ಹುಡುಗಿಯರನ್ನು ಕುಣಿಸಿ ಜನ ಸೇರಿಸಿದ ಬಿಜೆಪಿ ‘ಪರಿವರ್ತನಾ ಯಾತ್ರೆ’ !! ಅಲ್ಲಾಡ್ಸು ಅಲ್ಲಾಡ್ಸು ಡ್ಯಾನ್ಸ್ ಗೆ ಪರಿವರ್ತನೆಯಾದ ಸಂಸ್ಕೃತಿಯ ಪಕ್ಷ !!

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಗೌರಿಬಿದನೂರಿನಿಂದ ಬಿಜೆಪಿ ಪರಿವರ್ತನಾ ಯಾತ್ರೆ ಆರಂಭಗೊಂಡಿದ್ದು ಅದಕ್ಕಾಗಿ ಹುಡುಗಿಯರಿಂದ ಅಶ್ಲೀಲ ಅರ್ಥವುಳ್ಳ ಅನಗತ್ಯ ಹಾಡಿಗೆ ಹುಡುಗಿಯರನ್ನು ಕುಣಿಸಲಾಗಿದೆ.

 ಬಾಗೇಪಲ್ಲಿಯಲ್ಲಿ ಜನರನ್ನು ಸೆಳೆಯಲು ಬಿಜೆಪಿ ಮುಖಂಡ ಅರಿಕೆರೆ ಸಿ.ಕೃಷ್ಣಾರೆಡ್ಡಿ ಅವರು ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿದ ವೇದಿಕೆಯಲ್ಲಿ ಬೆಳಿಗ್ಗೆಯಿಂದಲೇ ಆರ್ಕೆಸ್ಟ್ರಾದೊಂದಿಗೆ ಯುವತಿಯರ ನೃತ್ಯ ಆಯೋಜಿಸಿದ್ದಾರೆ. ಹುಡುಗಿಯರು ಮಾಧಕ ರೀತಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಪಟ್ಟಣದ ಎಚ್‌.ಎನ್‌.ವೃತ್ತದಲ್ಲಿ ಹಾಕಿದ ವೇದಿಕೆಯಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ಆರಂಭಗೊಂಡ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಐದು ಯುವತಿಯರು ಬಗೆಬಗೆಯ ಹಾಡಿಗೆ ಮೈಬಳುಕಿಸಿ ಹೆಜ್ಜೆ ಹಾಕುತ್ತ ಕುಣಿಯುತ್ತಿದ್ದಾರೆ. ವೇದಿಕೆ ಬಳಿ ನೆರೆದಿರುವ ನೂರಾರು ಜನರು ನೃತ್ಯ ನೋಡಿ ಕೇಕೆ, ಶಿಳ್ಳೆ ಹೊಡೆಯುತ್ತಿದ್ದಾರೆ. ಕೆಲ ಯುವಕರು, ಸಾರ್ವಜನಿಕರು ಕೂಡ ಯುವತಿಯರಿಗೆ ಸಾಥ್ ನೀಡಿ ಹೆಜ್ಜೆ ಹಾಕುತ್ತಿರುವ ದೃಶ್ಯಗಳು ಕಂಡುಬಂದವು.

ಬಹಿರಂಗ ವೇದಿಕೆಯಲ್ಲಿ ‘ಅಲ್ಲಾಡ್ಸು ಅಲ್ಲಾಡ್ಸು’ ಹಾಡು ಸೇರಿದಂತೆ ಅನೇಕ ಗೀತೆಗಳಿಗೆ ವೇದಿಕೆ ಮೇಲಿದ್ದವರೆಲ್ಲ ತೋರಿದ ಮಾದಕ ಕುಣಿತಕ್ಕೆ ಅನೇಕ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ನಿಗದಿಯಂತೆ ಬಾಗೇಪಲ್ಲಿಯಲ್ಲಿ ಮಧ್ಯಾಹ್ನ 1 ಗಂಟೆಗೆ ಯಾತ್ರೆ ನಡೆಯಬೇಕಿತ್ತು. ಆದರೆ ಗೌರಿಬಿದನೂರಿನಲ್ಲಿ 11 ಗಂಟೆಗೆ ಆರಂಭವಾಗಬೇಕಾದ ಯಾತ್ರೆ ಸುಮಾರು ಒಂದೂವರೆ ಗಂಟೆ ತಡವಾಗಿ ಆರಂಭಗೊಂಡಿತು. ತಡವಾಗಿದ್ದರಿಂದ ಜನರು ಕಾರ್ಯಕ್ರಮದಿಂದ ತೆರಳಬಹುದು ಎಂಬ ಭಯದಿಂದ ಈ ರೀತಿ ಹುಡುಗಿಯರ ಕುಣಿತವನ್ನು ಏರ್ಪಡಿಸಲಾಗಿತ್ತು. ಬಿಜೆಪಿ ಪರಿವರ್ತನಾ ರ‌್ಯಾಲಿಗಾಗಿ ಈ ರೀತಿ ಕೆಳಮಟ್ಟದಲ್ಲಿ ಯೋಚಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here