ಆ ಹುಡುಗಿಯರು ಕಾಲೇಜಿಗೆ ಕಲ್ಲು ಎಸೆದಿದ್ಯಾಕೆ ಗೊತ್ತಾ?

ಅವರೆಲ್ಲ ಆ ಕಾಲೇಜಿನಲ್ಲಿ ಶ್ರದ್ದೆಯಿಂದ ಓದುತ್ತಿದ್ದರು. ಎಕ್ಸಾಂ ಮುಗಿಸಿ ಬದುಕು ಕಟ್ಟಿಕೊಳ್ಳುವ ಭರವಸೆಯಲ್ಲಿದ್ದ ಅವರಿಗೆ ಮಹಿಳಾ ದಿನಾಚರಣೆಯಂದೇ ಶಾಕ್​ವೊಂದು ಕಾದಿತ್ತು.

ಹೌದು ಖಾಸಗಿ ಪಾಲಿಟೆಕ್ನಿಕ್​ ಕಾಲೇಜ್​ ಇದ್ದಕ್ಕಿದಂತೆ ಬಾಗಿಲು ಮುಚ್ಚಲಾಗಿದ್ದು, ಆಕ್ರೋಶಗೊಂಡ ವಿದ್ಯಾರ್ಥಿನಿಯರು ಕಾಲೇಜಿಗೆ ಕಲ್ಲೆಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಗ್ರಾಮದ ಇಡಗೂರಿನಲ್ಲಿ ಘಟನೆ ನಡೆದಿದೆ. ಇಲ್ಲಿನ ಪಾಲಿಟೆಕ್ನಿಕ್​ ಮಹಿಳಾ ಕಾಲೇಜನ್ನು ಧೀಡಿರ ಎಂದು ಮುಚ್ಚಲಾಗಿದೆ. ಇದರಿಂದ 91 ವಿದ್ಯಾರ್ಥಿಗಳು ಬೀದಿಪಾಲಾಗಿದ್ದಾರೆ. ಮುಂದಿನ ತಿಂಗಳು ಎಕ್ಸಾಂ ನಡೆಯಲಿದ್ದು, ಈಗ ಕಾಲೇಜಿನ ಬಾಗಿಲು ಮುಚ್ಚಿರುವ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಬೇರೆಡೆ ವರ್ಗಾವಣೆ ಮಾಡಿಕೊಳ್ಳುವಂತೆ ಸೂಚಿಸಿದೆ.

ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಕಾಲೇಜಿಗೆ ಕಲ್ಲು ತೂರಿ ಗಾಜು ಪುಡಿ-ಪುಡಿ ಮಾಡಿದ್ದು, ಆಕ್ರೋಶ ತೋಡಿಕೊಂಡಿದ್ದಾರೆ. ಮಹಿಳಾ‌ ದಿನಾಚರಣೆಯಂದೇ ಮಹಿಳಾ ವಿದ್ಯಾರ್ಥಿನಿಯರ ಆಕ್ರೋಶ ಬಯಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಜನರು ವಿದ್ಯಾರ್ಥಿನಿಯರ ಆಕ್ರೋಶ ಕಂಡು ಕಂಗಾಲಾಗಿದ್ದಾರೆ.