ಮುಖ್ಯಮಂತ್ರಿ ತೇಜೋವಧೆ – ಇಬ್ಬರ ಬಂಧನ !! ಫೇಸ್ ಬುಕ್ ಬಳಕೆದಾರರೇ ಎಚ್ಚರ !! ಎಚ್ಚರ !!

ಸಾಮಾಜಿಕ ಜಾಲತಾಣದಲ್ಲಿ ಯಾರದ್ದೇ ತೇಜೋವಧೆ ಮಾಡಿದ್ರೆ ಜೈಲು ಗ್ಯಾರಂಟಿ. ಈಗಾಗಲೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವಹೇಳನ ಮಾಡಿದ ಇಬ್ಬರನ್ನು ಬೆಂಗಳೂರು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ. ಫೇಸ್ ಬುಕ್ ನಲ್ಲಿ ಮುಖ್ಯಮಂತ್ರಿಗಳನ್ನು ಅವಹೇಳನ ಮಾಡುತ್ತಿದ್ದ ಚೌಕಿದಾರ್ ಅಜಿತ್ ಶೆಟ್ಟಿ, ಯುಕೆಸುದ್ದಿ ಡಾಟ್ ಇನ್ ಎಂಬ ವೆಬ್ ಸೈಟ್ ಅವಹೇಳನ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

 

 

ಲೋಕಸಭಾ ಚುನಾವಣಾ ಒತ್ತಡದಿಂದ ಅನಾರೋಗ್ಯಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಉಡುಪಿಯ ಬೀಚ್ ರೆಸಾರ್ಟ್ ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ‌. ಇದನ್ನೇ ದುರ್ಲಾಭ ಮಾಡಿಕೊಂಡ ಕೆಲವರು ಎಚ್ ಡಿಕೆ ಬಗ್ಗೆ ಅಪಪ್ರಚಾರಕ್ಕೆ ಶುರುವಿಟ್ಟುಕೊಂಡಿದ್ದಾರೆ. ಯುಕೆಸುದ್ದಿ ಡಾಟ್ ಇನ್ ಎಂಬ ವೆಬ್ ಸೈಟಿನಲ್ಲಿ ಇದೇ ರೀತಿ ಮುಖ್ಯಮಂತ್ರಿ ವಿರುದ್ದ ಅವಹೇಳನ ಮಾಡಲಾಗಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಹಳೇ ಫೋಟೋವನ್ನು ಬಳಸಿಕೊಂಡು ಚಿಕಿತ್ಸಾ ಸಮಯದ ರೆಸಾರ್ಟ್ ವಾಸವನ್ನು ಹೋಲಿಕೆ ಮಾಡಿ ತೇಜೋವಧೆ ಮಾಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿಗಳ ತೇಜೋವಧೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ಎಚ್ ಬಿ ದಿನೇಶ್ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದು ಅಜಿತ್ ಶೆಟ್ಟಿ ಸೇರಿ ದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಈಗೀಗ ನಕಲಿ ವೆಬ್ ಸೈಟ್ ಗಳು ಹಾವಳಿ ಜಾಸ್ತಿಯಾಗುತ್ತಿದೆ. ವೆಬ್ ಸೈಟ್ ಗಳಲ್ಲಿ ಗಣ್ಯ ವ್ಯಕ್ತಿಗಳು, ಪ್ರತಿಷ್ಠಿತ ಸಂಸ್ಥೆಗಳ ವಿರುದ್ದ ಸುದ್ದಿ ಬರೆದು ಅದನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಲಾಗುತ್ತಿದೆ. ಈ ರೀತಿ ಸುದ್ದಿ ಬರೆದ ವೆಬ್ ಸೈಟ್ ಮತ್ತು ಅದನ್ನು ಶೇರ್ ಮಾಡಿದ ವ್ಯಕ್ತಿಗಳ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅರೆಸ್ಟ್ ಮಾಡಿರೋದು ಸಾಮಾಜಿಕ ಜಾಲತಾಣಿಗರಿಗೆ ಒಂದು ಎಚ್ಚರಿಕೆಯಾಗಿದೆ. ಇನ್ನು ಮುಂದೆ ಪೋಸ್ಟ್ ಹಾಕುವವರು, ವೆಬ್ ಸೈಟ್ ಗಳಲ್ಲಿ ಸುಳ್ಳುಸುದ್ದಿ ಬರೆಯುವವರು, ಅನಧಿಕೃತ ವೆಬ್ ಸೈಟ್ ಗಳಲ್ಲಿ ಬಂದಿರೋದನ್ನು ಶೇರ್ ಮಾಡುವವರು ಜಾಗೃತೆ ವಹಿಸಿದರೆ ಒಳ್ಳೆಯದು.