ಗಣಿನಾಡು ಬಳ್ಳಾರಿಯು ಇಂದು ಐತಿಹಾಸಿಕ ಸಮಾವೇಶಕ್ಕೆ ಸಾಕ್ಷಿಯಾಗಲಿದೆ. ಕಾಂಗ್ರೆಸ್ ಪಾದಯಾತ್ರೆ ಬಳಿಕ ರಣ ಕಹಳೆ ಮೊಳಗಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಇಂದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಬಳ್ಳಾರಿ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಧನಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಮಾವೇಶದಲ್ಲಿ ವಿವಿಧ ಯೋಜನೆಗಳ ಮೂಲಕ 3 ಲಕ್ಷ 42 ಸಾವಿರ ಜನ ಫಲಾನುಭವಿಗಳಿಗೆ ಸಾಂಕೇತಿಕ ಪತ್ರ ಹಾಗೂ ಪ್ರಮಾಣ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಲಿದ್ದಾರೆ. ಸಾಮಾಜಿಕ ಸಾಧನಾ ಸಮಾವೇಶದಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದು, 1000 ಸರ್ಕಾರಿ ಬಸ್​ಗಳ ಜತೆಗೆ 168 ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸಮಾವೇಶಕ್ಕೆ ಅನಗತ್ಯ ತೊಂದರೆ ಗಳಾಗಬಾರದೆಂದು ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಇಬ್ಬರು ಹೆಚ್ಚುವರಿ ಪೊಲೀಸ್, 13 ಮಂದಿ ಡಿವೈಎಸ್ಪಿ, 28 ಮಂದಿ ಸಿಪಿಐಗಳು, 63ಮಂದಿ ಪಿಎಸ್ಐ, 211 ಮಂದಿ ಎಎಸ್ಐ ಹಾಗೂ 1447 ಪೊಲೀಸ್​ ಪೇದೆ ಸೇರಿದಂತೆ ಹೋಮ್ ಗಾರ್ಡ್​, ಕೆಎಸ್​ಆರ್​ಪಿ ತುಕಡಿಯನ್ನು ನಿಯೋಜಿಸಲಾಗಿದೆ.ಇನ್ನೂ ನಗರದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಆಳವಡಿಸಲಾಗಿದೆ.
=========
ಬೈಟ್​ : ಸಂತೋಷ್ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ.
ಬೈಟ್​ : ಡಾ,ರಾಮ್ ಪ್ರಸಾತ್ ಮನೋಹರ್,ಜಿಲ್ಲಾಧಿಕಾರಿ
=========

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here