ಸಮುದ್ರ ಸೇರುತ್ತಿದೆ ಕೆಮಿಕಲ್ಸ್​​- ವಂಶಾಭಿವೃದ್ಧಿ ನಡೆಸಲಾಗದೇ ಪರದಾಡುತ್ತಿದೆ ಕಡಲಾಮೆ-ಇದು ಕರಾವಳಿಯ ದುರಂತೆ ಕತೆ!

 

ad


ಕಡಲಾಮೆ ಹೆಸರು ನೀವು ಕೇಳೇ ಇರ್ತೀರಾ. ಕಡಲ ತೀರದ ಜನರಿಗೆ ಈ ಹೆಸರು ತೀರಾ ಪರಿಚಿತ. ಆದ್ರೆ ಈ ಸಮುದ್ರ ವಾಸಿ ಜೀವಿಗೆ ಇಂದು ಅಪಾಯ ಎದುರಾಗಿದೆ. ಹೌದು ಕರ್ನಾಟಕ ಕರಾವಳಿ ತೀರಕ್ಕೆ ಸಂತಾನೋತ್ಪತ್ತಿ ಮಾಡಲು ಇಂದು ಕಡಲಾಮೆಗಳು ಬರುತ್ತಿಲ್ಲ. ಇದಕ್ಕೆ ಕಾರಣ ಮಾನವನ ದುರಾಸೆಯಿಂದ ಸಮುದ್ರ ಸೇರುತ್ತಿರುವ ಕೆಮಿಕಲ್ಸ್​​ಗಳು.
ಹೌದು ಹಲವು ವರ್ಷಗಳ ಹಿಂದೆ ಮಂಗಳೂರಿನ ಸಸಿಹಿತ್ಲು ಕಡಲ ಕಿನಾರೆ, ಸುಲ್ತಾನ್ ಬತ್ತೇರಿ, ಸೋಮೇಶ್ವರ, ಮರವಂತೆ, ಭಟ್ಕಳದ ಜಾಲಿ ಕಡಲ ಕಿನಾರೆಗಳಿಗೆ ಕಡಲಾಮೆಗಳು ಮೊಟ್ಟೆಯಿಡಲು ಬರುತ್ತಿದ್ದವು. ಸುಮಾರು ಎರಡು ಸಾವಿರ ನಾಟಿಕಲ್ ಮೈಲು ದೂರದಿಂದ ಬೃಹತ್ ಸಂಖ್ಯೆಯಲ್ಲಿ ಈ ಸಮುದ್ರ ಜೀವಿಗಳು ದಡಕ್ಕೆ ಬಂದು ಮೊಟ್ಟೆಯಿಟ್ಟು ವಂಶಾಭಿವೃದ್ದಿ ಮಾಡ್ತಿದ್ದವು. ಮರಳಿನ ಶಾಖಕ್ಕೆ ಮೊಟ್ಟೆಗಳು ಒಡೆದು ಮರಿಯಾಗಿ ಮತ್ತೆ ಸಮುದ್ರ ಸೇರುತ್ತಿದ್ದವು. ಆದ್ರೆ ಈಗ ಕಾಲ ಬದಲಾಗಿದೆ. ಸಮುದ್ರ ಕೂಡ ಕಲುಷಿತವಾಗುತ್ತಿದೆ. ಹೀಗಾಗಿ ಕಡಲಾಮೆಗಳು ಅಳಿವಿನ ಭೀತಿ ಎದುರಿಸಲಾರಂಭಿಸಿದೆ.

ದೂರದಿಂದ ಮೊಟ್ಟೆಯಡಲು ಬರುತ್ತಿದ್ದರೂ ತೀರಕ್ಕೆ ಬರಲು ಸಾಧ್ಯವಾಗದೇ ವಾಪಾಸ್ ಹೋಗ್ತಿವೆ. ಇದಕ್ಕೆ ಕಾರಣ ಮಾನವನ ದುರಾಸೆ ಹಾಗೂ ನಿರ್ಲಜ್ಜ ಮನಸ್ಥಿತಿ. ಕರಾವಳಿಗೆ ಅಭಿವೃದ್ದಿಯ ಹೆಸರಿನಲ್ಲಿ ಬರುತ್ತಿರೋ ನೂರಾರು ಕಂಪನಿಗಳು ತಮ್ಮ ಕೆಮಿಕಲ್ ತ್ಯಾಜ್ಯವನ್ನು ಸಮುದ್ರಕ್ಕೆ ಬಿಡುತ್ತಿವೆ. ಜೊತೆಗೆ ನಗರದ ಒಳಚರಂಡಿ ತ್ಯಾಜ್ಯಗಳೂ ನದಿ ಸೇರಿ ಆ ಮೂಲಕ ಸಮುದ್ರ ಸೇರುತ್ತೆ. ಇದರ ಪರಿಣಾಮ ಕರಾವಳಿ ಸಮುದ್ರ ತೀರ ಮಲಿನಗೊಂಡು ಕೆಮಿಕಲ್ ತ್ಯಾಜ್ಯದ ಗೋಡೆ ನಿರ್ಮಾಣವಾಗಿದೆ. ಇದು ಕಡಲಾಮೆ ಪಾಲಿಗೆ ಗಂಡಾಂತರವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಅಪರೂಪದ ಜಲಚರಗಳ ಉಳಿವಿಗೆ ಸ್ಪಂದಿಸಿದೆ.