ಬೈಕ್​ನಲ್ಲಿ ಪತ್ನಿ ಶವ ತಂದು ಜಿಲ್ಲಾಸ್ಪತ್ರೆಗೆ ಎಸೆದು ಹೋದ ಪಾಪಿ ಪತಿ!!!

Caught On CCTV: Husband Murdered his Wife for Trivial Reason in Yadgir.
Caught On CCTV: Husband Murdered his Wife for Trivial Reason in Yadgir.

ಇದು ಮನುಷ್ಯರೇ ಬೆಚ್ಚಿಬೀಳುವ ಅಮಾನವೀಯ ಸ್ಟೋರಿ. ಸಪ್ತಪದಿ ತುಳಿದು ಏಳೇಳು ಜನ್ಮದಲ್ಲಿ ಜೊತೆ ಆಗ್ತಿನಿ ಅಂದ ಪತಿಯೇ ಪತ್ನಿಯನ್ನು ಬರ್ಭರವಾಗಿ ಹತ್ಯೆ ಮಾಡಿದ್ದಾನೆ. ಅಷ್ಟೇ ಅಲ್ಲ ಹತ್ಯೆ ಮಾಡಿದ ಪತಿಯೇ ಪತ್ನಿಯ ಶವವನ್ನು ಬೈಕ್​ನಲ್ಲಿ ತಂದು ಜಿಲ್ಲಾಸ್ಪತ್ರೆ ಬಳಿ ಬಿಟ್ಟು ಹೋಗಿದ್ದಾನೆ. ಇದು ದೂರದ ಬಿಹಾರದಲ್ಲಿ ನಡೆದ ಘಟನೆಯಲ್ಲ ಬದಲಾಗಿ, ಗಡಿ ಜಿಲ್ಲೆ ಯಾದಗಿರಿಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆ.


ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರುಕ್ಮಾಪುರ ಗ್ರಾಮದ ಶಾಂತಮ್ಮ ಮತ್ತು  ಶಹಾಪುರ ತಾಲೂಕಿನ ವೆಂಕಟೇಶ್ ಪರಸ್ಪರ ಪ್ರೀತಿಸಿ ಕಳೆದ ಮೇ ತಿಂಗಳಲ್ಲಿ ಮದುವೆಯಾಗಿದ್ದರು. ಪಾಪಿ ವೆಂಕಟೇಶ್​ಗೆ ಈ ಮೊದಲೇ ಮದುವೆಯಾಗಿ ಮೂವರು ಮಕ್ಕಳು ಸಹ ಇದಾರೆ. ಆದರೂ ಗಾರ್ಮೆಂಟ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಶಾಂತಮ್ಮ ಮತ್ತು ವೆಂಕಟೇಶ್ ಮಧ್ಯೆ ಸ್ನೇಹವಾಗಿದೆ. ಈ ಸ್ನೇಹವು ಪ್ರೀತಿಗೆ ತಿರುಗಿ ಇಬ್ಬರು ಮದುವೆ ಕೂಡ ಆಗಿದ್ದಾರೆ.

ಆದರೇ ಶಾಂತಮ್ಮಳನ್ನು ಎರಡನೇ ಮದುವೆಯಾದ ವೆಂಕಟೇಶ್​ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಕಳೆದ ರಾತ್ರಿ ಪತ್ನಿ ಶಾಂತಮ್ಮ ಜೊತೆ ಜಗಳವಾಡಿದ ವೆಂಕಟೇಶ್, ಆಕೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಗೆಳೆಯರ ನೆರವಿನಿಂದ ಬೈಕ್​​ ಮೇಲೆ ಆಕೆಯ ಶವವನ್ನು ತಂದು ಯಾದಗಿರಿ ಜಿಲ್ಲಾಸ್ಪತ್ರೆ ಬಳಿ ತಂದು ಎಸೆದು ಪರಾರಿಯಾಗಿದ್ದಾನೆ.

ಪಾಪಿ ಪತಿ ವೆಂಕಟೇಶ್​ ಶವವನ್ನು ಜಿಲ್ಲಾಸ್ಪತ್ರೆಯಲ್ಲಿ ಎಸೆದು ಹೋದ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದ್ದು, ಈ ಭಯಾನಕ ದೃಶ್ಯ ಕಂಡು ಸಾರ್ವಜನಿಕರು ಕಂಗಾಲಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಡಗೇರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here