ಕಾಫಿನಾಡು ಚಿಕ್ಕಮಗಳೂರು ಅಂದ್ರೆ ಸಾಕು ಇಲ್ಲಿನ ಪ್ರಕೃತಿ ಸೌಂದರ್ಯ ಕಣ್ಮುಂದೆ ಬರುತ್ತೆ. ಬೆಟ್ಟ ಗುಡ್ಡಗಳ ಸಾಲು ನೆನಪಾಗುತ್ತೆ. ಬಾನಿಗೆ ಮುತ್ತಿಕ್ಕೋ ಮಂಜಿನ ರಾಶಿಯನ್ನ ಕಣ್ತುಂಬಿಕೊಳ್ಬೇಕು ಎನ್ನಿಸುತ್ತೆ. ಹೀಗಾಗಿ ಚಿಕ್ಕಮಗಳೂರು ಕರ್ನಾಟಕದ ಊಟಿ ಎಂದೇ ಫೇಮಸ್​​. ಚಂದ್ರದ್ರೋಣ ಪರ್ವತ ಶ್ರೇಣಿ ಇಲ್ಲಿ ಇರೋದ್ರಿಂದ ಜಗತ್ತಿನಲ್ಲಿ ಸುರಕ್ಷಿತವಾಗಿ ವಾಸ ಮಾಡುವ ತಾಣಗಳಲ್ಲಿ ಚಿಕ್ಕಮಗಳೂರು 2009ರಲ್ಲಿ ಎರಡನೇ ಸ್ಥಾನ ಪಡೆದಿತ್ತು. ದುರಂತ ಅಂದ್ರೆ, 2017ರ ಹೊತ್ತಿಗೆ ಟಾಪ್ 20 ಸ್ಥಾನವನ್ನು ಕೂಡ ಚಿಕ್ಕಮಗಳೂರು ಪಡೆಯದೇ ಇರೋದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.
====
ಬೈಟ್​: ಸಚ್ಚಿದಾನಂದ, ಪರಿಸರಪ್ರೇಮಿ
===
ಇನ್ನು ಚಿಕ್ಕಮಗಳೂರು ಜಿಲ್ಲೆಯ ಪ್ರಕೃತಿ ಸೌಂದರ್ಯವೂ ದಿನದಿಂದ ದಿನಕ್ಕೆ ಹಾಳಾಗ್ತಿದೆ. ಇಲ್ಲಿಗೆ ಬರುವಂತಹ ಪ್ರವಾಸಿಗರ ಮೋಜು,ಮಸ್ತಿಯಿಂದ ಪ್ರಕೃತಿ ಸೌಂದರ್ಯ ನಶಿಸಿ ಹೋಗ್ತಿದೆ. ಪ್ರವಾಸಿಗರು ಮದ್ಯ ಸೇವಿಸಿ, ಬಾಟಲಿಗಳನ್ನ ಒಡೆದು, ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡುವುದರಿಂದ ಇಲ್ಲಿನ ನೀರು ಕಲುಷಿತಗೊಳ್ತಿದ್ದು, ಬೆಟ್ಟಗುಡ್ಡಗಳ ಮಧ್ಯೆ ತಲೆಎತ್ತುತ್ತಿರೋ ಹೋಂ ಸ್ಟೇ, ರೆಸಾರ್ಟ್‍ಗಳಿಂದ್ಲೂ ಕಾಫಿನಾಡಿನ ಸೌಂದರ್ಯ ಕಡಿಮೆಯಾಗ್ತಿದೆ. ಅರಣ್ಯ ಇಲಾಖೆ ಅಭಿವೃದ್ಧಿ ಹೆಸರಲ್ಲಿ ಮಾಡ್ತಿರೋ ಕಾಮಗಾರಿಗಳು ಪರಿಸರಕ್ಕೆ ಮಾರಕವಾಗ್ತಿವೆ ಎಂದು ಸ್ತಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
======
ಬೈಟ್​​ : ಪುಟ್ಟಸ್ವಾಮಿ, ಸ್ಥಳೀಯ
===========

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here