ಚಿರು-ಮೇಘಾ ಕಲ್ಯಾಣಕ್ಕೆ ಡೇಟ್​ ಫಿಕ್ಸ್​​- ಮೇ 2 ರಂದು ಅದ್ದೂರಿ ಕಲ್ಯಾಣಕ್ಕೆ ಸಾಕ್ಷಿಯಾಗಲಿದೆ ಸ್ಯಾಂಡಲವುಡ್​!

ಸ್ಯಾಂಡಲವುಡ್​ನ ಮತ್ತೊಂದು ಲವ್​​ ಬರ್ಡ್ಸ್ ಕಲ್ಯಾಣಕ್ಕೆ ಸಜ್ಜಾಗ್ತಿದ್ದಾರೆ. ಗಂಡೆದೆ ಹುಡ್ಗ ಚಿರು ಜತೆ ಬ್ಯೂಟಿಫುಲ್​ಹುಡುಗಿ ಮೇಘನಾ ಸಪ್ತಪದಿ ತುಳೀತಿದ್ದಾರೆ. ಇತ್ತೋಚೆಗಷ್ಟೇ ಸಿಂಪಲ್ಲಾಗಿ ಎಂಗೇಜ್​ ಮೆಂಟ್ ಮಾಡಿಕೊಂಡಿದ್ದ ಈ ಜೋಡಿಯ ಮೇಘಾ ಕಲ್ಯಾಣಕ್ಕೆ ಡೇಟ್​ ಫಿಕ್ಸ್ ಆಗಿದೆ.. ಈ ಬಗ್ಗೆ ರಿಪೋರ್ಟ್​ ಇಲ್ಲಿದೆ ನೋಡಿ..

ad


ಪ್ರೀತಿ ಮಾಯೆ ಅನ್ನೋದ್ರಲ್ಲಿ ಯಾವ ಡೌಟೂ ಇಲ್ಲ. ಅದ್ಯಾವ ಘಳಿಗೆಯಲ್ಲಿ ಅದ್ಯಾವ ಕಿಟಿಕಿಯಿಂದ ಈ ಪ್ರೀತಿ ಹಾರ್ಕೊಂಡು ಬರುತ್ತೋ ಗೊತ್ತಾಗಲ್ಲ. ಗಾಂಧಿನಗರದಲ್ಲೂ ಈ ಮಾಯೆಯ ಮೋಡಿ ಹೊಸತೇನಲ್ಲ. ರೀಲ್​​ನಲ್ಲಿ ಬಣ್ಣ ಹಚ್ಚಿದವರು ರಿಯಲ್​ ಲೈಫ್​​ನಲ್ಲೂ ಒಂದಾಗಿದ್ದಾರೆ. ಇದೀಗ ಸ್ಯಾಂಡಲ್​​​ವುಡ್​​​ನ ಮೊತ್ತೊಂದು ಲವ್​​ಬರ್ಡ್ಸ್​ ಚಿರು ಸರ್ಜಾ, ಹಾಗು ಮೇಘನಾ ರಾಜ್​​​​​​​​​​​​​​ ಮದುವೆ ಆಗ್ತಿದ್ದಾರೆ..
ರೀಲ್​​​ನಲ್ಲಿ ಹೀರೋ ಹೀರೋಯ್​​ನ ಸಾಕಷ್ಟು ಲವ್​​ ಮ್ಯಾರೇಜ್​​​ಗಳನ್ನು ನೋಡಿದ್ದೀವಿ. ಆದ್ರೆ ಸ್ಯಾಂಡಲ್​​​ವುಡ್​ ನಲ್ಲಿ ಈಗ ರೀಲ್​​ ಮಂದಿಯ ರಿಯಲ್ ಲವ್ ಮ್ಯಾರೇಜ್​​ಗಳ ಟ್ರೆಂಡ್​​.

ಯಶ್​​, ರಾಧಿಕಾ ಮದುವೆ ಆಗಿದೆ. ರಕ್ಷಿತ್​ ರಶ್ಮಿಕಾ ಎಂಗೇಜ್​ ಆಗಿದ್ದಾರೆ. ಈಗ ಮೇಘನಾ, ಚಿರು ಮದುವೆಗೆ ದಿನ ಲೆಕ್ಕಾ ಹಾಕುತ್ತಿದ್ದಾರೆ..ಹೌದು… ಇದೀಗ ಮತ್ತೊಂದು ಲವ್​​ಬರ್ಡ್ಸ್ ಮೆಗಾ ಕಲ್ಯಾಣಕ್ಕೆ ಸ್ಯಾಂಡಲ್​​ವುಡ್ ಸಜ್ಜಾಗ್ತಿದೆ. ಕಳೆದ ವರ್ಷ ಎಂಗೇಜ್​ಮೆಂಟ್ ಮಾಡಿಕೊಂಡಿದ್ದ ಚಿರು-ಮೇಘನಾ ಈಗ ಮದುವೆ ಭರ್ಜರಿ ತಯಾರಿ ಮಾಡ್ತಿದ್ದಾರೆ. ಯಾಕಂದ್ರೆ ಇವರಿಬ್ಬರ ಮದುವೆಗೆ ಡೇಟ್ ಫಿಕ್ಸ್ ಆಗಿದ್ದು, ಮೇ 2ರಂದು ಅದ್ಧೂರಿಯಾಗಿ ಈ ಜೋಡಿಯ ವಿವಾಹ ನಡೆಯುತ್ತೆ.. ಮೇಘನಾ ಚಿರು ಮ್ಯಾರೇಜ್​​​​​​​ ತಯಾರಿ ಸದ್ದು ಗದ್ದಲವಿಲ್ಲದೇ ನಡೆದಿದೆ. ಈಗಾಗ್ಲೆ ಎರಡು ಕುಟುಂಬದವರು ಲಗ್ನಪತ್ರಿಗೆ ಪ್ರಿಂಟ್ ಮಾಡಿಸಿದ್ದಾರೆ. ಅದ್ರಲ್ಲೂ ಮೇಘನಾ ಮಾಲಿವುಡ್​​ ಚಿತ್ರರಂಗದಲ್ಲಿ ಮೊದಲು ಗುರುತಿಸಿಕೊಂಡಿದ್ರಿಂದ ಅಲ್ಲಿನ ಗಣ್ಯಾತಿಗಣ್ಯತಿಗೆ ತಮ್ಮ ಮದುವೆ ಆಮಂತ್ರಣ ಪತ್ರಿಕೆ ಹಂಚಿದ್ದಾರೆ..

ಮೇಘನಾ ಚಿರು ತಮ್ಮ ಎಂಜೇಜ್​ಮೆಂಟ್​ಅನ್ನ ಅಂದುಕೊಂಡಂತೆ ಮಾಡಿದ್ರು. ಹಾಗೆ ಅಂದಿನಿಂದಲೂ ಮದುವೆ ತಯಾರಿಯಲ್ಲಿದ್ದ ಈ ಪ್ರೇಮಿಗಳು ತಮ್ಮ ವಿವಾಹವನ್ನ ತುಂಬಾ ವಿಶೇಷವಾಗಿ ಎಲ್ಲರ ಮನಸ್ಸಿನಲ್ಲಿ ಉಳಿಯುವಂತೆ ಆಚರಿಸೋಕೆ ತಯಾರಿ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಜೋಡಿಯ ಮ್ಯಾರೇಜ್ ತುಂಬಾ ಅದ್ಧೂರಿಯಾಗಿರುತ್ತೆ.. ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಇಬ್ಬರೂ ಕೇವಲ ಫ್ರೆಂಡ್ಸ್ ಅಲ್ಲ. ಇಬ್ಬರ ಫ್ರೆಂಡ್ ಶಿಪ್ ಎಕ್ಸ್ ಟ್ರಾ ಸ್ಪೆಷಲ್. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗುಸು ಗುಸು ಗಾಂಧಿನಗರದಲ್ಲಿ 4 ವರ್ಷದಿಂದಲೂ ಇತ್ತು. 2013ರಲ್ಲಿ ಕ್ರಿಸ್ ಮಸ್ ಹಬ್ಬಕ್ಕೆ ಮೇಘನ ಮನೆಗೆ ಹೋಗಿದ್ದ ಚಿರು ಫಸ್ಟ್​​ ಟೈಂ ಇಬ್ಬರ ಲವ್ ಸುದ್ದಿಗೆ ಶಕ್ತಿ ತುಂಬಿದ್ರು. ಚಿರು ಮೇಘನಾರನ್ನು ಸಿನಿಮಾ ಒಂದರ ಶೂಟಿಂಗ್​​ನಲ್ಲಿ ನೋಡಿದ್ರಂತೆ. ಅಲ್ಲಿ ಚಿರುಗೆ ಮೇಘನಾ ಮೇಲೆ ಮೊದಲ ಕ್ರಶ್ ಆಗಿ ಇಬ್ಬರ ಮಧ್ಯೆ ಪ್ರೇಮಾಂಕುರ ಆಗಿದೆ..


ಒಟ್ಟಿನಲ್ಲಿ ಮೂರ್ನಾಲ್ಕು ವರ್ಷಗಳ ಹಿಂದೆಯೇ ಚಿರು ಮತ್ತು ಮೇಘನಾ ಪ್ರೀತಿಯಲ್ಲಿ ಬಿದ್ದಿದ್ರು. ಇದೀಗ ಈ ಪ್ರೇಮ ಪಕ್ಷಿಗಳು ಮದುವೆಯ ಬಂದನಕ್ಕೆ ಒಳಗಾಗ್ತಿದ್ದಾರೆ. ಮೇ 2ರಂದು ಇಬ್ಬರ ಅದ್ದೂರಿ ಕಲ್ಯಾಣ ಆಗುತ್ತೆ.. ಹೀಗಾಗಿ ಎರಡು ಮನೆಯವರು ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ