ಹಿಮವದ್ ವೇಣುಗೋಪಾಲಸ್ವಾಮಿಗೆ ಗಜನಮನ- ಇದು ತರ್ಕಕ್ಕು ನಿಲುಕದ ಕಾಡಾನೆ

ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಆನೆಯೊಂದು ಪ್ರತಿನಿತ್ಯ ಬಂದು ನಮಿಮಿಸಿ ಪ್ರಸಾದ ಸ್ವೀಕರಿಸಿ ಹೋಗುತ್ತೆ…!! ಅರೆ ಇದೇನು ಹೊಸ ಸುದ್ದಿನಾ ಅಂತಾ ಮೂಗು ಮುರಿಯಬೇಡಿ. ಇದು ದೇವಾಲಯದಲ್ಲಿ ಸಾಕಿರುವ ಆನೆಯಂತು ಅಲ್ಲವೆ ಅಲ್ಲಾ…!! ಇದು ಕಾಡಾನೆ…!!
ಹೌದು ಹಲವು ಪ್ರಸಿದ್ದ ದೇವಾಯಗಳಲ್ಲಿ ಆನೆಗಳನ್ನು ಸಾಕುತ್ತಾರೆ. ಆ ಆನೆಗಳು ದೇವರಿಗೆ ನಮಿಸಿ ದೇವರ ಪ್ರಸಾದ ಸ್ವೀಕರಿಸಿ ಭಕ್ತರಿಗೂ ಆಶಿರ್ವಾದ ಮಾಡಿ ಹೋಗುವುದನ್ನ ನೀವು ನೋಡಿದ್ದಿರಿ. ಆದ್ರೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಇರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ ಒಂಟಿ ಸಲಾಗವೊಂದು ಬಂದು ನಮಸ್ಕರಿಸಿ ಪ್ರಸಾದ ಸ್ವೀಕರಿಸಿ ಹೋಗುತ್ತಿದೆ.

ad

ಸಾಮಾನ್ಯವಾಗಿ ಸಾಕಿರುವ ಆನೆಗಳು ಈ ರೀತಿ ಮಾಡುವುದು ಸರ್ವೇ ಸಾಮಾನ್ಯ ಆದರೆ ಕಾಡಿನ ಆನೆ ಈ ನಡೆ ಎಲ್ಲರಿಗೂ ಅಚ್ಚರಿಯುಂಟು ಮಾಡಿದೆ. ಕಳೆದ ನಾಲ್ಕೈದು ತಿಂಗಳಿಂದ ಇದೇ ರೀತಿ ಪ್ರತಿನಿತ್ಯ ಸಂಜೆ ವೇಳೆ ದೇವಾಲಯಕ್ಕೆ ಈ ಸಲಗ ಬಂದು ಹೋಗುತ್ತಿದೆ. ಆದರೆ ಕಳೆದ 15 ದಿನಗಳಿಂದ ಪ್ರತಿನಿತ್ಯ ದೇವಾಲಯಕ್ಕೆ ಆನೆ ಭೇಟಿ ನೀಡಿ ಪ್ರಸಾದ ಸ್ವೀಕರಿಸುತ್ತಿರುವುದು ಅಚ್ಚರಿಗೆ ಕಾರಣ ವಾಗಿದೆ. ಕೆಲವರು ಈ ಆನೆ ದೇವರ ಭಕ್ತ ಎಂದು ಬಣ್ಣಿಸುತ್ತಿದ್ದಾರೆ. ಇನ್ನು ಕೆಲವರು ಕಾಡಿನ ಆನೆ ನೋಡಿದ ಖುಷಿಗೆ ಆನೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ.