಡಿಎಸ್​ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿಗೆ ಇವತ್ತು 59ನೇ ಹುಟ್ಟುಹಬ್ಬದ ಸಂಭ್ರಮ. 59ನೇ ವಸಂತಕ್ಕೆ ಕಾಲಿಡುತ್ತಿರುವ ದಳಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಜನ್ಮದಿನ ಸಮಾರಂಭದಲ್ಲೂ ರೈತರಿಗೆ ಉಪಯುಕ್ತ ಉಡುಗೊರೆ ನೀಡುವ ಮೂಲಕ ಎಚ್ ಡಿ ಕೆ ಸಾರ್ಥಕತೆ ಮೆರೆದ್ರು. ಬೆಂಗಳೂರಿನ ಜೆಪಿ ನಗರದ ನಿವಾಸದಲ್ಲಿ ಮಧ್ಯರಾತ್ರಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪುತ್ರ...
ಸಹೋದ್ಯೋಗಿ ಹತ್ಯೆಗೆ ಸುಫಾರಿ ನೀಡಿದ ಆರೋಪದಡಿ ಜೈಲು ಸೇರಿರುವ ಪತ್ರಕರ್ತ ರವಿ ಬೆಳಗೆರೆ ಜೈಲಿನಲ್ಲಿರುವಾಗಲೇ ಅವರ ಪತ್ರಿಕೆ ಹಾಯ್​ ಬೆಂಗಳೂರು ನಿಗದಿತ ಸಮಯಕ್ಕೆ ಬಿಡುಗಡೆಯಾಗಿದೆ. ರವಿ ಬೆಳಗೆರೆ ಜೈಲಿನಲ್ಲಿರುವಾಗಲೇ ಪತ್ರಿಕೆ ಮಾರುಕಟ್ಟೆಗೆ ಬಂದಿರೋದರಿಂದ ಸಾಕಷ್ಟು ಕುತೂಹಲ ಮೂಡಿಸಿದ್ದು, ಪತ್ರಿಕೆ ಜನರ ಕೈಸೇರಿದೆ. ನೀರಿಕ್ಷಿತ ಎಂಬಂತೆ ರವಿ ಬೆಳಗೆರೆ ಶನಿಮುಖಿ ಕೊಲೆಗೆ ಸುಪಾರಿ ಒಂದು ಕೇಡು ಎಂಬ...
ಎಷ್ಟೇ ಸೂಕ್ಷ್ಮವಾಗಿ ವಾಹನ ಓಡಿಸಿದ್ರೂ ರಸ್ತೆಗಳಲ್ಲಿ ಅಪಘಾತ ಸಾಮಾನ್ಯ. ಇಂತ ಸಂದರ್ಭದಲ್ಲಿ ಗಾಯಾಳುಗಳು ಜೀವ ಉಳಿಸಿಕೊಳ್ಳಲು ಪರದಾಡುವುದು ಸಾಮಾನ್ಯವಾದ ಸಂಗತಿ. ಇನ್ನು ಪುಟ್ಟ ಮಕ್ಕಳಿದ್ರಂತು ಅವರ ಪಾಡು ಕೇಳೋರೆ ಇಲ್ಲ. ಇಂತಹುದೇ ಅಪಘಾತವೊಂದ ತಮಿಳುನಾಡಿನಲ್ಲಿ ನಡೆದಿದ್ದು ನಾಲ್ವರು ಗಾಯಾಳುಗಳ ನಡುವೆ ಪುಟ್ಟ ಮಗುವೊಂದು ಅನಾಥವಾಗಿ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ತಮಿಳುನಾಡಿನ ಕಾಂಚಿಪುರಂನ ಸಾತನ್ಕುಳಂ ಬಳಿ ರಸ್ತೆಯಲ್ಲಿ...
ಆ ಬಡ ಹೆಣ್ಣುಮಗಳು ಪುಟ್ಟ ಕಂದನ ಬರುವಿಕೆಯ ನೀರಿಕ್ಷೆಯಲ್ಲಿದ್ದಳು. ಅಂತೆಯೇ ಸಹಜ ಹೆರಿಗೆಯಾಗಿ ಗಂಡುಮಗುವು ಕೈಗೆ ಬಂದಿತ್ತು. ಆದರೇ ಮರುಕ್ಷಣದಲ್ಲೇ ಬಂದ ಆಸ್ಪತ್ರೆ ಸಿಬ್ಬಂದಿ ಇದು ನಿಮ್ಮ ಮಗುವಲ್ಲ. ನಿಮಗೆ ಹುಟ್ಟಿರುವುದು ಹೆಣ್ಣುಮಗು ಎಂದಿದ್ದಾರೆ. ಇದರಿಂದ ಆ ತಾಯಿ ಕಂಗಾಲಾಗಿದ್ದು, ನನಗೆ ನ್ಯಾಯಕೊಡಿಸಿ ಅಂತ ಅಂಗಲಾಚುತ್ತಿದ್ದಾಳೆ. ಹೀಗೆ ಮಕ್ಕಳ ಅದಲಿ-ಬದಲಿ ಕತೆ ನಡೆದಿದ್ದು, ಗುಲ್ಬರ್ಗಾದ...
ಮೈಸೂರು ಹನುಮಜಯಂತಿ ಗಲಾಟೆ ವೇಳೆ ಸಂಸದ ಪ್ರತಾಪ್​ ಸಿಂಹರಿಂದ ನಿಷೇಧಾಜ್ಞೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಆಯ್​ಆರ್​ನಲ್ಲಿ ಸೆಕ್ಷನ್​188 ಬಳಸಿರೋದಕ್ಕೆ ನ್ಯಾಯಾಲಯ ಅಸಮಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿರುವ ನ್ಯಾಯಾಲಯ, ನಿಯಮ ಉಲ್ಲಂಘನೆ ಮಾಡಿ ಎಫ್​ಐಆರ್​​ನಲ್ಲಿ ಸೆಕ್ಷನ್ 188 ಬಳಸಲಾಗಿದೆ. ಡಿಸಿ ವಿಧಿಸಿದ್ದ ನಿಷೇಧಾಜ್ಞೆ ಉಲ್ಲಂಘಿಸಿದರೆ ಮಾತ್ರ ಸೆಕ್ಷನ್​ 188 ಹಾಕಲು ಸಾಧ್ಯ. ಮೊದಲು 188...
ಆ ಗ್ರಾಮದಲ್ಲಿ ಸ್ವಚ್ಛತೆ ಅನ್ನೋದು ಮರೀಚಿಕೆಯಾಗಿತ್ತು. ಹೀಗಾಗಿ ಆ ಬಾಲಕಿ ಗ್ರಾಮದ ಆಡಳಿತಕ್ಕೆ ಸ್ವಚ್ಛತೆ ಕಾಪಾಡಿ ಅನ್ನೋ ಮನವಿ ಮಾಡುತ್ತಲೇ ಇದ್ದಳು. ಆದರೇ ದಪ್ಪ ಚರ್ಮದ ಅಧಿಕಾರಿಗಳು ತಲೆಕೆಡಿಸಿಕೊಳ್ಳಲೇ ಇಲ್ಲ. ಹೀಗಾಗಿ ಗ್ರಾಮದಲ್ಲಿ ಅನಾರೋಗ್ಯ ತಾಂಡವವಾಡುತ್ತಲೇ ಇತ್ತು. ಕೊನೆಗೆ ಬೇಸತ್ತ ಆ ಗ್ರಾಮದ ಬಾಲಕಿಯೇ ಚರಂಡಿಗಿಳಿದು ಸ್ವಚ್ಛತೆಗೆ ಮುಂಧಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮುಖಕ್ಕೆ ಹೊಡೆಯುವಂತೆ ಉತ್ತರಿಸಿದ್ದಾಳೆ....

ಜನಪ್ರಿಯ ಸುದ್ದಿ

ಪ್ರತಾಪ ಸಿಂಹ ಪ್ರಕರಣ- ಪೊಲೀಸರ ವಿರುದ್ಧ ನ್ಯಾಯಾಲಯ ಅಸಮಾಧಾನ

ಮೈಸೂರು ಹನುಮಜಯಂತಿ ಗಲಾಟೆ ವೇಳೆ ಸಂಸದ ಪ್ರತಾಪ್​ ಸಿಂಹರಿಂದ ನಿಷೇಧಾಜ್ಞೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಆಯ್​ಆರ್​ನಲ್ಲಿ ಸೆಕ್ಷನ್​188 ಬಳಸಿರೋದಕ್ಕೆ ನ್ಯಾಯಾಲಯ ಅಸಮಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿರುವ ನ್ಯಾಯಾಲಯ, ನಿಯಮ ಉಲ್ಲಂಘನೆ ಮಾಡಿ...