ನಟಿ ಭಾವನಾ ಕೋಟೆ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿದ್ದರ ಮರ್ಮವೇನು ಗೊತ್ತಾ ? ಚಿತ್ರದುರ್ಗದ ಕಲ್ಲಿನ ಕೋಟೆಯ ರಾಜಕಾರಣ !!

Chitradurga: Actress Bhavana's Dance in Ambigara Chowdaiah Jayanti Parade.
Chitradurga: Actress Bhavana's Dance in Ambigara Chowdaiah Jayanti Parade.

ಬಾಲಭವನದ ಅಧ್ಯಕ್ಷೆಯಾಗಿದ್ದ ಖ್ಯಾತ ನಟಿ ಭಾವನ ಇಂದು ಕೋಟೆನಾಡು ಚಿತ್ರದುರ್ಗದಲ್ಲಿ ಸಖತ್ ಸ್ಟೆಪ್ ಹಾಕಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿ ಮೆರವಣಿಗೆಯಲ್ಲಿ ನಟಿ ಭಾವನಾ ಪಾಲ್ಗೊಂಡಿದ್ದರು.

ಕೋಟೆ ಬಾಗಿಲಿನಿಂದ ಶುರುವಾದ ಮೆರವಣಿಗೆಯಲ್ಲಿ ನಟಿ ಭಾವನಾ ಭರ್ಜರಿ ಡ್ಯಾನ್ಸ್ ಮಾಡಿದ್ರು. ಅದಕ್ಕೆ ಅದರದ್ದೇ ಆದ ಕಾರಣಗಳಿವೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿರುವ ನಟಿ ಭಾವನಾ ಈಗಾಗಲೇ ಸ್ಪರ್ಧೆಗೆ ವೇದಿಕೆ ಸಿದ್ದಗೊಳಿಸಿದ್ದಾರೆ. ಕಾಂಗ್ರೆಸ್ಸಿನ ಸಕ್ರೀಯ ಕಾರ್ಯಕರ್ತೆಯಾಗಿರುವ ನಟಿ ಭಾವನ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೇಳಿದ್ದಾರೆ. ಕ್ಷೇತ್ರದಲ್ಲಿ ಓಡಾಟ ನಡೆಸಿ ಕಾರ್ಯಕರ್ತರ ಜೊತೆ ಒಡನಾಟ ಇರಿಸಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ ಎನ್ನಲಾಗಿದೆ.

ಟಿಕೆಟ್ ಸಿಗಬೇಕು ಎಂದರೆ ವಿಧಾನಸಭಾ ಕ್ಷೇತ್ರದಲ್ಲಿ ಜನರ ಮಧ್ಯೆ ಗುರುತಿಸಿಕೊಳ್ಳುವುದು ನಟಿ ಭಾವನಾಗೆ ಅನಿವಾರ್ಯವಾಗಿದೆ. ಅದಕ್ಕಾಗಿ ಅಂಬಿಗರ ಚೌಡಯ್ಯ ಜಯಂತಿಯನ್ನು ನಟಿ ಭಾವನ ಯಶಸ್ವಿಯಾಗಿ ಬಳಕೆ ಮಾಡಿಕೊಂಡರು. ಕೋಟೆ ಬಾಗಿಲಿನಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಸ್ಟೆಪ್ ಹಾಕುವ ಮೂಲಕ ಜನಮನ ಗಮನ ಸೆಳೆಯುವ ಯತ್ನ ಮಾಡಿದ್ರು.