ಕರ್ನಾಟಕದ ಸಿದ್ಧರಾಮಯ್ಯ ದೇಶದ 6 ನೇ ಶ್ರೀಮಂತ ಸಿಎಂ!!

ಸಿಎಂ ಸಿದ್ದರಾಮಯ್ಯ ದೇಶದ 6ನೇ ಶ್ರೀಮಂತ ಸಿಎಂ. ಅಧ್ಯಯನವೊಂದರಲ್ಲಿ ಈ ಸಂಗತಿ ಬೆಳಕಿಗೆ ಬಂದಿದ್ದು, ಸಿದ್ದು ಬಳಿ ಬರೋಬ್ಬರಿ 13 ಕೋಟಿ ರೂಪಾಯಿ ಆಸ್ತಿ ಇದೆಯಂತೆ. ಇನ್ನು 177 ಕೋಟಿ ಆಸ್ತಿ ಒಡೆಯ ಚಂದ್ರಬಾಬು ನಾಯ್ಡು ಮೊದಲ ಶ್ರೀಮಂತ ಸಿಎಂ ಆಗಿದ್ದು, ಅರುಣಾಚಲ ಸಿಎಂ ಪೆಮಾ ಖಂಡು ಎರಡನೇ ಶ್ರೀಮಂತ ಸಿಎಂ ಆಗಿದ್ದಾರೆ. ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್​​ನಲ್ಲಿ ಈ ವಿವರಗಳು ಲಭ್ಯವಾಗಿದೆ.

31 ರಾಜ್ಯಗಳ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾಮ್್ಸರ್ ಸಂಸ್ಥೆ (ಎಡಿಆರ್) ಬಿಡುಗಡೆ ಮಾಡಿದ್ದು, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅತಿ ಶ್ರೀಮಂತರು ಎಂದು ವರದಿ ಹೇಳಿದೆ. -ಠಿ; 177 ಕೋಟಿ ಅಧಿಕ ಮೊತ್ತದ ಸ್ವತ್ತಿನ ಒಡೆಯರಾದ ನಾಯ್ಡು ಅಗ್ರಸ್ಥಾನದಲ್ಲಿದ್ದಾರೆ. 129 ಕೋಟಿಗೂ ಅಧಿಕ ಮೊತ್ತದ ಆಸ್ತಿಯೊಂದಿಗೆ ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು 2ನೇ ಸ್ಥಾನ ದಲ್ಲಿದ್ದರೆ, 48 ಕೋಟಿಗೂ ಅಧಿಕ ಆಸ್ತಿಯೊಂದಿಗೆ ಪಂಜಾಬ್ ಸಿಎಂ ಅಮ ರಿಂದರ್ ಸಿಂಗ್ 3ನೇ ಸ್ಥಾನ ಪಡೆದಿದ್ದಾರೆ. ಕರ್ನಾಟಕ ಸಿಎಂ ಸಿದ್ದರಾಮಯ್ಯ 6ನೇ ಸ್ಥಾನದಲ್ಲಿದ್ದು ಒಟ್ಟಾರೆ 13,61,24,398 ಮೊತ್ತದ ಆಸ್ತಿ ಹೊಂದಿದ್ದಾರೆ.

26,83,195 ಮೊತ್ತದ ಆಸ್ತಿ ಹೊಂದುವ ಮೂಲಕ ತ್ರಿಪುರಾ ಸಿಎಂ ಮಾಣಿಕ್ ಸರ್ಕಾರ ಕೊನೆಯ ಸ್ಥಾನದಲ್ಲಿದ್ದಾರೆ. ಸರ್ಕಾರ್ ಮತ್ತು ನಾಗಾಲ್ಯಾಂಡ್ ಸಿಎಂ ಟಿ.ಆರ್. ಝಿಲಿಯಾಂಗ್ ಪಾನ್ ಕಾರ್ಡ್ ಸಲ್ಲಿಕೆ ಮಾಡಿಲ್ಲ. 11 ಸಿಎಂಗಳ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಎಡಿಆರ್ ವರದಿ ತಿಳಿಸಿದೆ. 31 ಮುಖ್ಯಮಂತ್ರಿಗಳು ಘೋಷಿಸಿರುವ ಆಸ್ತಿ ದಾಖಲೆಗಳನ್ನು ಆಧರಿಸಿ ಎಡಿಆರ್ ಈ ವರದಿ ಸಿದ್ಧಪಡಿಸಿದೆ. ಇನ್ನು 31 ಮುಖ್ಯಮಂತ್ರಿಗಳ ಪೈಕಿ 25 ಮುಖ್ಯಮಂತ್ರಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಚಂದ್ರಬಾಬು ನಾಯ್ಡು ಅವರು 177 ಕೋಟಿ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. 129 ಕೋಟಿ ಆಸ್ತಿ ಹೊಂದಿರುವ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಾಂಡು ಎರಡನೇ ಸ್ಥಾನ. 48 ಕೋಟಿ ಆಸ್ತಿ ಹೊಂದಿರುವ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಮೂರನೇ ಸ್ಥಾನದಲ್ಲಿದ್ದಾರೆ.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here