ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕಡ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ನವಿಲುಗುಡ್ಡ ಬೆಟ್ಟದಲ್ಲಿ ಸಾವಿರಾರು ನವಿಲುಗಳು ವಾಸ ಮಾಡುತ್ತವೆ. ಜೊತೆಗೆ ಕರಡಿ, ಚಿರತೆ, ಅಪರೂಪದ ಮೊಲ ಹಾಗೂ ಗಿಡುಗ ಸೇರಿದಂತೆ ವಿವಿಧ ವನ್ಯಜೀವಿಗಳು ನವಿಲುಗುಡ್ಡ ಪ್ರದೇಶದಲ್ಲಿ ವಾಸಮಾಡಿತ್ತಿವೆ. ಆದ್ರೆ ಈ ಬೆಟ್ಟದ ಸುಮಾರು 13 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಆರಂಭವಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಗಣಿಗಾರಿಕೆ ನಿಲ್ಲಿಸುವಂತೆ ಡಿಸಿ ಹಾಗೂ ತಾಲೂಕು ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಿದ್ರು ಯಾವುದೇ ಪ್ರಯೋಜನವಾಗಿಲ್ಲ. ಆದ್ರಿಂದ ಸರ್ಕಾರ ಕೂಡಲೇ ಇತ್ತ ಗಮನಹರಿಸಿ ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನ ರದ್ದುಗೊಳಿಸಬೇಕು ಹಾಗೂ ಗೋಮಾಳ ಜಾಗವನ್ನ ದನಕರುಗಳಿಗೆ ಮೇಯಿಸಲು ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಕೂಡಲೇ ತಮ್ಮ ಬೇಡಿಕೆ ಈಡೇರದಿದ್ರೆ ಉಗ್ರ ಹೋರಾಟ ಮಾಡೋದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
=====
ಬೈಟ್​ : ಸಂಪತ್, ಸ್ಥಳೀಯ
ಬೈಟ್​​ : ಸುರೇಶ್, ಸ್ಥಳೀಯ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here