ರಜನಿಕಾಂತ್​​-ಕಮಲ್​ಹಾಸನ್ ಗೆ ಅನಂತನಾಗ್ ತಿರುಗೇಟು- ವೈರಲ್​ ಆಯ್ತು ಹಿರಿಯ ನಟನ ಹೇಳಿಕೆ!

ನಾಡು-ನುಡಿಯ ಪ್ರಶ್ನೆ ಬಂದಾಗ ಕನ್ನಡ ಚಿತ್ರೋದ್ಯಮಕ್ಕಿಂತ ಮೊದಲು ಬೇರೆ ಚಿತ್ರರಂಗದ ಜನರು ಹೋರಾಟಕ್ಕೆ ಧುಮುಕುತ್ತಾರೆ ಎಂಬ ಆರೋಪವಿದೆ.

ಇದೀಗ ಈ ಆರೋಪಕ್ಕೆ ಪೂರಕ ಎಂಬಂತೆ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಹಠ ಹಿಡಿದು ತಮಿಳುನಾಡಿನಲ್ಲಿ ನಡೀತಿರೋ ಹೋರಾಟಕ್ಕೆ ಹಿರಿಯ ನಟರಾದ ರಜಿನಿಕಾಂತ್​​ ಮತ್ತು ಕಮಲ್​​ ಹಾಸನ್​ ಕೈಜೋಡಿಸಿದ್ದಾರೆ. ಆದರೇ ತಮಿಳುನಾಡಿನಲ್ಲಿ ಈ ಹೋರಾಟ ಜೋರಾಗಿದ್ದರೂ, ಅಲ್ಲಿನ ನಟರು ಈಗಾಗಲೇ ಹೋರಾಟಕ್ಕೆ ಸಾಥ್​​ ಕೊಟ್ಟು ವಾರ ಕಳೆದ್ರೂ ಸ್ಯಾಂಡಲ್​ವುಡ್​ನಲ್ಲಿ ಮಾತ್ರ ಇದಕ್ಕೆ ಸ್ಪಂದನೆ ಸಿಕ್ಕಿರಲಿಲ್ಲ. ಇದೀಗ ಹಿರಿಯ ನಟ ಅನಂತ್​​​ನಾಗ್​​ ತನ್ನದೇ ಓರಗೆಯ ರಜಿನಿ ಮತ್ತು ಕಮಲ್​ಗೆ ಟಾಂಗ್ ತಮ್ಮದೇ ಆದ ಶೈಲಿನಲ್ಲಿ ಟಾಂಗ್ ​ನೀಡಿದ್ದಾರೆ.

ವಿಡಿಯೋವೊಂದಲ್ಲಿ ಅನಂತನಾಗ್​ ಮಾತನಾಡಿರುವುದು ಈಗ ವೈರಲ್​ ಆಗಿದ್ದು, ತಮಿಳು ನಟರು ರಾಜಕೀಯಕ್ಕೆ ಇಳಿಯುತ್ತಿದ್ದ ಹಾಗೇ ಥೇಟ್​ ರಾಜಕಾರಣಿ ಥರಾ ಆಡ್ತಿದ್ದಾರೆ ಅಂತಾ ಅನಂತನಾಗ್​ ಕಿಡಿಕಾರಿದ್ದಾರೆ. ಇದೀಗ ಅನಂತ್​ನಾಗ್​ ಅವರ ಕಾವೇರಿ ಕಾಳಜಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​​ ಆಗ್ತಿದ್ದು, ಹೋರಾಟದ ಕುರಿತು ಮಾತನಾಡದ ಇತರ ನಾಯಕರ ವಿರುದ್ಧ ಟೀಕೆಯೂ ವ್ಯಕ್ತವಾಗಿದೆ.