ಅತ್ತ ಕಾವೇರಿ ನೀರಿಗಾಗಿ ಸಂಘರ್ಷ, ಇತ್ತ ಯವ ಬ್ರಿಗೇಡ್ ತಂಡದಿಂದ ಕಾವೇರಿ ಸ್ವಚ್ಛತಾ ಕಾರ್ಯ!!

ಕಾವೇರಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ಪರಸ್ಪರ ಸಂಘರ್ಷದಲ್ಲಿ ತೊಡಗಿದ್ದರೆ ಇತ್ತ ಕಾವೇರಿ ಹುಟ್ಟೂರು ಕೊಡಗಿನಲ್ಲಿ ಮಾತ್ರ ಜೀವನದಿಯನ್ನು ಉಳಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ ತಂಡ ಕಾವೇರಿ ನದಿ ಸ್ವಚ್ಛತಾ ಕಾರ್ಯಾ ಹಮ್ಮಿಕೊಂಡಿದೆ.

adಮಡಿಕೇರಿ ತಾಲ್ಲೂಕಿನ ಬಲಮುರಿ ಗ್ರಾಮದ ಸೇತುವೆ ಬಳಿ ಸುಮಾರು ಎರಡು ಟ್ರಾಕ್ಟರ್ ಕಸವನ್ನು ನದಿಯಿಂದ ಹೊರತೆಗೆಯಲಾಯಿತು. ಈ ಸಂದರ್ಭ ಸ್ಥಳೀಯ ಜನರೂ ಸಾಥ್ ನೀಡಿದ್ರು. ಇದು ಇನ್ನೂ ಒಂದು ವಾರಗಳ ಕಾಲ ನಡೆಯಲಿದ್ದು ಕಾವೇರಿಯನ್ನು ಸ್ವಚ್ಛಗೊಳಿಸುವ ಪಣತೊಡಲಾಗಿದೆ.