Sunday, January 21, 2018
ಮಂಗಳೂರಿನ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಗೆ ತೆರಳಿದ್ದ ಬೋಟ್ ವೊಂದು ಹೊತ್ತಿಉರಿದಿದೆ. ತಕ್ಷಣ ಅಲ್ಲಿಯೇ ಅಕ್ಕ-ಪಕ್ಕದಲ್ಲಿದ್ದ ಬೋಟ್ ನವರು ಈ ಬೋಟ್ ನಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ. ಮೀನುಗಾರಿಕೆಗೆ ತೆರಳಿದ್ದ ಈ ಬೋಟ್ ನ ಡಿಸೇಲ್ ಟ್ಯಾಂಕ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಬೋಟ್ ಬೆಂಕಿಯಿಂದ ಅರಬ್ಬಿ ಸಮುದ್ರದಲ್ಲಿ ದಟ್ಟ ಹೊಗೆ ಹಾಗೂ ಬೆಂಕಿ...
ವಯೋವೃದ್ಧನನ್ನೂ ಬಿಡಲಿಲ್ಲ ಇವರ ಹಣದ ದಾಹ.  ಆ ತಾತ ಹಣ ತೆಗೆಯಲು ATM ಬಳಿ ಹೋಗಿದ್ದಾನೆ. ಪಾಪ ವಯಸ್ಸಾದ ಕಾರಣ ಅಲ್ಲಿದ್ದ ಯುವಕರಿಗೆ ನೆರವಾಗಲು ತಿಳಿಸಿದ್ರು. ಅವರು ತಾತನಿಗೇ ಪಂಗನಾಮ ಹಾಕಿ ತಮ್ಮ ಹಣದ ದಾಹ ತೀರಿಸಿಕೊಂಡ್ರು. https://youtu.be/Ep8UdfiwT5o?t=3 ಹೌದು. ಹಣ ವಿತ್​​​ ಡ್ರಾ ಮಾಡಿಕೊಡುವ ನೆಪದಲ್ಲಿ ಹಣ ಎಗರಿಸಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮದಲ್ಲಿ...
ಆಯುಷ್ಯ ಗಟ್ಟಿ ಇದ್ದರೇ ಬಂಡೆ ಮೇಲೆ ಬಿದ್ದರೂ ಬದುಕುತ್ತಾನೆ ಅಂತಾರೆ. ಆ ಮಾತಿಗೆ ಈತನೇ ಜೀವಂತ ಸಾಕ್ಷಿ. ಹೌದು ಬೆಂಗಳೂರಿನ ಬನಶಂಕರಿ ಮೂಲದ ಖಾದರ್ ಪಾಷ ಸ್ನೇಹಿತರ ಜೊತೆ ಮಂಡ್ಯದ ಭರಚುಕ್ಕಿ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದ. ಭರಚುಕ್ಕಿ ಜಲಪಾತದ ಬಳಿ ಇರುವ ದರ್ಗಾದಲ್ಲಿ ಪೂಜೆ ಸಲ್ಲಿಸಿದ ಆತ ನೀರಿನಲ್ಲಿ ಆಟವಾಡುವ ವೇಳೆ ಕಾಲು ಜಾರಿ...
ಆ ಗ್ರಾಮದಲ್ಲಿ ಸ್ವಚ್ಛತೆ ಅನ್ನೋದು ಮರೀಚಿಕೆಯಾಗಿತ್ತು. ಹೀಗಾಗಿ ಆ ಬಾಲಕಿ ಗ್ರಾಮದ ಆಡಳಿತಕ್ಕೆ ಸ್ವಚ್ಛತೆ ಕಾಪಾಡಿ ಅನ್ನೋ ಮನವಿ ಮಾಡುತ್ತಲೇ ಇದ್ದಳು. ಆದರೇ ದಪ್ಪ ಚರ್ಮದ ಅಧಿಕಾರಿಗಳು ತಲೆಕೆಡಿಸಿಕೊಳ್ಳಲೇ ಇಲ್ಲ. ಹೀಗಾಗಿ ಗ್ರಾಮದಲ್ಲಿ ಅನಾರೋಗ್ಯ ತಾಂಡವವಾಡುತ್ತಲೇ ಇತ್ತು. ಕೊನೆಗೆ ಬೇಸತ್ತ ಆ ಗ್ರಾಮದ ಬಾಲಕಿಯೇ ಚರಂಡಿಗಿಳಿದು ಸ್ವಚ್ಛತೆಗೆ ಮುಂಧಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮುಖಕ್ಕೆ ಹೊಡೆಯುವಂತೆ ಉತ್ತರಿಸಿದ್ದಾಳೆ....
ಮೋಸ ಹೋಗುವವರು ಇರೋವರೆಗೂ ಮೋಸ ಮಾಡೋರು ಇರ್ತಾರೆ ಅನ್ನೋ ಮಾತು ಇಲ್ಲಿ ನಿಜವಾಗಿದೆ. ಅದಾಗಲೇ ಮದುವೆಯಾಗಿದ್ದ ವಂಚಕ ಖಾಸಗಿ ಬಸ್​​ ಚಾಲಕನೊರ್ವ ಎಂ.ಎ ಪದವೀಧರೆಯೊಂದಿಗೆ ಪ್ರೀತಿ-ಪ್ರೇಮದ ನಾಟಕವಾಡಿ ಆಕೆಯನ್ನು ಮದುವೆಯಾಗಿ ಇದೀಗ ಚಿತ್ರಹಿಂಸೆ ನೀಡಿ ಮನೆಯಿಂದ ಹೊರಹಾಕಿದ್ದು, ದಾರಿ ಕಾರಣ ಯುವತಿ ನ್ಯಾಯಕೋರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ತುಮಕೂರಿನ ಚಿಕ್ಕನಾಯಕನಹಳ್ಳಿ ಮಂಜುಳಾ ಹೀಗೆ ಮೋಸ ಹೋದ ಮಹಿಳೆ....
ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳೋದಕ್ಕೆ ಹೊರಟಿರೋ ಕ್ಷೇತ್ರ ಸಾಂಸ್ಕೃತಿ ನಗರಿ ಮೈಸೂರಿನ ಕೃಷ್ಣ ರಾಜ ವಿಧಾನಸಭಾ ಕ್ಷೇತ್ರ. ರಾಜಕೀಯವಾಗಿ ಅಲ್ಲದೇ ಇದ್ರೂ ಕೂಡಾ ಬೇರೆ ಬೇರೆ ಕಾರಣಗಳಿಗೆ ಈ ಕ್ಷೇತ್ರ ಸುದ್ದಿಯಾಗಿದೆ. ಸದ್ಯ ಕಾಂಗ್ರೆಸ್ ಕೈಯಲ್ಲಿರೋ ಈ ಕ್ಷೇತ್ರದಲ್ಲಿ ಈಗಿರೋ ರಾಜಕೀಯ ಸ್ಥಿತಿ ಏನು..ಈ ಬಾರಿಯ ಎಲೆಕ್ಷನ್ ನಲ್ಲಿ  ಏನಾಗಬಹುದು ಅನ್ನೋದನ್ನು...
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಬೆನ್ನಲ್ಲೇ ಪುಂಡತನ ಮೆರೆದ ಎಂಇಎಸ್​ ಮಹಾಮೇಳಾವ ಆಯೋಜಿಸಿದೆ. ಎಂಇಎಸ್​​ನ ಈ ಕೃತ್ಯ ವಿರೋಧಿಸಿ ಕರವೇ ಹಮ್ಮಿಕೊಂಡಿದ್ದು, ಬೆಳಗಾವಿಯ ವಾಕ್ಸಿನ್ ಡಿಪೋ ಬಳಿ ಟೈಯರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಮಹಾಮೇಳಾವದಲ್ಲಿ ಪಾಲ್ಗೊಂಡ ಶಾಸಕರನ್ನು ಗಡಿಪಾರು ಮಾಡುವಂತೆ ಕರವೇ ಕಾರ್ಯಕರ್ತರು ಒತ್ತಾಯಿಸಿ ಮಹಾಮೇಳಾವದತ್ತ ನುಗ್ಗಲು ಯತ್ನಿಸಿದರು. ಕರವೇ ಅಧ್ಯಕ್ಷ ಮಹಾದೇವ...
ಬೆಕ್ಕು ಮತ್ತು ನಾಯಿ ಪರಮ ಶತ್ರುಗಳು ಅಂತಾರೆ. ಎಲ್ಲೋ ರಸ್ತೆಯಲ್ಲಿ ನಾಯಿಗೆ ಬೆಕ್ಕು ಎದುರಾದ್ರೆ ನಾಯಿ ಬೆಕ್ಕನ್ನು ಅಟ್ಟಿಸಿಕೊಂಡು ಹೋಗೋದನ್ನು ನೀವೆಲ್ಲ ನೋಡಿರ್ತೀರಾ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಬೆಕ್ಕೊಂದು ನಾಯಿಮರಿಗಳ ಪಾಲಿಗೆ ಆಪ್ತವಾಗಿದ್ದು, ತಾಯಿಯಂತೆ ನಾಯಿಮರಿಗಳಿಗೆ ಹಾಲುಣಿಸಿ ಸಲಹುತ್ತಿದೆ. ಬೆಳ್ತಂಗಡಿ ತಾಲೂಕಿನ ಸೋಮಂತಡ್ಕದ ಮೋಹನ್ ನಾಯ್ಕ್ ಎಂಬುವವರ ಮನೆಯಲ್ಲಿ ಇಂತಹದೊಂದು...
ಕೋಲಾರದಲ್ಲಿ ಸೂರ್ಯ ಹುಟ್ಟುವ ಮೊದ್ಲೇ ಇಲ್ಲಿನ ಬಾರ್​ಗಳು ಕುಡುಕರನ್ನು ಸ್ವಾಗತ ಮಾಡಲು ಎದುರು ನೋಡ್ತಾ ಇರ್ತವೆ. ಜಿಲ್ಲೆಯ ಬಹುತೇಕ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 6-7 ಗಂಟೆಗೆ ಬಾರ್​ಗಳು ತೆರೆದಿರುತ್ತವೆ. ಟೀ, ತರಕಾರಿ, ದಿನಸಿ ಅಂಗಡಿಗಳು ತೆರೆಯೋ ಮುನ್ನವೇ ಇಲ್ಲಿನ ಬಾರ್​ಗಳು ಬಾಗಿಲು ತೆರೆಯುವ ಮೂಲಕ ಸರ್ಕಾರದ ಖಜಾನೆ ತುಂಬಿಸ್ತಾ ಇವೆ. ಕುಡುಕರಿಗೆ ಸ್ವರ್ಗದಂತಿರುವ ಕೋಲಾರ...
ವೈದ್ಯನ ನಿರ್ಲಕ್ಷ್ಯದಿಂದ ಗರ್ಭಿಣಿ ಮಹಿಳೆ ನರಾಳಟ ಅನುಭವಿಸಿ ಹುಟ್ಟಿದ ಮಗು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಸಕಾ೯ರಿ ಅಸ್ಪತ್ರೆಯಲ್ಲಿ ನಡೆದಿದೆ. ಶೃಂಗೇರಿ ಮೂಲದ ಪ್ರಶಾಂತ್ ಅವರ ಪತ್ನಿ ವಿನುತಾ ನಿನ್ನೆ ಮುಂಜಾನೆ 5 ಗಂಟೆಗೆ ಹೆರಿಗೆ ನೋವಿನಿಂದ ಕೊಪ್ಪ ಅಸ್ಪತ್ರೆಗೆ ದಾಖಲಾಗಿದ್ರು.   https://youtu.be/VGDcHQmBjKg ಸರ್ಕಾರಿ ಅಸ್ಪತ್ರೆಯ ವೈದ್ಯ ಡಾ.ಬಾಲಕೃಷ್ಣ ನರ್ಸ್​ಗಳ ಕೈಯಿಂದ ಸಂಜೆ 6 ಗಂಟೆಯ...

ಜನಪ್ರಿಯ ಸುದ್ದಿ

ಬೆಂಗಳೂರಿನ ಪುಂಡರ ಈ ಅಟ್ಟಹಾಸ ನೋಡಿದ್ರೆ ನೀವು ದಂಗಾಗ್ತೀರ !!

ಬೆಂಗಳೂರಿನ ನಡು ರಸ್ತೆಯಲ್ಲಿ ಪುಂಡರು ಅಟ್ಟಹಾಸ ಮರೆದಿದ್ದಾರೆ. ಹೊಸ ವರ್ಷಾಷಚರಣೆಗೂ ಮುನ್ನಾ ದಿನ ಮಧ್ಯರಾತ್ರಿ ಇಂದಿರಾನಗರದಲ್ಲಿ ಯುವತಿ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಕೆಲಸ ಮುಗಿಸಿ ಸಹೋದರರ ಜೊತೆ ಯುವತಿ ತೆರಳುತ್ತಿದ್ದಳು. ಈ ವೇಳೆ...