ಭಿಕ್ಷಾಟನೆ ನಡೆಸಿದ ದತ್ತ ಮಾಲಾಧಾರಿ ಸಿ.ಟಿ.ರವಿ!!

Chikmagalur: MLA CT Ravi's held begging for Second days Datta Jayanti.

ಚಿಕ್ಕಮಂಗಳೂರಿನಲ್ಲಿ ಭಾವೈಕ್ಯತೆ ಸಂಕೇತವಾಗಿರುವ ದತ್ತಜಯಂತಿ ಶೃದ್ಧಾ ಭಕ್ತಿಯಿಂದ ಆಚರಿಸಲ್ಪಡುತ್ತಿದೆ.  ನಿನ್ನೆಯಿಂದ ಆರಂಭವಾದ ದತ್ತ ಜಯಂತಿ ಅಂಗವಾಗಿ ದತ್ತಮಾಲಾಧಾರಿಯಾಗಿರುವ  ಶಾಸಕ ಸಿ.ಟಿ ರವಿ ಭಿಕ್ಷಾಟನೆ ಮಾಡಿದ್ರು. ಚಿಕ್ಕಮಗಳೂರು ನಗರದ ನಾರಾಯಣಪುರದ 20ಕ್ಕೂ ಹೆಚ್ಚು ಮನೆಗಳಿಗೆ ತೆರಳಿದ ಸಿ.ಟಿ.ರವಿ ಭವತಿ ಭಿಕ್ಷಾಂದೇಹಿ ಎಂದು ಭಿಕ್ಷಾಟನೆ ನಡೆಸಿದ್ರು.

ಸಿ.ಟಿ.ರವಿಗೆ 20ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು  ಸಾಥ್ ನೀಡಿದ್ರು.

ಇದಲ್ಲದೇ ಮಾಲಾಧಾರಿ ದತ್ತ ಭಕ್ತರು ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡುವ ಮೂಲಕ ಭಕ್ತಾಧಿಗಳನ್ನು ದತ್ತ ಜಯಂತಿಗೆ ಆಹ್ವಾನಿಸಿದ್ರು. ನಾಳೆ ಇರುಮುಡಿ ಹೊತ್ತ ದತ್ತ ಭಕ್ತರು ದತ್ತಪೀಠಕ್ಕೆ ತೆರಳಿ ದತ್ತಾತ್ರೇಯನಿಗೆ ಇರುಮುಡಿ ಅರ್ಪಿಸಿ ಪೂಜೆ ಸಲ್ಲಿಸಲಿದ್ದಾರೆ.

ಇನ್ನು ಸಂಜೆ ಚಿಕ್ಕಮಗಳೂರು ನಗರದಲ್ಲಿ ಸಾವಿರಾರು ದತ್ತ ಭಕ್ತರಿಂದ ಬೃಹತ್ ಶೋಭಾ ಯಾತ್ರೆ ನಡೆಯಲಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಇನ್ನು ದತ್ತಮಾಲಾಧಾರಿಯಾಗಿ ಭಿಕ್ಷಾಟನೆ ನಡೆಸಿದ ಬಳಿಕ‌ ಮಾತನಾಡಿದ  ಶಾಸಕ ಸಿ.ಟಿ.ರವಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ  ಬಂದೇ ಬರುತ್ತದೆ. ನಾವು ಅಧಿಕಾರಕ್ಕೆ ಬಂದ ಒಂದೇ  ತಿಂಗಳಲ್ಲಿ ದತ್ತಪೀಠ ವಿವಾದ ಬಗೆಹರಿಸುತ್ತೇವೆ ಅಂತ ಹೇಳಿದ್ರು.

 

From the web

3 ಕಾಮೆಂಟ್ಗಳನ್ನು

  1. manyare BHIKSHATANE YEMBUDU KETTADDALLA> HINDINA DINAGALALLI MAHATVADA VISHAYAGALANNU TILIYALU>> BHIKSHATANE MADI SUDDI TILIDU RAJANU TAKKA KRAMA KAIGOLLUTTIDDUDU ITHASDA!! CID hage BHIKSHUKARU KELASA MADUTARE YENDU BAHALA JASNARIGE TILIDIRALIKKILLA!!
    2. DHARMADA KELASAKKE IVARU BHIKSHATANE MADIDARE TAPPENIDE NEEVE HELI!!

ಪ್ರತ್ಯುತ್ತರ ನೀಡಿ

Please enter your comment!
Please enter your name here