ದೀಪಕ್​ ಸ್ಥಿತಿಯೇ ನಿಮಗೂ ಆಗುತ್ತೆ- ಅಂಚೆಯಲ್ಲಿ ಸಿ.ಟಿ.ರವಿಗೆ ಬಂತು ಕೊಲೆ ಬೆದರಿಕೆ

ರಾಜ್ಯದಲ್ಲಿ ಚುನಾವಣೆ ಅಧಿಕೃತ ಘೋಷಣೆಗೂ ಮುನ್ನವೇ ಜನಪ್ರತಿನಿಧಿಗಳ ಮೇಲೆ ಕೆಂಗಣ್ಣು ಬಿದ್ದಿದ್ದು, ಬಿಜೆಪಿ ಪ್ರಧಾನ ಕಾರ್ಯಕದರ್ಶಿ ಹಾಗೂ ಶಾಸಕ ಸಿ.ಟಿ.ರವಿಗೆ ಜೀವಬೆದರಿಕೆ ಪತ್ರ ಬಂದಿದೆ. ರೌಡಿ ಪರ್ವೀಜ್ ಎಂಬ ಹೆಸರಲ್ಲಿ ಕೊಲೆ ಬೆದರಿಕೆ ಪತ್ರ ಬಂದಿದ್ದು,ಚಿಕ್ಕಮಗಳೂರು ನಗರದ ಬಸವನಹಳ್ಳಿಯಲ್ಲಿರುವ ಸಿಟಿ ರವಿ ಮನೆಗೆ ಅಂಚೆಯಲ್ಲಿ ಪತ್ರ ತಲುಪಿದೆ.

 ಗೌರಿ ಲಂಕೇಶ್, ಕಲಬುರ್ಗಿ ಹತ್ಯೆ ಮಾಡಿಡಿರುವುದು ಆರ್ ಎಸ್ ಎಸ್ ಎಂಬುದು ನಮಗೆ ಗೊತ್ತಿದೆ. ದೀಪಕ್ ರಾವ್ ಹತ್ಯೆ ಹಿಂದೆಯೂ ನಿಮ್ಮ ಕೈವಾಡ ಇದೆ ಎಂದು ಪತ್ರದಲ್ಲಿ ರೌಡಿ ಪರ್ವೀಜ್ ಉಲ್ಲೇಖ ಮಾಡಿದ್ದಾನೆ. ಇನ್ನು ಬೆಂಗಳೂರಿನ ಅಲ್ಲೇ ಹಾಯೀಸ್ ಗ್ರೂಪ್ ಆಪ್ ಕರ್ನಾಟಕ ಎಂದು ಪತ್ರದ ಕೊನೆ ಭಾಗದಲ್ಲಿ ನಮೂದಿಸಿದ್ದು, ಮಾಜಿ ಮುಖ್ಯಮಂತ್ರಿ ಯಡ್ಡಿಯೂರಪ್ಪ, ಈಶ್ವರಪ್ಪ, ಶೋಭಾ ಕರಂದ್ಲಾಜೆ ಬಗ್ಗೆ ಪತ್ರದಲ್ಲಿ ಅವಹೇಳನಕಾರಿಯಾಗಿ ಬರೆಯಲಾಗಿದೆ. ಇನ್ನು ದಾಬೋಲ್ಕರ್, ಪನ್ಸಾರೆ, ಗೌರಿ ಲಂಕೇಶ್, ಕಲಬುರ್ಗಿ ಅವರನ್ನು ಕೊಲೆಗೆ ಆರ್ ಎಸ್ ಎಸ್ ಹಾಗೂ ವಿಹೆಚ್ ಪಿ ಕಾರ್ಯಕರ್ತರೇ ಕಾರಣವಾಗಿದ್ದು, ರಾಜ್ಯದಲ್ಲಿ ಶಾಂತಿ ನೆಲೆಸಲು ನೀವು ಬಿಡುತ್ತಿಲ್ಲ. ಇನ್ನು ಸಿ.ಟಿ.ರವಿ ಸೇರಿದಂತೆ ವಿಹೆಚ್ ಪಿ ಹಾಗೂ ಬಿಜೆಪಿ ಶ್ರೀರಾಮಸೇನೆ ಮುಖಂಡ ರಿಗೆ ಬೆದರಿಕೆ ಪತ್ರದಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ. ಅಲ್ಲದೇ ದೀಪಕ್ ರಾವ್ ಕೊಂದಿದ್ದು ನಮ್ಮ ಹುಡುಗರೇ, ಯಾರೂ ಕೂಡ ನಮ್ಮ ಹುಡುಗರನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಬೆದರಿಕೆ ಪತ್ರದಲ್ಲಿ ಸಿ.ಟಿ.ರವಿ ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರೋ ಸಿ.ಟಿ.ರವಿ ದೀಪಕ್ ರಾವ್ ಆದ ಗತಿ ನಿಮಗೂ ಬರುತ್ತೆ ಎಂದು ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ, ಪತ್ರದ ಜೊತೆಗೆ ಅಂಚೆ ಕವರ್ ಸೇರಿ ಎಸ್ಪಿ ಅಣ್ಣಾಮಲೈ ಗೆ ದೂರು ನೀಡಿದ್ದು ಎಸ್ಪಿ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ, ನನ್ನ ಹೆಸರು ಸೇರಿದಂತೆ ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ಸದಸ್ಯರ ಹೆಸರನ್ನು ಬೆದರಿಕೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಪತ್ರ ಬೆಂಗಳೂರಿನಿಂದ ಪೋಸ್ಟ್ ಅಗಿದ್ದು ಪತ್ರವನ್ನು ಅವರೇ ಮಾಡಿದ್ದಾರೋ ಅಥವಾ ಮತ್ಯಾರೋ ಮಾಡಿದ್ದಾರೋ ನನಗೆ ಗೊತ್ತಿಲ್ಲ, ಟೈಪ್ ಮಾಡಿದ ಲೆಟರ್​ ಇದಾಗಿದೆ. ಯಾರೋ ಕೀಳುಮನಸ್ಥಿತಿಯವರು ಬರೆದ ಪತ್ರ ಇದು ಎಂದು ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಸಿ.ಟಿ.ರವಿಗೆ ಬಂದಿರುವ ಬೆದರಿಕೆ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಎಸ್​ಪಿ ಅಣ್ಣಾಮಲೈ, ಸಿ.ಟಿ.ರವಿಯವರು ನೀಡಿರುವ ಪತ್ರ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸರ್ಕಾರದಿಂದ ಈಗಾಗಲೇ ಸೆಕ್ಯೂರಿಟಿ ನೀಡಲಾಗಿದೆ. ಶಾಸಕರು ಕೇಳಿದರೇ ಇನ್ನಷ್ಟು ಭದ್ರತೆ ನೀಡಲಾಗುತ್ತದೆ. ಇನ್ನು ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ ಎಂದರು.