ಪರಿಸರ ಕಾಪಾಡುವ ವಾಗ್ದಾನದ ಜೊತೆ ಪ್ರೆಂಡ್​ಶಿಫ್​ ಡೇ ಆಚರಣೆ- ಕಲ್ಬುರ್ಗಿಯಲ್ಲೊಂದು ವಿಭಿನ್ನ ಪ್ರಯತ್ನ!

 

ಇಂದು ವಿಶ್ವದ ಎಲ್ಲೆಡೆ ಸ್ನೇಹದಿನಾಚರಣೆ ಆಚರಿಸಲಾಗುತ್ತದೆ. ಸ್ನೇಹಿತರಿಗೆ ಪರಸ್ಪರ ಬ್ಯಾಂಡ್‌ಗಳನ್ನ ಕಟ್ಟಿ ಸಿಹಿ ತಿನ್ನಿಸಿ ಶುಭಾಶಯಗಳನ್ನ ವಿನಿಮಯ ಮಾಡಿಕೊಳ್ಳೊದು ಕಾಮನ್. ಆದರೆ ಕಲಬುರಗಿ‌ ನಗರದ ‘ನಮ್ಮ ಸಂಕಲ್ಪ ಫೌಂಡೇಶನ್ ವತಿಯಿಂದ ಫ್ರೆಂಡ್‌ಶಿಪ್ ಡೇ ಯನ್ನ ವಿಶಿಷ್ಟವಾಗಿ ಪರಿಸರ ದಿನವನ್ನಾಗಿ ಆಚರಿಸಲಾಯಿತು.

 

 

ಸ್ನೇಹದ ಸಂಕೇತವಾಗಿ ಸಸಿಗಳನ್ನ ನೆಟ್ಟು ಅವುಗಳಿಗೆ ಫ್ರೆಂಡ್‌ಶಿಪ್ ಡೇ ಬ್ಯಾಂಡ್‌ಗಳನ್ನ ಕಟ್ಟಿ ತಮ್ಮ ಪರಿಸರ ಕಾಳಜಿಯನ್ನ ಎತ್ತಿ ತೋರಿಸಿದರು. ಕಲಬುರಗಿಯ ವಿಠಲ ನಗರದ ಹನುಮಾನ‌ ದೇವಸ್ಥಾನದ ಮಹಾನಗರ ಪಾಲಿಕೆ ಉದ್ಯಾನವನದಲ್ಲಿ ‘ನಮ್ಮ ಸಂಕಲ್ಪ ಫೌಂಡೇಶನ್’ ವತಿಯಿಂದ ಆಯೋಜಿಸಲಾಗಿದ್ದ ಸ್ನೇಹಿತರ ದಿನಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್ ಶಶಿಕುಮಾರ್ ಸಸಿಗಳನ್ನ ನೆಟ್ಟು ಅವುಗಳಿಗೆ ನೀರು ಉಣಿಸುವುದರ ಮೂಲಕ ಗಿಡ ಮರಗಳನ್ನ ತಮ್ಮ ಸ್ನೇಹಿತರಂತೆ ನೋಡಿ ಅವುಗಳನ್ನ ಪ್ರತಿಯೊಬ್ಬರ ಪೋಷಿಸುವಂತೆ ಕರೆ ನೀಡಿದರು. ಅಲ್ಲದೇ, ಪಾಲಿಕೆ ಅಡಿಯಲ್ಲಿ ಬರುವ  ವಿವಿಧ ಬಗೆಯ ಗಿಡಗಳನ್ನ ನೆಟ್ಟು ಅವುಗಳನ್ನ ಬ್ಯಾಂಡ್‌ಗಳನ್ನ ಕಟ್ಟಿದರು.

ಈ ವೇಳೆ ಮಾತನಾಡಿದ ಜಿಲ್ಲಾ ವರಿಷ್ಠಾಧಿಕಾರಿ ಶಶಿಕುಮಾರ್, ಪರಿಸರದ ಬಗ್ಗೆ ಬಹುತೇಕರು ಕಾಳಜಿ ವಹಿಸದೆ ಇರೋದರಿಂದ‌ ದಿನೇ ದಿನೇ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಸ್ವಚ್ಚಂದವಾಗಿ ಉಸಿರಾಡಲು ಕಷ್ಟವಾಗುತ್ತಿರುವ ದಿನಗಳಲ್ಲಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಅಂತಾ ಕರೆ ನೀಡಿದರು.