ಬೆಳೆ ಸಾಲ ನೀಡಲಿಲ್ಲ ಅನ್ನೋ ಕಾರಣಕ್ಕೆ ವಿಜಯಪುರ ಜಿಲ್ಲೆಯ ಕನ್ನೋಳಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​​ ಮ್ಯಾನೇಜರ್​ಗೆ ವ್ಯಕ್ತಿಯೊಬ್ಬ ಕಪಾಳ ಮೋಕ್ಷ ಮಾಡಿದ್ದಾನೆ. ಕನ್ನೋಳಿ ಗ್ರಾಮದ ಗುರುಲಿಂಗಪ್ಪ ಹಲ್ಲೆ ನಡೆಸಿದ ವ್ಯಕ್ತಿ. ಸಾಲ ಕೇಳಲು ಬಂದ ಗುರುಲಿಂಗಪ್ಪ ಹಲವು ದಿನಗಳಿಂದ ಸಾಲಕ್ಕಾಗಿ ಬ್ಯಾಂಕ್​ಗೆ ಅಲೆದಾಡುತ್ತಿದ್ದರು. ಆದ್ರೆ ಸಾಲ ಮಂಜೂರಾಗದ ಕಾರಣಕ್ಕೆ ಮ್ಯಾನೇಜರ್​​ ಅಶೋಕ ವಾಲಿ ಜತೆ ವಾಗ್ವಾದ ನಡೆಸಿ ಹಲ್ಲೆ ಮಾಡಿದ್ದಾರೆ. ಆದ್ರೆ ಗುರುಲಿಂಗಪ್ಪ ಹಾಗೂ ಸಹೋದರ ಗುರುಸಿದ್ದಪ್ಪ ನಡ್ವೆ 8 ಎಕರೆ ಜಮೀನು ಹಂಚಿಕೆ ವಿಚಾರದಲ್ಲಿ ಇದ್ದ ವ್ಯಾಜ್ಯದ ಕಾರಣಕ್ಕೆ ಸಾಲ ನೀಡಲು ಕೆವಿಜೆ ಬ್ಯಾಂಕ್​​​ನವರು ಹಿಂದೆ-ಮುಂದೆ ನೋಡಿದ್ದರು.
============

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here