ದೋಸ್ತಿ ಸರ್ಕಾರದಲ್ಲಿ ಕಾಂಗ್ರೆಸ್​ ಯೋಜನೆಗಳಿಗಿಲ್ಗ ಉಳಿಗಾಲ- ಸಧ್ಯದಲ್ಲೇ ಕೊನೆಗೊಳ್ಳಲಿದೆ ಮಾತೃಪೂರ್ಣ!

ad

ಮೇಲ್ನೋಟಕ್ಕೆ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ಸರ್ಕಾರದಲ್ಲಿ ಎಲ್ಲ ಸರಿಯಾಗಿದೆ ಅಂತ ಅಂದ್ಕೊಂಡ್ರು ಎಲ್ಲೋ ಒಂದು ಕಡೆ ಎಲ್ಲವೂ ಸರಿ ಇಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಹೌದು ಮಾಜಿ ಸಿಎಂ ಸಿದ್ಧರಾಮಯ್ಯನವರ ಆಜನ್ಮ ಶತ್ರು ಎಂದೇ ಬಿಂಬಿತವಾಗೋ ಕುಮಾರಸ್ವಾಮಿಯವರು ಎಲ್ಲೋ ಒಂದು ಕಡೆ ಮಾಜಿ ಸಿಎಂ ಸಿದ್ಧರಾಮಯ್ಯನವರ ಯೋಜನೆಗಳಿಗೆ ತಿಲಾಂಜಲಿ ಇಡೋ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಇದು ದೋಸ್ತಿ ಸರ್ಕಾರದ ಅಸಮಧಾನಕ್ಕೆ ಕಾರಣವಾಗ್ತಿದೆ.
ಹೌದು ಈಗಾಗಲೇ ಕಾಂಗ್ರೆಸ್ ನೇತ್ರತ್ವದ ಸರ್ಕಾರ ಆರಂಭಿಸಿದ್ದ ಹಲವು ಯೋಜನೆಗಳಿಗೆ ಸಮ್ಮಿಶ್ರ ಸರ್ಕಾರ ತಿಲಾಂಜಲಿ ನೀಡಿದೆ. ಹೀಗಿರುವಾಗಲೇ ಇದೀಗ ಕಾಂಗ್ರೆಸ್ ಸರ್ಕಾರದ ಅತ್ಯಂತ ಯಶಸ್ವಿ ಯೋಜನೆಯಾಗಿದ್ದ ಮಾತೃಪೂರ್ಣ ಯೋಜನೆಯನ್ನು ನಿಲ್ಲಿಸಲು ಕುಮಾರಸ್ವಾಮಿ ಸರ್ಕಾರ ಚಿಂತನೆ ನಡೆಸಿದೆ.

ಈ ಯೋಜನೆ ಅನ್ವಯ ತಾಯಂದಿರಲ್ಲಿ ಪೌಷ್ಠಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಸ್ತ್ರೀಯರಿಗೆ ಉಪಹಾರ ವಿತರಿಸಲಾಗುತ್ತಿತ್ತು. ಆದರೇ ಅಂಗನವಾಡಿ ಫುಡ್​​ ತಿನ್ನಲು ಗರ್ಭಿಣಿ ಸ್ತ್ರೀಯರು ಮುಂದೇ ಬರುತ್ತಿಲ್ಲ. ಅಂಗನವಾಡಿ ಆಹಾರದ ಗುಣಮಟ್ಟದ ಬಗ್ಗೆ ಊಹಾಪೋಹ ಹಾಗೂ ವಿಶ್ವಾಸ ಇಲ್ಲದೇ ಇರೋದರಿಂದ ಈ ಯೋಜನೆ ಉಪಯುಕ್ತವಾಗುತ್ತಿಲ್ಲ.
ಇತ್ತೀಚಿಗೆ ನಡೆದ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ಸಭೆಯಲ್ಲಿ ಅಧಿಕಾರಿಗಳು ಈ ವಿಚಾರವನ್ನು ಸಿಎಂ ಕುಮಾರಸ್ವಾಮಿ ಗಮನಕ್ಕೆ ತಂದಿದ್ರು. ಈ ವೇಳೆ ಏಕಾಏಕಿ ತೀರ್ಮಾನಕೈಗೊಂಡ ಸಿಎಂ ಕುಮಾರಸ್ವಾಮಿ, ನೀರಿಕ್ಷಿತ ಮಟ್ಟದಲ್ಲಿ ಯೋಜನೆ ಯಶಸ್ವಿಯಾಗದೇ ಇದ್ದಲ್ಲಿ ಯೋಜನೆ ನಿಲ್ಲಿಸಿ ಎಂದಿದ್ದಾರೆ. ಹೀಗಾಗಿ ಸಧ್ಯದಲ್ಲೇ ಯೋಚನೆ ಸ್ಥಗಿತವಾಗೋ ಮುನ್ಸೂಚನೆ ದೊರೆತಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯನವರ ಒಂದೊಂದೆ ಯೋಜನೆಗಳು ಕೊನೆಗಾಣುತ್ತಿದ್ದು, ಇದು ದೋಸ್ತಿ ಸರ್ಕಾರದ ಮೈತ್ರಿ ಮೇಲೆ ಯಾವ ಪರಿಣಾಮ ಬೀರುತ್ತೆ ಕಾದು ನೋಡಬೇಕಿದೆ.