ಸಿಎಂ ಸಿದ್ದರಾಮಯ್ಯ ಇವತ್ತು ಸಿಟಿ ರೌಂಡ್ಸ್ ನಡೆಸಿದ್ರು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಗೃಹ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಪದ್ಮಾವತಿ ಸೇರಿದಂತೆ ಶಾಸಕರು, ಅಧಿಕಾರಿಗಳು ಮುಖ್ಯಮಂತ್ರಿಗೆ ಸಾಥ್​ ನೀಡಿದ್ರು. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳು ಹಾಗೂ ನೀರುಗಾಲುವೆ ಕಾಮಗಾರಿಗಳನ್ನು ಸಿಎಂ ವೀಕ್ಷಿಸಿದ್ರು.
===
ಶಾಂತಿನಗರ ಬಿಎಂಟಿಸಿ ವರ್ಕ್ ಶಾಪ್, ಜೆಸಿ ರಸ್ತೆಯ ಕುಂಬಾರ ಗುಂಡಿ, ಹೆಚ್ ಎಸ್ ಆರ್ ಲೇಔಟ್​ಗೆ ತೆರಳಿ ಮಳೆಹಾನಿ ಹಾಗು ಕಾಮಗಾರಿ ವಿಕ್ಷಣೆ ಮಾಡಿದ್ರು.
===
ಕಳೆದ ಬಾರಿ ಮಳೆಯಿಂದ ಹಾನಿಗೊಳಗಾಗಿದ್ದ ಶಾಂತಿನಗರ ಬಿಎಂಟಿಸಿ ವರ್ಕ್ ಶಾಪ್ ಗೆ ಭೇಟಿ ನೀಡಿದ ಸಿಎಂ, ಪರಿಶೀಲನೆ ನಡೆಸಿದ್ರು.
====
ಬಳಿಕ ಹೆಚ್‌ಎಸ್‌ಆರ್ ಲೇ ಔಟ್ ಐದನೇ ಮೈನ್​ಗೆ ಭೇಟಿನೀಡಿ ರಾಜಕಾಲುವೆ ಕಾಮಗಾರಿ ವೀಕ್ಷಣೆ ಮಾಡಿದ್ರು.ಇಲ್ಲಿ ಆರು ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿರುವ 1.25 ಕಿಮೀ ಕಾಮಕಾರಿ ವೀಕ್ಷಿಸಿದ್ರು.
ಶಾಸಕ ಸತೀಶ್ ರೆಡ್ಡಿ ಅವರಿಂದ ಕಾಮಗಾರಿಗಳ ಬಗ್ಗೆ ಸಿಎಂ ಮಾಹಿತಿ ಪಡೆದ್ರು.
====
ಮಳೆಯಿಂದ ಸಾಕಷ್ಟು ಹಾನಿಯಾಗಿದೆ, ಹೀಗಾಗಿ ಹೆಚ್ಚಿನ ಅನುದಾನ ನೀಡಬೇಕೆಂದು ಹೆಚ್ಎಸ್ ಆರ್ ಲೇ ಔಟ್ ನ ಮಹಿಳೆಯರು ಮನವಿ ಸಲ್ಲಿಸಿದ್ರು.
====
ಸಿಎಂಗೆ ಕೆ.ಜೆ.ಜಾರ್ಜ್, ಗೃಹ ಸಚಿವ ರಾಮಲಿಂಗಾರೆಡ್ಡಿ ಸಾಥ್​

ಮಳೆ ಹಾನಿ ಪ್ರದೇಶ, ನೀರುಗಾಲುವೆ ಕಾಮಗಾರಿಗಳನ್ನು ವೀಕ್ಷಣೆ
ಹೆಚ್‌ಎಸ್‌ಆರ್ ಲೇಔಟ್ ರಾಜಕಾಲುವೆ ಕಾಮಗಾರಿ ವೀಕ್ಷಣೆ
6 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ 1.25 ಕಿಮೀ ಕಾಮಕಾರಿ
ಕಾಮಗಾರಿಗಳ ಬಗ್ಗೆ ಸಿಎಂ ಮಾಹಿತಿ ನೀಡಿದ ಶಾಸಕ ಸತೀಶ್ ರೆಡ್ಡಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here