ಗದ್ದೆಗಿಳಿದು ಭತ್ತ ನಾಟಿ ಮಾಡಿದ ಸಿಎಂ ಕುಮಾರಣ್ಣ- ಮನೆ ಮಗನಾದ ನಾಡಿನ ದೊರೆ ಕಂಡು ರೈತರ ಸಂಭ್ರಮ!

ಮಂಡ್ಯದ ಅರಳುಕುಪ್ಪೆಯ ಸೀತಾಪುರದಲ್ಲಿ ಸಿಎಂ ಕುಮಾರಸ್ವಾಮಿ ರೈತ ಕೆಂಚೇಗೌಡರ್ ಜಮೀನಿನಲ್ಲಿ ನಾಟಿ ಮಾಡುವ ಮೂಲಕ ವಿಭಿನ್ನ ಪ್ರಯತ್ನವೊಂದಕ್ಕೆ ಮುನ್ನುಡಿ ಬರೆದಿದ್ದಾರೆ. ಮಧ್ಯಾಹ್ನ 1.30 ರ ವೇಳೆಗ ಆಗಮಿಸಿದ ಸಿಎಂ 100 ಕ್ಕೂ ಹೆಚ್ಚು ಹೆಣ್ಣಾಳು ಹಾಗೂ 50 ಕ್ಕೂ ಹೆಚ್ಚು ಗಂಡಾಳುಗಳ ಜೊತೆ ಉಳುಮೆಮಾಡಲಾಗಿದ್ದ 5 ಎಕರೆ ಗದ್ದೆಯಲ್ಲಿ ಸಾಂಕೇತಿಕವಾಗಿ ನಾಟಿ ಮಾಡಿದರು.

ad

ಸಿಎಂ ಕುಮಾರಸ್ವಾಮಿ ನಾಟಿ ಕಾರ್ಯದಲ್ಲಿ ತೊಡಗುವ ಹಿನ್ನೆಲೆಯಲ್ಲಿ ಒಂದೆಡೆ ಸೀತಾಪುರ ಗ್ರಾಮ ನವವಧುವಿನಂತೆ ಕಂಗೊಳಿಸಿದ್ದರೇ, ಇನ್ನೊಂದೆಡೆ ಬಿಗಿ ಭದ್ರತೆ ಕೂಡ ಏರ್ಪಡಿಸಲಾಗಿತ್ತು. ಇಷ್ಟೇ ಅಲ್ಲ ಗದ್ದೆಯಲ್ಲಿ ಸಿಎಂ ನಾಟಿ ಮಾಡುವ ದೃಶ್ಯವನ್ನು ನೋಡಲು ಬರುವವರಿಗಾಗಿ ಎಲ್​ಇಡಿ ಸ್ಕ್ರೀನ್​ ಕೂಡ ಅಳವಡಿಸಲಾಗಿತ್ತು.

ನಾಟಿ ಆಗಮಿಸುವ ಮುನ್ನ ಗದ್ದೆಯ ತಟದಲ್ಲಿರುವ ಹೊಳೆಕೆರೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿದ ಎಚ್​ಡಿಕೆ ಪೂಜೆ ಸಲ್ಲಿಸಿ, ಬಳಿಕ ಬಿಳಿಯ ಪಂಜೆಯಲ್ಲಿ ಗದ್ದೆಗಿಳಿದರು. ಅಷ್ಟೇ ಅಲ್ಲ ನಾಟಿ ಬಳಿಕ ಸಿಎಂ ಕುಮಾರಸ್ವಾಮಿ,
ಗದ್ದೆ ಬದುವಿನಲ್ಲೇ ಕೂತು ರೈತರೊಂದಿಗೆ ಸಹಬೋಜನ ನಡೆಸಿದ್ದರು. ಅಷ್ಟೇ ಅಲ್ಲ ನಾಟಿಯಲ್ಲಿ ಪಾಲ್ಗೊಂಡಿದ್ದ ಹೆಣ್ಣುಮಕ್ಕಳಿಗೆ ಜಿಲ್ಲಾಡಳಿತದ ಪರವಾಗಿ ಸೀರೆ ವಿತರಿಸಲಾಯಿತು. ಇನ್ನು ಸಿಎಂ ಕುಮಾರಸ್ವಾಮಿ ಹಾಗೂ ಆದಿಚುಂಚನಗರಿ ಪೀಠದ ನಿರ್ಮಲಾನಂದ ಶ್ರೀಗ ಸ್ವತಃ ರೈತರಿಗೆ ಊಟ ಬಡಿಸಿದರು.

 

ಇದೇ ವೇಳೆ ಸಿಎಂ ನಾಟಿಯಲ್ಲಿ ಪಾಲ್ಗೊಳ್ಳುವ ವೇಳೆ ಕೃಷಿ ಚಟುವಟಿಕೆಯಲ್ಲಿ ಬಳಕೆಯಾಗುವ ಶೋಭಾನೆ ಪದಗಳ ಗಾಯನ ಕೂಡ ನಡೆಯಿತು, ಸಿ.ಎಸ್.ಪುಟ್ಟರಾಜು, ಅನ್ನದಾನಿ ಸೇರಿದಂತೆ ಹಲವು ಸಚಿವರು, ಮುಖಂಡರು, ಅಪಾರ ಪ್ರಮಾಣದಲ್ಲಿ ಎಚ್​ಡಿಕೆ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.