“ಕೈ” ಹಿಡಿಯೋ “ಪರಮೇಶ್ವರ” ಎಂದು ಶ್ರೀದೇವಿಯ ಮೊರೆ ಹೋದ ಎಚ್ ಡಿ ಕುಮಾರಸ್ವಾಮಿ !! ಕೊನೆಗೂ ತೆರೆದ ಸಿಎಂ ಕಚೇರಿ !!

 

ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿ ಬಹಳಷ್ಟು ದಿನಗಳಾದರೂ ಈವರೆಗೆ ವಿದಾನಸೌಧದ ಸಿಎಂ ಕಚೇರಿಯಲ್ಲಿ ಎಚ್ ಡಿ ಕೆ ಕಾರ್ಯನಿರ್ವಹಿಸಿರಲಿಲ್ಲ. ಪಂಚಾಗದ ಪ್ರಕಾರ ಗಳಿಗೆ ನೋಡಿ ಪೂಜೆ ಸಲ್ಲಿಸಿಯೇ ಒಳಪ್ರವೇಶ ಮಾಡಬೇಕು ಎಂದು ಎಚ್ ಡಿ ರೇವಣ್ಣ ಸೂಚನೆ ಹಿನ್ನಲೆಯಲ್ಲಿ ಇಂದು ಸಿಎಂ ಕಚೇರಿಯಲ್ಲಿ ವಿಶೇಷ ಪೂಜೆ ನಡೆಯಿತು.

ಗಣಪತಿ, ಪರಮೇಶ್ವರ, ಲಕ್ಷ್ಮೀ ಪೂಜೆ ನಡೆಸಿದ ಅರ್ಚಕರು, ಎಚ್ ಡಿ ಕುಮಾರಸ್ವಾಮಿಯವರಿಗೆ ಪ್ರಸಾದ ನೀಡಿದರು. ಬಳಿಕ ಎಚ್ ಡಿ ಕುಮಾರಸ್ವಾಮಿ ಕುಳಿತುಕೊಳ್ಳುವ ಸಿಎಂ ಕುರ್ಚಿಗೆ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದರು. ಪೂಜೆ ಬಳಿಕ ಮೊದಲ ಸಿಹಿಯನ್ನು ರಾಜ್ಯ ಮುಖ್ಯಕಾರ್ಯದರ್ಶಿ ರತ್ನಪ್ರಭಾರವರಿಗೆ ನೀಡಿದರು. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಕುಟುಂಭ ಭಾರೀ ದೈವ ಭಕ್ತ ಕುಟುಂಬ. ಅದರಲ್ಲೂ ಎಚ್ ಡಿ ರೇವಣ್ಣರಂತೂ ಪೂಜೆ ಪುನಸ್ಕಾರಗಳು ಇಲ್ಲದೆ, ಸಮಯ ಕೇಳದೇ ಕೆಲಸವನ್ನೇ ಮಾಡುವುದಿಲ್ಲ. ಈ ಬಾರಿ ಸಮ್ಮಿಶ್ರ ಸರಕಾರ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ ಎಂದು ಹೇಳಲಾಗುವುದರಿಂದ ಪೂಜೆ ಮತ್ತು ಪಂಚಾಗಗಳಿಲ್ಲದೆ ಸಿಎಂ ಎಚ್ ಡಿ ಕುಮಾರಸ್ವಾಮಿ ಯಾವುದನ್ನೂ ಮಾಡುತ್ತಿಲ್ಲ. ಕೊನೆಗೂ ಸಿಎಂ ಕಚೇರಿಯಲ್ಲಿ ಭರ್ಜರಿ ಪೂಜೆಗಳನ್ನು ನಿರ್ವಹಿಸಿ ಎಚ್ ಡಿ ಕುಮಾರಸ್ವಾಮಿ ಕೆಲಸ ಪ್ರಾರಂಭಿಸಿದ್ದಾರೆ.