ಲಾಂಗ್- ಮಚ್ಚುಗಳ ನರ್ತನ- ದೃಶ್ಯ ನೋಡಿ ಬಿಚ್ಚಿ ಬಿದ್ದ ಜನ!!

ಈ ದೃಶ್ಯ ನೋಡಿದ್ರೆ ಯಾವುದೋ ಚಲನಚಿತ್ರದ ಚಿತ್ರೀಕರಣ ಅಂದ್ಕೋತಿರಾ. ಆದರೇ ಖಂಡಿತಾ ಇದು ಚಲನಚಿತ್ರದ ಚಿತ್ರೀಕರಣವಲ್ಲ. ಬದಲಾಗಿ ವ್ಯಕ್ತಿಯೊಬ್ಬನ ಮೇಲೆ ನಡೆದ ಮಾರಕ ಹಲ್ಲೆ. ಮತ್ತು ಜೀವ ಉಳಿಸಿಕೊಳ್ಳಲು ಆ ವ್ಯಕ್ತಿ ನಡೆಸಿದ ಹೋರಾಟದ ಚಿತ್ರಣ.

ಹೌದು ಕೇರಳದ ತಿರುವನಂತಪುರಂನಲ್ಲಿ ನಡುರಸ್ತೆಯಲ್ಲೇ ಸಿಪಿಐ(ಎಂ) ಕಾರ್ಯಕರ್ತನ ಕೊಲೆಗೆ ಯತ್ನ ನಡೆದಿದೆ ಬೈಕ್​​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಇನ್ನೊಂದು ಬೈಕ್​ನಲ್ಲಿ ಸಾಗುತ್ತಿದ್ದ ಸಿಪಿಐ(ಎಂ) ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದಾರೆ.
ಆತ ಬೈಕ್​ನಿಂದ ಕೆಳಗೆ ಬೀಳುತ್ತಿದ್ದಂತೆ ಲಾಂಗ್​​, ಮಚ್ಚಿನಿಂದ ಹಲ್ಲೆಗೆ ಮುಂಧಾಗಿದ್ದಾರೆ. ತಕ್ಷಣ ಆತ ಬೈಕ್​ ಬಿಟ್ಟು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೂ ಓಡುವ ವೇಳೆ ದುಷ್ಕರ್ಮಿಗಳು ಮಚ್ಚು ಬೀಸಿದ್ದು, ಬೆನ್ನಿನ ಭಾಗಕ್ಕೆ ಗಾಯವಾಗಿದೆ.

ಆದರೇ ಪ್ರಾಣ ಉಳಿಸಿಕೊಳ್ಳುವಲ್ಲಿ ಆತ ಯಶಸ್ವಿಯಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗೆ ಕಿಡಿಗೇಡಿಗಳು ಸಿಪಿಐ(ಎಂ) ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ದೃಶ್ಯ, ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಕೇರಳದ ಭದ್ರತಾ ವ್ಯವಸ್ಥೆ ಹಾಗೂ ಪೊಲೀಸ್ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ.

1 ಕಾಮೆಂಟ್

Comments are closed.