ಬಿಜೆಪಿ ಆರ್ ಎಸ್ ಎಸ್ ಭಜರಂಗದಳದವರೇ ಉಗ್ರಗಾಮಿಗಳು !! ಸಿಎಂ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ !

ರಾಜ್ಯದಲ್ಲಿ ಹಿಂದು ಮತ್ತು ವಿವಿಧ ಸಂಘಟನೆಯ ಕಾರ್ಯಕರ್ತರ ಕೊಲೆ ಹಾಗೂ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 ಚಾಮರಾಜನಗರದ ನಾಗವಳ್ಳಿಯಲ್ಲಿರುವ ನಡೆಯುತ್ತಿರುವ ಸಾಧನ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಭಜರಂಗದಳ,ಆರ್.ಎಸ್​.ಎಸ್​​ ಹಾಗೂ ಬಿಜೆಪಿಯವರೇ ಉಗ್ರಗಾಮಿಗಳು ಎಂದಿದ್ದಾರೆ. ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಪಿಎಫ್ ಐ ನಂಟು ಎಂಬ ಶಂಕೆ, ಈ ಬಗ್ಗೆ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ. ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.ಬಿಜೆಪಿಯವರು, ಬಜರಂಗದಳ ಹಾಗೂ ಆರ್ ಎಸ್ ಎಸ್ ನವರೇ ಉಗ್ರಗಾಮಿಗಳು. ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯಿಲ್ಲ.ಸಮಾಜದ ಶಾಂತಿ ಕದಡುವ ಆರೆಸ್ಸೆಸ್ ಆಗಲಿ, ಪಿಎಫ್ ಐ ಆಗಲಿ ಮತ್ಯಾವುದೇ ಸಂಘಟನೆಯಾದ್ರೂ ನಾವು ಕ್ರಮ ತೆಗೆದುಕೊಳ್ತೇವೆ.
ಕೋಮುವಾದ ಸಂಘಟನೆಗಳನ್ನ ಸಹಿಸುವುದಿಲ್ಲ ಎಂದರು.

ಇನ್ನು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ರಾಜ್ಯದಾದ್ಯಂತ ಖಂಡನೆ ವ್ಯಕ್ತವಾಗಿದ್ದು, ಬಿಜೆಪಿ ನಾಯಕರು ಸೇರಿದಂತೆ ವಿವಿಧ ಸಂಘಟನೆಯ ನಾಯಕರು ಸಿಎಂ ಹೇಳಿಕೆಗೆ ತೀವ್ರಖಂಡನೆ ವ್ಯಕ್ತಪಡಿಸಿದ್ದಾರೆ. ಬಿಟಿವಿ ಮಾತನಾಡಿದ ಆರ್.ಎಸ್.ಎಸ್​. ಮುಖಂಡ ಕಲ್ಕಡ್​​ ಪ್ರಭಾಕರ್​ ಭಟ್,​ ಇದು ಹುಚ್ಚು ಸರ್ಕಾರದ ಹತ್ತು ಮುಖ. ದೇಶ ಸಮಾಜವನ್ನು ಒಡೆಯುವ ಯತ್ನವನ್ನು ಕಾಂಗ್ರೆಸ್​​ 70 ವರ್ಷಗಳಿಂದ ಮಾಡುತ್ತಿದೆ. ಇದು ಕೂಡ ಇಂತಹುದೇ ಒಂದು ಪ್ರಯತ್ನ ಎಂದರು. ಇನ್ನು ಸಿಎಂ ಸಿದ್ಧರಾಮಯ್ಯ ಹೇಳಿಕೆಗೆ ಸ್ವಪಕ್ಷಿಯರಾದ ಎಚ್​.ವಿಶ್ವನಾಥ ಕೂಡ ಸಿಎಂ ಉಗ್ರಗಾಮಿ ಪದ ಬಳಸಬಾರದಿತ್ತು. ಒಂದು ವೇಳೆ ಬಿಜೆಪಿ, ಆರ್.ಎಸ್.ಎಸ್. ಉಗ್ರಗಾಮಿ ಸಂಘಟನೆಗಳೇ ಆಗಿದ್ದರೆ ಕ್ರಮ ಕೈಗೊಳ್ಳಿ ಎಂದರು. ಒಟ್ಟಿನಲ್ಲಿ ಸಿಎಂ ಹೇಳಿಕೆ ರಾಜ್ಯದಲ್ಲಿ ಹೊಸತೊಂದು ವಿವಾದ ಸೃಷ್ಟಿಸಿದ್ದು, ಪರ ವಿರೋಧ ಚರ್ಚೆ ತೀವ್ರಗೊಂಡಿದೆ.