ಇಟ್ಟಿಗೆಯಲ್ಲೇ ಸಮಾಧಿಯಾದ ಚಲಿಸುತ್ತಿದ್ದ ಕಾರು !! ಈ ಅಪಘಾತದ ದೃಶ್ಯ ನೋಡಿದ್ರೆ ಮೈ ಜುಮ್ಮೆನಿಸುತ್ತದೆ !!

Caught on CCTV: Live Accident between Lorry and Car At China.
Caught on CCTV: Live Accident between Lorry and Car At China.

ರಸ್ತೆಯಲ್ಲಿ ಸಾಗುವ ವಾಹನಗಳ ನಡುವೆ ಹೇಗೆ ಬೇಕಾದರೂ ಅಪಘಾತವಾಗಬಹುದು. ಇದಕ್ಕೆ ತಾಜಾ ಉದಾಹರಣೆ ಚೀನಾ ಹೆದ್ದಾರಿಯೊಂದ್ರಲ್ಲಿ ಸಂಭವಿಸಿದ ರಸ್ತೆ ಅಪಘಾತ.

ad

ಚೀನಾದ ಹೆದ್ದಾರಿಯೊಂದರಲ್ಲಿ ಕಾರನ್ನು ತನ್ನ ಪಾಡಿಗೆ ಚಾಲಕ ಚಲಾಯಿಸುತ್ತಿದ್ದನು. ಯಾವುದೇ ಟ್ರಾಫಿಕ್ ವೈಲೇಶನ್ ಮಾಡದೇ ಅಪಘಾತಕ್ಕೆ ಈಡಾಗುವುದೆಂದರೆ ಹೀಗೆ ನೋಡಿ.

Caught on CCTV: Live Accident between Lorry and Car At China.
Caught on CCTV: Live Accident between Lorry and Car At China.

ತನ್ನ ಪಾಡಿಗೆ ತಾನು ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಚಾಲಕ ಹೋಗುತ್ತಿರಬೇಕಾದರೆ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಸಿಮೆಂಟ್​ ಲಾರಿಯೊಂದು ನಿಯಂತ್ರಣ ತಪ್ಪಿದೆ. ಲಾರಿಯ ಸನಿಹದಲ್ಲೇ ಸಾಗುತ್ತಿದ್ದ ಕಾರಿನ ಮೇಲೆ ಇಟ್ಟಿಗೆಗಳು ಬಿದ್ದಿವೆ. ಲಾರಿ ಮಗುಚಿ ಬಿದ್ದ ದೃಶ್ಯ ನೋಡಿದ್ರೆ ಎಂತವರೂ ಒಂದು ಕ್ಷಣ ಅವಕ್ಕಾಗಬೇಕು.

ಲಾರಿ ಹಾಗೂ ಇಟ್ಟಿಗೆಯ ಭಾರಕ್ಕೆ ಕಾರು ಅಪ್ಪಚ್ಚಿಯಾಗಿದ್ದು, ಅದೃಷ್ಟವಶಾತ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೈ ಜುಮ್ಮೆನಿಸುವ ಈ ಅಪಘಾತ ನಡೆದಿರೋದು ಚೀನಾದಲ್ಲೇ ಆದರೂ ಜನ ತಾವೇ ನಿತ್ಯ ಸಂಚರಿಸೋ ರಸ್ತೆಯಲ್ಲಿ ನಡೆದ ಅಪಘಾತವೆಂಬಂತೆ ಬೆಚ್ಚಿ ಬಿದ್ದಿದ್ದಾರೆ.

Watch Here: https://youtu.be/O4MdWfw371o