ಗ್ರಾಮಸ್ಥರನ್ನು ಲಾಠಿ ಬಳಸಿ ನಿಯಂತ್ರಿಸಿದ ಸಿಎಂ- ಇದು ಹೊಳೆನರಸಿಪುರದ ಗುರು-ಶಿಷ್ಯರ ಕಾದಾಟ !

 

ad

ಗುರುಶಿಷ್ಯರ ನಡುವಿನ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರುವ ಹಾಸನದ ಹೊಳೆನರಸೀಪುರ ಕ್ಷೇತ್ರ ಇದೀಗ ರಾಜಕೀಯ ಕಾರಣಕ್ಕಾಗಿ ರಣಾಂಗಣವಾಗಿದೆ. ಹೌದು ಮಗನನ್ನು ಕಣಕ್ಕಿಳಿಸಿರುವ ದೇವೇಗೌಡರ್ ಹಾಗೂ ಆಪ್ತನನ್ನು ಕಣಕ್ಕಿಳಿಸಿರುವ ಸಿಎಂ ಸಿದ್ಧರಾಮಯ್ಯ ಈ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿದ್ದಾರೆ. ಇದೀಗ ಸಿಎಂ ಆಪ್ತ ಮಂಜೇಗೌಡರನ್ನು ಗ್ರಾಮಕ್ಕೆ ಬರದಂತೆ ತಡೆದಿದ್ದಕ್ಕೆ ಪೊಲೀಸರು ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಸಿದ್ದು, ಚರ್ಚೆಗೆ ಕಾರಣವಾಗಿದೆ.

 

ಸಿಎಂ ಶಿಷ್ಯ ಬಾಗೂರು ಮಂಜೇಗೌಡ ನನ್ನು ಕಣ್ಣ ಗ್ರಾಮಕ್ಕೆ ಪ್ರಚಾರಕ್ಕೆ ಆಗಮಿಸಿದ್ದರು. ಈ ವೇಳೆ ಸ್ಥಳೀಯರು ಮಂಜೇಗೌಡರಿಗೆ ಗ್ರಾಮಕ್ಕೆ ಬರದಂತೆ ತಡೆದಿದ್ದರು. ಇದಕ್ಕೆ ಪ್ರತಿಕಾರವಾಗಿ ಪೊಲೀಸರು ಲಘುಲಾಠಿ ಪ್ರಚಾರ ನಡೆಸಿದ್ದು, ಮಂಜೇಗೌಡರನ್ನು ತಡೆದ ಗ್ರಾಮಸ್ಥರಿಗೆ ಮನಬಂದಂತೆ ಲಾಠಿ ಬೀಸಿದ್ದಾರೆ. ಅಲ್ಲದೇ ಗ್ರಾಮಸ್ಥರನ್ನ ಲಾಠಿಯಿಂದ ಮನಬಂದಂತೆ ಅಟ್ಟಾಡಿಸಿ ಹೊಡೆದಿದ್ದಾರೆ. ಇದರಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ನಾಲ್ಕು ಪೊಲೀಸ್ ತುಕ್ಕಡಿ ನಿಯುಕ್ತಿಗೊಳಿಸಲಾಗಿದೆ. ಈ ಕ್ಷೇತ್ರವನ್ನು ವೈಯಕ್ತಿವಾಗಿ ಸಿಎಂ ಸಿದ್ಧರಾಮಯ್ಯ ಹಾಗೂ ಅವರ ರಾಜಕೀಯ ಗುರು ಮಾಜಿಪ್ರಧಾನಿ ದೇವೆಗೌಡರು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರಿಂದಲೇ ಇದೀಗ ಗ್ರಾಮದಲ್ಲಿ ರಾಜ್ಯ ರಾಜಕಾರಣದ ಮೇಲಾಟ ಆರಂಭವಾಗಿದ್ದು, ಶಾಂತಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.