15 ವರ್ಷದಿಂದ ಶಾಸಕರಾಗಿ ಏನು ಮಾಡಿದ್ದೀರಿ?-ಗ್ರಾ,ಮಸ್ಥರ ನೇರ ಸವಾಲಿಗೆ ಎಮ್​ಎಲ್​ಎ ತತ್ತರ!

Chikkamagaluru: Villagers outrage against CT Ravi while asking Vote.

ಇನ್ನೇನು ಕರ್ನಾಟಕ ಕುರುಕ್ಷೇತ್ರಕ್ಕೆ ದಿನಗಣನೆ ಆರಂಭವಾಗಿದೆ. ಹೀಗಾಗಿ ಸಹಜವಾಗಿಯೇ ರಾಜಕಾರಣಿಗಳು ಮತಯಾಚನೆಗೆ ಮುಂಧಾಗುತ್ತಿದ್ದಾರೆ. ಆದರೇ ಹೀಗೆ ಮತದಾರರಿಂದ ಓಟು ಕೇಳಲು ಹೋದ ಬಿಜೆಪಿಯ ಹಿರಿಯ ರಾಜಕಾರಣಿ-ಶಾಸಕ ಸಿಟಿ ರವಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ad


ಹೌದು ನಿನ್ನೆ ತಡರಾತ್ರಿ ಶಾಸಕ ಸಿ.ಟಿ.ರವಿ ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರ ಗ್ರಾಮಕ್ಕೆ ಮತಯಾಚನೆಗೆ ತೆರಳಿದ್ದರು. ಆದರೇ ಸಿ.ಟಿ.ರವಿ ಬರುತ್ತಿದ್ದಂತೆ ಕೆರಳಿದ ಗ್ರಾಮಸ್ಥರು, 15 ವರ್ಷದಿಂದ ಶಾಸಕರಾಗಿ ಏನು ಅಭಿವೃದ್ಧಿ ಮಾಡಿದ್ದೀರಿ? ಚುನಾವಣಾ ವೇಳೆ ಮಾತ್ರ ನಮ್ಮ ಗ್ರಾಮಗಳು ನೆನಪಿಗೆ ಬರುತ್ತೆ..? ನೀವು ಅಭಿವೃದ್ಧಿ ಮಾಡುವಿರಿ ಎಂದು ಮತ ನೀಡಿದ್ದೇವೆ ಎಂದು ಗಲಾಟೆಗೆ ಮುಂಧಾಗಿದ್ದಾರೆ. ಅಲ್ಲದೇ ಈ ಹಿಂದೆ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿ ನಿಮಗೆ ಮತ ನೀಡಿದ್ದೇವೆ. ಆದರೇ ನೀವು ಗ್ರಾಮದ ಅಭಿವೃದ್ಧಿ ಮಾಡಲೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಗ್ರಾಮಸ್ಥರ ಆಕ್ರೋಶ ಎದುರಿಸಲಾಗದೇ ಮುಜುಗರ ಎದುರಿಸಿದ ಸಿ.ಟಿ.ರವಿ ಪ್ರಚಾರ ಮೊಟಕುಗೊಳಿಸಿ ವಾಪಸ್ಸಾದರು.